ತಾನೊಂದು ಬಗೆದರೆ, ದೈವ ಬಗೆದಿದ್ದೇ ಬೇರೆ!
ತಮ್ಮ ಪ್ರಮಾದಗಳನ್ನು ಕಷ್ಟಪಟ್ಟು ನುಂಗಿಕೊಳ್ಳಬೇಕಾದ ಡಿಸಿಎಂ ಡಿಕೆಶಿ ಮತ್ತು ಗೃಹಮಂತ್ರಿ ಪರಮೇಶ್ವರ
ಪ್ರಚಲಿತ * ಬಿವಿಸೀ
ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸುತ್ತ ಸಾರ್ವಜನಿಕರ ಆಕ್ರೋಶ ಕಡಿಮೆಯಾಗದೆ ಇದ್ದರೂ ಸಹ ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ್ ವಾಸ್ತವತೆಗಳಿಗಿಂತಲೂ ವೈಯುಕ್ತಿಕ ಅಪೇಕ್ಷೆಗಳಿಗೆ ಮೊರೆ ಹೋಗಿದ್ದಾರೆ. `ಸೌಜನ್ಯಗೆ ನ್ಯಾಯ' ಆಂದೋಳನ ತೀವ್ರವಾಗಿರುವಾಗಲೇ ``ಸೌಜನ್ಯ ಪ್ರಕರಣವು ಮುಗಿದ ಅಧ್ಯಾಯ'' ಎಂದು ಹೇಳುವ ಮೂಲಕ ಪರಮೇಶ್ವರ್ ಈ ಮೊಕದ್ದಮೆಯನ್ನು ಪುನಃ ತೆರೆಯುವ ಅವಶ್ಯಕತೆ ಇಲ್ಲ ಎಂದು ಹೇಳಿ ವಿವಾಕ್ಕೀಡಾಗಿದ್ದರು. ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಆದ ಶೈಲಿಯಲ್ಲಿ ಧರ್ಮಸ್ಥಳದ ವಿರುದ್ಧ ಮಾಡಲಾಗುತ್ತಿರುವ ಆರೋಪಗಳನ್ನು `ಷಡ್ಯಂತ್ರ ಎಂದು ಬಣ್ಣಿಸಿ ತಾವೇ ಸ್ವತಃ ಟೀಕೆ ಮತ್ತು ಭರ್ತ್ಸನೆಗೆ ಈಡಾಗಿದ್ದರು. ಈ ಇಬ್ಬರು ಮಹಿಮರ ಪ್ರತಿಕ್ರಿಯೆಗಳು ದೇವಾಲಯದ ಆಡಳಿತ ಮಂಡಳಿಗೆ ಒತ್ತಾಸೆಯಾಗಿ ನಿಂತಿರುವ ಸೂಚನೆಯಾಗಿದ್ದವು. ಈ ಹೇಳಿಕೆಗಳು ಸಾಧಾರಣ ಮಾತುಗಳಲ್ಲ, ಹಲವು ವರ್ಷಗಳ ಕಾಲ ನ್ಯಾಯವನ್ನು ನಿರಾಕರಿಸಿರುವ ಸರ್ಕಾರದ ಧೋರಣೆಯ ಸಂಕೇತವಾಗಿತ್ತು.
ಈ ರಾಜಕೀಯ ಅನಿಶ್ಚಿತತೆಗಳನ್ನು ನಿರಾಕರಿಸುವ ರೀತಿಯಲ್ಲಿ ಎಂದು ಇತ್ತೀಚೆಗೆ ಕರ್ನಾಟಕದ ಹೈಕೋರ್ಟ್ ತನ್ನ ಆದೇಶದ ಮೂಲಕ ಸ್ಪಷ್ಟಪಡಿಸಿದೆ. ಕಳೆದ ಎರಡು ದಶಕಗಳಲ್ಲಿ ಕ್ರೋಢೀಕರಿಸಿರುವ 74 ಅಸಹಜ ಸಾವುಗಳ ಸಂಪೂರ್ಣ ವಿವರಗಳನ್ನು, ಸೌಜನ್ಯ ಪ್ರಕರಣದ ವಿವರಗಳನ್ನು ಸಲ್ಲಿಸುವಂತೆ ಕೋರ್ಟ್ ಅದೇಶಿಸಿದ್ದು ತನ್ಮೂಲಕ ಆಡಳಿತ ಪಕ್ಷದ ಪವರ್‍ಫುಲ್ ರಾಜಕಾರಣಿಗಳ ವೈಯಕ್ತಿಕ ಅಭಿಪ್ರಾಯಗಳಿಗೆ ಯಾವುದೇ ಕಾನೂನಾತ್ಮಕ ಸಮ್ಮತಿ ಇಲ್ಲ ಎನ್ನುವುದನ್ನು ಸಾರಿ ಹೇಳಿದೆ. ಇನ್ನೂ ಮಹತ್ವದ ಸಂಗತಿ ಎಂದರೆ ನ್ಯಾಯಾಲಯವು ಸರ್ಕಾರ ಉದ್ದೇಶಪೂರ್ವಕವಾಗಿಯೇ ಮುಚ್ಚಿಹಾಕಿದ್ದ ಪ್ರಶ್ನೆಯನ್ನು ಮುನ್ನಲೆಗೆ ತಂದಿದೆ. ಸೌಜನ್ಯ ಪ್ರಕರಣದಲ್ಲಿ `ಅಕ್ವಿಟಲ್ ಕಮಿಟಿ'ಯನ್ನು ರಚಿಸುವ ಸಿಬಿಐ ನಿರ್ದೇಶನವನ್ನು ಹೈಕೋರ್ಟು ಪುನರುಚ್ಛರಿಸಿದೆ.
ಹೈಕೋರ್ಟಿನ ಈ ಆದೇಶವು ಸಾಂಸ್ಥಿಕ ಪ್ರಮಾದಗಳ ಬುಡಕ್ಕೇ ಕೈಹಾಕಿದೆ. ಸಂತೋಷ್ ರಾವ್‍ನನ್ನು ಸಿಬಿಐ ನ್ಯಾಯಾಲಯ ಬಿಡುಗಡೆ ಮಾಡಿದಾಗ, ಪೆÇಲೀಸರು ಪ್ರಜ್ಞಾಪೂರ್ವಕವಾಗಿ ಅಮಾಯಕ ವ್ಯಕ್ತಿಯ ವಿರುದ್ಧ ಆರೋಪ ಸಲ್ಲಿಸಿದ್ದರು ಮತ್ತು ತನಿಖೆಯ ದಿಕ್ಕುತಪ್ಪಿಸಿದ್ದರು ಎಂದು ಹೇಳಿತ್ತು. ಹಾಗಾಗಿ ಸಿಬಿಐ ನ್ಯಾಯಾಲಯವು ಸರ್ಕಾರಕ್ಕೆ ಆದೇಶ ನೀಡಿ, `ಅಕ್ವಿಟಲ್ ಕಮಿಟಿ'ಯನ್ನು ರಚಿಸಿ, ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಉತ್ತರದಾಯಿತ್ವವನ್ನು ನಿಗದಿಪಡಿಸುವಂತೆ ಹೇಳಿತ್ತು. ಇದು ಕಡ್ಡಾಯವಾಗಿ ಅನುಸರಿಸಬೇಕಾದ ಆದೇಶವಾಗಿತ್ತು. ಆದರೆ ಸರ್ಕಾರ ಮತ್ತು ಪೆÇಲೀಸ್ ಇಲಾಖೆ ಇದನ್ನು ನಿರ್ಲಕ್ಷಿಸಿದ್ದವು.
ಈ ಮೌನದ ಮತ್ತು ನಿರ್ಲಕ್ಷ್ಯದ ಹಿಂದಿನ ಲೆಕ್ಕಾಚಾರಗಳು ಈಗ ಸ್ಪಷ್ಟವಾಗುತ್ತಿವೆ. `ಅಕ್ವಿಟಲ್ ಕಮಿಟಿ'ಯನ್ನು ರಚಿಸಿದರೆ ಅದು ವ್ಯಕ್ತಿಗತವಾಗಿ ಅಧಿಕಾರಿಗಳನ್ನು ಗುರುತಿಸಿ, ದಾರಿ ತಪ್ಪಿದ ಮೊಕದ್ದಮೆಯ ಹಿಂದಿರುವ ಎಲ್ಲ ಅಧಿಕಾರಿಗಳನ್ನೂ ಸಹ ಕಂಡುಹಿಡಿಯುತ್ತದೆ. ನೈಜ ಅಪರಾಧಿಗಳ ಅವಶ್ಯಕತೆ ಯಾರಿಗೆ ಇತ್ತೆಂಬುದನ್ನು ಗುರುತಿಸುತ್ತದೆ. ಮೊಕದ್ದಮೆಯನ್ನು ಮುಚ್ಚಿಹಾಕಲು ಯಾರು ಅಧಿಕಾರ ನೀಡಿದರು ಎನ್ನುವುದನ್ನು ಕಂಡುಹಿಡಿಯುತ್ತದೆ. ನ್ಯಾಯದ ಹಾದಿ ತಪ್ಪಿಸುವ ಮೂಲಕ ಯಾರಿಗೆ ಲಾಭವಾಯಿತು ಎನ್ನುವುದನ್ನು ಗುರುತಿಸುತ್ತದೆ. ಈ ಸಾಧ್ಯತೆಗಳ ಹಿಂದೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಅಪರೂಪದ ರಾಜಕೀಯ ಒಮ್ಮತ ಕಾಣುತ್ತದೆ.
ಹೈಕೋರ್ಟ್ ಈ ಅಹಿತಕರ ಸನ್ನಿವೇಶವನ್ನು ಕೊನೆಗೊಳಿಸಿದೆ. ಪರಮೇಶ್ವರ್ ಅವರ `ಮುಗಿದ ಅಧ್ಯಾಯ' ಹೇಳಿಕೆ ಮತ್ತು ಶಿವಕುಮಾರ್ ಅವರ `ಷಡ್ಯಂತ್ರ'ದ ಆರೋಪ ಈಗ ನ್ಯಾಯಾಂಗದ ದಾಖಲೆಗಳ ವಿರುದ್ಧ ನಿಲ್ಲುತ್ತವೆ ಹಾಗೆಯೇ ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿದ, ಮುಚ್ಚಿಹಾಕಿದ ಹುನ್ನಾರಗಳನ್ನು ಹೊರತಂದಿದೆ. ಸಾರ್ವಜನಿಕರಿಗೆ ನ್ಯಾಯಾಲಯದ ಈ ಮಧ್ಯಪ್ರವೇಶವೇ ಬಹುಮುಖ್ಯವಾದ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ರಾಜಕೀಯ ವ್ಯವಸ್ಥೆಯು ಅಧಿಕಾರವನ್ನು ರಕ್ಷಿಸುವಾಗ, ನ್ಯಾಯಾಲಯಗಳು ಸತ್ಯವನ್ನು ಬಯಲಿಗೆಳೆಯಲು ಮುಂದಾಗುತ್ತದೆ ಎನ್ನುವ ವಾಸ್ತವವನ್ನು ಹೈಕೋರ್ಟಿನ ಉಪಕ್ರಮ ಸೂಚಿಸುತ್ತದೆ.
Comments
Post a Comment