ಧರ್ಮಸ್ಥಳದಲ್ಲಿ ಪದ್ಮಲತಾ ಕೊಲೆ: ಮರೆತುಹೋದ ಒಂದು ದುರಂತ

ಪದ್ಮಲತಾಳ ದುರಂತ ಕತೆ ಕೇವಲ ನೆನಪಾಗಿ ಉಳಿಯಕೂಡದು, ಈ ಪ್ರಕರಣದ ಕಡತವನ್ನು ಮತ್ತೆ ತೆಗೆದು, ಮರುಪರಿಶೀಲನೆಗೊಳಪಡಿಸಿ, ಬಗೆಹರಿಸಬೇಕು.


1986ರ ಮುಂಗಾರು ಮಾಸಗಳಲ್ಲಿ ರಾಜ್ಯದ ಉಜಿರೆ ಎಂಬ ಹೆಚ್ಚು ಸುದ್ದಿ ಮಾಡದ ಊರು, ಪದ್ಮಲತಾ ಎಂಬ ಯುವ ವಿದ್ಯಾರ್ಥಿನಿ ಕಣ್ಮರೆಯಾದ ಘಟನೆಯಿಂದ ಆಘಾತಕ್ಕೊಳಗಾಗಿತ್ತು. ಪದ್ಮಲತಾ ಒಬ್ಬ ಕಮ್ಯುನಿಸ್ಟ್ ಬೆಂಬಲಿಗ, ರೈತನ ಮಗಳಾಗಿದ್ದಳು. ಕೆಲವು ದಿನಗಳ ಜನಾಕ್ರೋಶ ಕ್ರಮೇಣವಾಗಿ ಭೀಕರ ಘಟನೆಗೆ ಸಾಕ್ಷಿಯಾಗಿತ್ತು. ಕಣ್ಮರೆಯಾದ 56 ದಿನಗಳ ಅನಂತರ ಪದ್ಮಲತಾಳ ದೇಹ ನಿಡ್ಲೆÉ ನಾಲೆಯಲ್ಲಿ ದೊರೆತಿತ್ತು. ಬೆತ್ತಲೆಯಾದ, ಕೈ ಕಾಲುಗಳನ್ನು ಕಟ್ಟಿಹಾಕಿದ, ವಿವಸ್ತ್ರ ಸ್ಥಿತಿಯಲ್ಲಿ ಶವ ದೊರೆತಿತ್ತು. ಈ ಹತ್ಯೆ ಒಂದು ಅಪಘಾತವಲ್ಲ ಎಂದು ಸ್ಥಳೀಯ ಜನರಿಗೆ ಖಚಿತವಾಗಿತ್ತು. ಲೈಂಗಿಕ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿದ ಘಟನೆಯನ್ನುವುದು ಎಲ್ಲರಿಗೂ ಮನದಟ್ಟಾಗಿತ್ತು.

ಆ ದಿನದಂದು ಮಧ್ಯಾಹ್ನ, ಪದ್ಮಲತಾ ತನ್ನ ಕಾಲೇಜಿನಿಂದ ಮನೆಗೆ ಹೊರಡಲು ಬಸ್ ಹತ್ತಿದ್ದಳು. ಆಕೆಯನ್ನು ಸಹ ಪ್ರಯಾಣಿಕರು ಉಜಿರೆಯ ಬಸ್ ನಿಲ್ದಾಣದಲ್ಲಿ ಕಂಡಿದ್ದರು. ಆದರೆ ಆಕೆ ಮರಳಿ ಮನೆಗೆ ತಲುಪಲೇ ಇಲ್ಲ. ಆಕೆಯ ಕುಟುಂಬ ಮತ್ತು ಸಹಪಾಠಿಗಳು ಊರೆಲ್ಲಾ ಹುಡುಕಾಡಿದರು. 56 ದಿನಗಳು ಕಳೆದ ಮೇಲೆ, ಆಕೆಯ ಬೆತ್ತಲೆ ದೇಹ ನಿಡ್ಲೆ ನಾಲೆಯಲ್ಲಿ ಸಿಕ್ಕಿತ್ತು. ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಮೈಮೇಲೆ ವಸ್ತ್ರ ಇರಲಿಲ್ಲ.

ಈ ಘಟನೆಯ ವಿವರಗಳು 2012ರ ಸೌಜನ್ಯ ಪ್ರಕರಣವನ್ನೇ ಹೋಲುತ್ತವೆ. ಸೌಜನ್ಯ ಸಹ ಕಾಲೇಜಿನಿಂದ ಮನೆಗೆ ಹೋಗುವ ದಾರಿಯಲ್ಲಿ ಅಪಹರಿಸಲ್ಪಟ್ಟು, ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ನತದೃಷ್ಟೆಯಾಗಿದ್ದಳು. ಆಕೆಯ ಶವ ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ದೊರೆತಿತ್ತು.

ಪದ್ಮಲತಾಳ ಕೊಲೆ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿತ್ತು. ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ನಾಗರಿಕ ಸಮಾಜದ ನಾಯಕರು, ಜಿಲ್ಲೆಯ ವಿವಿಧೆಡೆಗಳಿಂದ ಬಂದ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಾರ್ವಜನಿಕರ ಈ ಒತ್ತಡಕ್ಕೆ ಮಣಿದು ಗೃಹ ಸಚಿವರಾಗಿದ್ದ ಎನ್ ರಾಚಯ್ಯ ಪದ್ಮಲತಾಳ ಮನೆಗೆ ಭೇಟಿ ನೀಡಿದ್ದರು. ಸಿಐಡಿ ತನಿಖಾ ತಂಡವನ್ನು ನೇಮಿಸಲಾಯಿತು, ಆದರೆ ಅದರ ಫಲಿತಾಂಶ ಇನ್ನೂ ಆಘಾತಕಾರಿಯಾಗಿತ್ತು. `ಪ್ರಕರಣ ಪತ್ತೆಯಾಗಿಲ್ಲ' ಎಂದು ಅಂತಿಮ ವರದಿ ಬಂತು. ಯಾವುದೇ ವಿವರಣೆಗಳನ್ನು ನೀಡಲಿಲ್ಲ, ದುಷ್ಕರ್ಮಿಗಳ ಬಂಧನಗಳಿಗೆ ಮುಂದಾಗಲಿಲ್ಲ, ನೀರವ ಮೌನ ಆವರಿಸಿತ್ತು.

ಈಗ ನಾಲ್ಕು ದಶಕಗಳ ಅನಂತರ ಉಜಿರೆಯ ಜನಪ್ರಿಯ ಕಮ್ಯುನಿಸ್ಟ್ ನಾಯಕ ವಿಷ್ಣುಮೂರ್ತಿ ಭಟ್, ಈ ಘಟನೆಯ ಸಂಪೂರ್ಣ ವಿವರಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ. ಇತ್ತೀಚಿನ ವಿಡಿಯೋ ಒಂದರಲ್ಲಿ ಭಟ್ ಅವರು ಪದ್ಮಲತಾಳ ಕೊಲೆ ಪ್ರಕರಣದ ಸಮಯ ಮತ್ತು ಗಳಿಗೆಗಳನ್ನು ನೀಡಿದ್ದು, ಈ ಪ್ರಕರಣವನ್ನು ಧರ್ಮಸ್ಥಳ-ಉಜಿರೆ-ಬೆಳ್ತಂಗಡಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ನಾಪತ್ತೆಯಾಗುವ, ಹತ್ಯೆಯಾಗುವ ಮಹಿಳೆಯರ ಪ್ರಕರಣಗಳ ವಿಶಾಲ ನೆಲೆಯಲ್ಲಿ ವಿವರಿಸಿದ್ದಾರೆ. ಭಟ್ ಅವರು, ಪದ್ಮಲತಾ ಈ ಸರಣಿಯಲ್ಲಿ ಪ್ರಪ್ರಥಮ ಬಲಿಯಾಗಿದ್ದಳು ಎಂದು ಆರೋಪಿಸುವುದೇ ಅಲ್ಲದೆ, ಮೌನ ಮತ್ತು ಪ್ರಭಾವಗಳ ನಡುವೆ ಇಂತಹ ಘಟನೆಗಳು ಬಹಳ ಕಾಲದಿಂದ, ಉದ್ದೇಶಪೂರ್ವಕ ಮಾದರಿಯಲ್ಲಿ ನಡೆಯುತ್ತಿರುವುದನ್ನೂ ಹೇಳಿದ್ದಾರೆ.

ಈಗ ಸಾಮೂಹಿಕ ಅಂತ್ಯಸಂಸ್ಕಾರಗಳ, ಸಮಾಧಿಗಳ ಆರೋಪಗಳನ್ನು ತನಿಖೆಗೊಳಪಡಿಸಲು ವಿಶೇಷ ತನಿಖಾ ದಳವನ್ನು (ಎಸ್‍ಐಟಿ) ರಚಿಸಲಾಗಿದ್ದು, ಈ ಆರೋಪಗಳಲ್ಲಿ ನೂರಾರು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿ, ಹತ್ಯೆಗೀಡಾಗಿ, ರಹಸ್ಯವಾಗಿ ಹೂತುಹಾಕಿರುವ ಘಟನೆಗಳು ಅಡಕವಾಗಿವೆ. ಪದ್ಮಲತಾಳ ಹಿತಾಕಾಂಕ್ಷಿಗಳು ಆಕೆಯ ಪ್ರಕರಣವನ್ನೂ ಎಸ್‍ಐಟಿ ವ್ಯಾಪ್ತಿಗೆ ಒಳಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.

ಸಿಐಡಿ ಏಕೆ ಈ ಘಟನೆಯಲ್ಲಿ ಆಕೆಯ ಹತ್ಯೆಯನ್ನು ನಿರಾಕರಿಸಿತ್ತು? ಈ ಶಿಕ್ಷಾ ಭೀತಿ ಇಲ್ಲದ ವಾತಾವರಣಕ್ಕೆ ಅವಕಾಶ ಕಲ್ಪಿಸಿದವರಾರು?

ಈ ಪ್ರಶ್ನೆಗಳಿಗೆ ಈಗ ಉತ್ತರಿಸಬೇಕಿದೆ. ಪದ್ಮಲತಾಳ ದುರಂತ ಕತೆ ಕೇವಲ ನೆನಪಾಗಿ ಉಳಿಯಕೂಡದು, ಈ ಪ್ರಕರಣದ ಕಡತವನ್ನು ಮತ್ತೆ ತೆಗೆದು, ಮರುಪರಿಶೀಲನೆಗೊಳಪಡಿಸಿ, ಬಗೆಹರಿಸಬೇಕು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again