ಪ್ರಧಾನಮಂತ್ರಿ ಭೇಟಿಯಲ್ಲಿ ಭದ್ರತಾ ಲೋಪ: ದ ಕ ಜಿಲ್ಲಾ ಬಿಜೆಪಿಗೆ ಸಂಕಷ್ಟ

 ದಕ್ಷಿಣ ಕನ್ನಡದ ಬಿಜೆಪಿ ಘಟಕವು, ಆಂತರಿಕ ವಿರೋಧಗಳಿಂದ ಪರದಾಡುತ್ತಿದ್ದು, ಈ ವಿಚಾರ ಈಗ ರಾಷ್ಟ್ರೀಯ ಭದ್ರತೆಯ ಅಂಗಳದಲ್ಲಿ ಬಹಿರಂಗವಾಗಿದೆ.

ನೇರಾನೇರ * ಬಿವಿಸೀ

ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಪುತ್ತೂರು ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಪತ್ನಿ ಪ್ರಧಾನಿ ಸೆಕ್ಯುರಿಟಿ ವಲಯದ ಒಳಗೆ ಪ್ರವೇಶಿಸಿರುವುದು ಗಂಭೀರ ಭದ್ರತಾ ಲೋಪವಾಗಿದ್ದು, ಇದು ಪಕ್ಷದೊಳಗಿನ ಜಗಳವನ್ನೂ ಮೀರಿ, ಬಿಜೆಪಿಯ ದಕ್ಷಿಣ ಕನ್ನಡ ಘಟಕದ ಪಾಲಿಗೆ ರಾಜಕೀಯ ಮುಜುಗರ ಉಂಟುಮಾಡಿದೆ. ಈ ಮುಜುಗರವನ್ನು ಸತ್ಯ ಹೇಳುವುದರ ಮುಖೇನ ಪಕ್ಷಕ್ಕೆ ಸಾಧ್ಯವಾಗದಿರುವುದು ಕೇಸರಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇಲ್ಲಿ ಎರಡು ರೀತಿಯ ನಿರೂಪಣೆಗಳು ಕೇಳಿಬರುತ್ತಿವೆ. ಪಕ್ಷದ ಒಂದು ಬಣವು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕಂಪಲ ಅವರನ್ನು ಬೆಂಬಲಿಸುತ್ತಿದ್ದು, ಎಂಎಲ್‍ಸಿ ಪತ್ನಿಗೆ ಪ್ರಧಾನಮಂತ್ರಿಯ ಸ್ವಾಗತಕ್ಕೆ ಅವಕಾಶ ನೀಡುವುದರಲ್ಲಿ ತಪ್ಪೇನೂ ಇಲ್ಲ ಎಂದು ವಾದಿಸುತ್ತಿದ್ದರೆ, ಮತ್ತೊಂದೆಡೆ ಅವರ ಪ್ರತಿಸ್ಪರ್ಧಿ ಅರುಣ್ ಕುಮಾರ್ ಪುತ್ತಿಲ ಬಣವು, ಆಕೆ ಪ್ರಧಾನಿಗಳ ಭದ್ರತಾ ವೃತ್ತವನ್ನು ಪ್ರವೇಶಿಸಲು ಅನುಕೂಲ ಮಾಡಲೆಂದೇ ವಿಶೇಷವಾದ ಹುದ್ದೆಯನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದು ಆಂತರಿಕ ರಾಜಕೀಯವನ್ನೂ ಮೀರಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಪುತ್ತಿಲ ಬಣದ ವಾದವು ಸತ್ಯವೇ ಆದರೆ, ಇದು ಕೇವಲ ಔದಾರ್ಯ ಅಥವಾ ಹುದ್ದೆಯ ಪ್ರಶ್ನೆಯಾಗುವುದಿಲ್ಲ. ಬದಲಾಗಿ ಪ್ರಧಾನಮಂತ್ರಿಗಳ ಭದ್ರತೆಯ ನಿಯಮಗಳನ್ನು ಉದ್ದೇಶಪೂರ್ವಕವಾಗಿ ದುರುಪಯೋಗಪಡಿಸಿಕೊಂಡ ಗಂಭೀರ ಪ್ರಮಾದವಾಗುತ್ತದೆ. ಜಿಲ್ಲಾ ಅಧ್ಯಕ್ಷರ ವಾದವು ನಿಜವೇ ಆದರೆ, ಭಾರತದ ಅತ್ಯಂತ ಹೆಚ್ಚು ಭದ್ರತಾ ಸೌಲಭ್ಯ ಪಡೆದಿರುವ ಸಾರ್ವಜನಿಕ ವ್ಯಕ್ತಿಯ ರಕ್ಷಣೆಯನ್ನು ಅಲಕ್ಷ್ಯ ಮಾಡಿದಂತಾಗುತ್ತದೆ. ಎರಡೂ ಸಾಧ್ಯತೆಗಳು ಸಮಸ್ಯಾತ್ಮಕವಾಗಿವೆ.

ಸ್ವತಂತ್ರ ವೀಕ್ಷಕರು ಒಂದು ಮಹತ್ತರವಾದ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ಎಂಎಲ್‍ಸಿ ಪತ್ನಿ ತಮ್ಮ ಹುದ್ದೆಯನ್ನು ತಪ್ಪಾಗಿ ಪ್ರತಿನಿಧಿಸಿ ಭದ್ರತಾ ಇಲಾಖೆಗೆ ಸುಳ್ಳು ಹೇಳಿ, ಪ್ರಧಾನಮಂತ್ರಿಗಳ ಬಳಿಗೆ ಹೋಗಿದ್ದಾರೆಯೇ? ಹಾಗಾದಲ್ಲಿ ಈ ಉಪಸ್ಥಿತಿಯನ್ನು ಅನುಮತಿಸಿದವರು ಯಾರು? ಸೂಕ್ತ ಅನುಮತಿಯನ್ನು ಪಡೆಯಲಾಗಿತ್ತೇ? ಸ್ಥಳೀಯ ಪೆÇಲೀಸರು, ಎಸ್‍ಪಿಜಿ ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಇದಕ್ಕೆ ಅನುಮತಿ ನೀಡಿದ್ದರೇ? ಈ ಪ್ರಶ್ನೆಗಳು ಕೇಳಿಬರುತ್ತಿವೆ.

ಈ ಯಾವುದೇ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಅಧಿಕೃತ ತನಿಖೆಯು ನಡೆಯುತ್ತಿರುವ ಮಾಹಿತಿ ಲಭ್ಯವಾಗಿದ್ದು, ಇಂತಹ ಗಂಭೀರ ಲೋಪವನ್ನು ಹೇಗೆ ಅಧಿಕಾರಶಾಹಿಯ ಮಟ್ಟದಲ್ಲಿ ಪರಿಗಣಿಸಲಾಗುತ್ತಿದೆ, ಪಕ್ಷದ ನಾಯಕತ್ವ ಹೇಗೆ ನುಣುಚಿಕೊಳ್ಳುತ್ತಿದೆ ಎಂಬ ಪ್ರಶ್ನೆ ಎದುರಾಗಿದೆ.

ಈ ವಾದ ವಿವಾದಗಳು, ಸಾಧಾರಣ ಪಕ್ಷದ ಕಾರ್ಯಕರ್ತನೊಬ್ಬ ಪ್ರಧಾನಮಂತ್ರಿಯನ್ನು ಅಭಿನಂದಿಸಲು ಸಾಲಿನಲ್ಲಿ ನಿಲ್ಲಲು ಸಾಧ್ಯವೇ ಎಂಬ ಪ್ರಶ್ನೆಗಿಂತಲೂ, ಪ್ರಧಾನಮಂತ್ರಿಯನ್ನು ರಕ್ಷಿಸಲು ಇರುವಂತಹ ಕಠಿಣ ನಿಯಮಗಳನ್ನು ಉಲ್ಲಂಘಿಸಿ, ವೈಯುಕ್ತಿಕ ಹಿರಿಮೆ ಅಥವಾ ರಾಜಕೀಯ ಲಾಭ ಗಳಿಸಲು ಬಳಸಿಕೊಳ್ಳಲಾಯಿತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಿಜೆಪಿ ಮತ್ತೆ ಮತ್ತೆ ಪಕ್ಷವು ಶಿಸ್ತು, ಸಂರಚನೆ ಮತ್ತು ಸಾಂಘಿಕ ಸಂಸ್ಕøತಿಗೆ ಬದ್ಧವಾಗಿದೆ ಎಂದು ಹೇಳಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ ಭದ್ರತಾ ವ್ಯವಸ್ಥೆಯ ಲೋಪವನ್ನು ಕೇವಲ ಆಶ್ವಾಸನೆಗಳ ಮೂಲಕ ನಿರ್ಲಕ್ಷಿಸಲಾಗುವುದಿಲ್ಲ.

ಜಿಲ್ಲಾ ಅಧ್ಯಕ್ಷ ಸತೀಶ್ ಕಂಪಲ ಅವರ ಹೇಳಿಕೆಗಳು ಅಸಮರ್ಪಕವಾಗಿದ್ದು, ನುಣುಚಿಕೊಳ್ಳುವಂತಿದೆ. ಆಂತರಿಕವಾಗಿ ಹಾಗೂ ಸಾಮಾನ್ಯ ನಾಗರಿಕರಲ್ಲಿ ಪಕ್ಷದ ಮೇಲೆ ವಿಶ್ವಾಸವನ್ನು ಉಳಿಸಿಕೊಳ್ಳುವುದೇ ಆದರೆ, ಈ ಪ್ರಸಂಗದ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಮುಖ್ಯವಾಗಿ, ಬಿಜೆಪಿ ನಾಯಕತ್ವವು, ಅಗತ್ಯವಾದಲ್ಲಿ, ಕೇಂದ್ರ ಗೃಹ ಸಚಿವರು ಈ ಪ್ರಕ್ರಿಯೆಯ ವಿವರಗಳನ್ನು ಜನರ ಮುಂದಿಡಬೇಕು. ಭದ್ರತಾ ಲೋಪ ಎಷ್ಟೇ ಸಣ್ಣ ಪ್ರಮಾಣದ್ದಾದರೂ, ಇದನ್ನು ಪಕ್ಷದ ಆಂತರಿಕ ಬಣಸಂಘರ್ಷ ಎಂದು ನಿರ್ಲಕ್ಷಿಸಲಾಗುವುದಿಲ್ಲ.

ದಕ್ಷಿಣ ಕನ್ನಡದ ಬಿಜೆಪಿ ಘಟಕವು, ಆಂತರಿಕ ವಿರೋಧಗಳಿಂದ ಪರದಾಡುತಿದ್ದು, ಈ ವಿಚಾರ ಈಗ ರಾಷ್ಟ್ರೀಯ ಭದ್ರತೆಯ ಅಂಗಳದಲ್ಲಿ ಬಹಿರಂಗವಾಗಿದೆ. ಪಕ್ಷವು ಇದನ್ನು ಶೀಘ್ರದಲ್ಲೇ ಪರಿಹರಿಸದಿದ್ದರೆ, ಪಾರದರ್ಶಕವಾಗಿ ನಿರ್ವಹಿಸದೆ ಹೋದರೆ, ಇದು ರಾಜಕೀಯವಾಗಿ ಮುಜುಗರವಾಗುವುದಷ್ಟೇ ಅಲ್ಲದೆ, ಪ್ರಧಾನಮಂತ್ರಿಯ ಭದ್ರತೆಗಾಗಿ ರೂಪಿಸಿರುವ ನಿಯಮಗಳನ್ನು ಕಡೆಗಣಿಸಿದಂತಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again