42ನೆ ಸಂವಿಧಾನ ತಿದ್ದುಪಡಿ - ತುರ್ತುಪರಿಸ್ಥಿತಿಯ ಎಚ್ಚರಿಕೆ
ರಾಜಕೀಯ ಅಧಿಕಾರವು ಸಾಂವಿಧಾನಿಕ ಇತಿಮಿತಿಗಳನ್ನು ಮೀರಿದ ಒಂದು ನಿರ್ಣಾಯಕ ಘಟ್ಟವಾಗಿ ಸಂವಿಧಾನದ 42ನೆಯ ತಿದ್ದುಪಡಿಯನ್ನು ಇಂದಿಗೂ ಸ್ಮರಿಸಲಾಗುತ್ತದೆ. 1976ರಲ್ಲಿ ಇಂದಿರಾಗಾಂಧಿಯ ಆಳ್ವಿಕೆಯಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜಾರಿಗೊಳಿಸಿದ ಈ ಸಾಂವಿಧಾನಿಕ ತಿದ್ದುಪಡಿಯು ಸುಧಾರಣೆಯ ಮಿತಿಗಳನ್ನೂ ದಾಟಿ, ಭಾರತದ ವ್ಯವಸ್ಥೆಯಲ್ಲಿ ಹೇಗೆ ಅಧಿಕಾರವನ್ನೇ ಬದಲಾಯಿಸಬಹುದು ಎನ್ನುವುದನ್ನು ನಿರೂಪಿಸಿತ್ತು.
ನ್ಯಾಯಾಲಯದಲ್ಲಿ ಈ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದ್ದ ಅಂದಿನ ಸರ್ಕಾರವು, ನ್ಯಾಯಾಲಯಗಳು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿತ್ತು. ಸುಪ್ರೀಂಕೋರ್ಟ್ ತೀರ್ಪುಗಳು, ವಿಶೇಷವಾಗಿ ಕೇಶವಾನಂದ ಭಾರತಿ (1973) ಪ್ರಕರಣದಲ್ಲಿ, ಸಂವಿಧಾನವನ್ನು ಬದಲಿಸಲು ಸಂಸತ್ತಿಗೆ ಇರುವ ಅಧಿಕಾರದ ಮಿತಿಗಳನ್ನು ಗುರುತಿಸಿತ್ತು. ಆಳುವ ಪಕ್ಷಕ್ಕೆ ಇದು ಚುನಾಯಿತ ಸರ್ಕಾರದ ನಿರ್ಣಾಯಕ ತೀರ್ಮಾನಗಳಿಗೆ ಅಡ್ಡಿಯಾಗುತ್ತದೆ ಎಂದು ಭಾಸವಾಗಿತ್ತು. ಸರ್ಕಾರದ ಸಾಮಥ್ರ್ಯವನ್ನು ಕುಗ್ಗಿಸುತ್ತದೆ ಎಂದು ಪ್ರತಿಪಾದಿಸಲಾಗಿತ್ತು. 42ನೆಯ ತಿದ್ದುಪಡಿಯನ್ನು ಪರಿಹಾರೋಪಾಯವಾಗಿ ಸೂಚಿಸಲಾಗಿತ್ತು. ಸಂಸತ್ತನ್ನು ಬಲಪಡಿಸುವುದು, ನಿರ್ದೇಶಕ ತತ್ವಗಳನ್ನು ಪೆÇ್ರೀತ್ಸಾಹಿಸುವುದು ಮತ್ತು ನೀತಿಗಳನ್ನು ತ್ವರಿತವಾಗಿ ಜಾರಿಗೊಳಿಸುವುದು ಈ ತಿದ್ದುಪಡಿಯ ಉದ್ದೇಶ ಎಂದು ಹೇಳಲಾಗಿತ್ತು.
ಆದರೆ ಈ ಸಂದರ್ಭವನ್ನು ನಿರ್ಲಕ್ಷಿಸಲಾಗುವುದಿಲ್ಲ. ತಿದ್ದುಪಡಿಯನ್ನು ಅನುಮೋದಿಸಿದಾಗ, ವಿರೋಧ ಪಕ್ಷದ ನಾಯಕರು ಸೆರೆಮನೆಯಲ್ಲಿದ್ದರು, ಮಾಧ್ಯಮಗಳನ್ನು ಬಿಗಿಯಾಗಿ ನಿಯಂತ್ರಿಸಲಾಗಿತ್ತು, ಸಾರ್ವಜನಿಕ ಚರ್ಚೆಗಳನ್ನು ನಿಬರ್ಂಧಿಸಲಾಗಿತ್ತು. ಈ ವಾತಾವರಣದಲ್ಲಿ ಜಾರಿಗೊಳಿಸಿದ ಬದಲಾವಣೆಗಳು ಕಾಯಾರ್ಂಗದ ಅನುಕೂಲತೆಗಳನ್ನು ಬಿಂಬಿಸಿದ್ದವೇ ಹೊರತು ಪ್ರಜಾಸತ್ತಾತ್ಮಕ ಸಮ್ಮತಿಯಾಗಿ ಕಂಡಿರಲಿಲ್ಲ. ಸಾಂವಿಧಾನಿಕ ತಿದ್ದುಪಡಿಯನ್ನು ನ್ಯಾಯಾಂಗ ಪರಿಶೀಲನೆಯಿಂದ ಹೊರತುಪಡಿಸುವ ಮೂಲಕ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‍ಗಳ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು. ಶಾಸನಸಭೆಗಳ ಅವಧಿಯನ್ನು ವಿಸ್ತರಿಸಲಾಗಿತ್ತು. ರಾಜ್ಯಗಳ ಅಧಿಕಾರಗಳನ್ನು ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ಈ ತಿದ್ದುಪಡಿಯು ಸಂವಿಧಾನದ ಸಮತೋಲನದ ಅಧಿಕಾರವನ್ನೇ ಕಸಿದುಕೊಂಡಿತ್ತು.
ಈ ರಾಜಕೀಯ ಧೋರಣೆಯು ತುರ್ತುಪರಿಸ್ಥಿತಿಯಲ್ಲೇ ಸೀಮಿತವಾಗಿರಲಿಲ್ಲ. ಶಾಹ್ ಬಾನೊ ಪ್ರಕರಣಕ್ಕೆ ವಿಸ್ತರಿಸಿತು. (ವಿವರಕ್ಕೆ ಬಾಕ್ಸ್ ನೋಡಿ). ಶಾಹ್ ಬಾನೋ ಪ್ರಕರಣವು, ಸಂವಿಧಾನಾತ್ಮಕ ಮೌಲ್ಯಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಸರ್ಕಾರಗಳ ನಿಲುವು ಸಿದ್ಧಾಂತಾಧಾರಿತವಲ್ಲ, ರಾಜಕೀಯ ಲೆಕ್ಕಾಚಾರಾಧಾರಿತವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ತುರ್ತುಪರಿಸ್ಥಿತಿಯಲ್ಲಿನ 42ನೇ ತಿದ್ದುಪಡಿ ಹಾಗೂ ಶಾಹ್ ಬಾನೋ ತೀರ್ಪಿನ ನಂತರದ ಕಾನೂನು - ಇವೆರಡೂ ಸಂವಿಧಾನವನ್ನು ರಕ್ಷಿಸುವುದಕ್ಕಿಂತ, ಅಧಿಕಾರ ಮತ್ತು ಮತಬ್ಯಾಂಕ್‍ಗಳನ್ನು ಉಳಿಸುವ ಪ್ರಯತ್ನಗಳಾಗಿವೆ.
ಆದರೂ ಈ ಕಥೆ ಅಲ್ಲಿಗೇ ಮುಗಿಯಲಿಲ್ಲ. 42ನೆ ತಿದ್ದುಪಡಿಗೆ ವ್ಯಕ್ತವಾದ ಪ್ರತಿರೋಧ ಸಾಂವಿಧಾನಿಕ ಸಮತೋಲನವನ್ನು ಮರಳಿ ಸ್ಥಾಪಿಸುವಂತೆ ಮಾಡಿತು. 44ನೆ ತಿದ್ದುಪಡಿಯು ಅದರ ಅನೇಕ ವಿವಾದಾತ್ಮಕ ನಿಯಮಗಳನ್ನು ರದ್ದುಪಡಿಸಿತು. ತದನಂತರದ ಸುಪ್ರೀಂಕೋರ್ಟ್ ತೀರ್ಪುಗಳು, ವಿಶೇಷವಾಗಿ ಮಿನರ್ವ ಮಿಲ್ಸ್ (1980) ಪ್ರಕರಣವು, ಸಂಸತ್ತಿನ ಅಧಿಕಾರ ಸಂವಿಧಾನದ ಮೂಲ ತತ್ವಗಳಿಗೆ ಬದ್ಧವಾಗಿರುತ್ತದೆ ಎನ್ನುವುದನ್ನು ಪುನರುಚ್ಚರಿಸಿತು.
ಇಂದು 42ನೆ ತಿದ್ದುಪಡಿ ಮತ್ತು ಶಾಹ್ ಬಾನೋ ಪ್ರಕರಣ ಎರಡೂ ಪೂರ್ವನಿದರ್ಶನಗಳಾಗಿವೆ. ರಾಜಕೀಯ ಒತ್ತಡದ ಸಂದರ್ಭಗಳಲ್ಲಿ ಸಂವಿಧಾನಾತ್ಮಕ ರಕ್ಷಣೆಗಳು ಹೇಗೆ ಕುಸಿಯಬಹುದು ಎಂಬ ಎಚ್ಚರಿಕೆಗಳಾಗಿವೆ. ಬಹು ಮುಖ್ಯವಾಗಿ, ಪ್ರಜಾಪ್ರಭುತ್ವ ಕೇವಲ ಚುನಾವಣೆಗಳ ಮೇಲೆ ನಿಂತಿಲ್ಲ; ಅಧಿಕಾರವನ್ನು ನಿಯಂತ್ರಿಸುವ ಸಂಸ್ಥೆಗಳ ಗೌರವದ ಮೇಲೂ ನಿಂತಿದೆ ಎಂಬ ಸತ್ಯವನ್ನು ಈ ಐತಿಹಾಸಿಕ ಅನುಭವಗಳು ನೆನಪಿಸುತ್ತವೆ.
----------------
ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ಕೇವಲ ಇತಿಹಾಸದ ತಪ್ಪು ಹೆಜ್ಜೆಯಾಗಿ ನೋಡಲಾಗುವುದಿಲ್ಲ. ಇಂದು ಸಂವಿಧಾನವನ್ನು ಕೈಯಲ್ಲಿ ಹಿಡಿದು ಶಪಥ ಮಾಡುವ ಕೆಲ ಕಾಂಗ್ರೆಸ್ ನಾಯಕರು, ಈ ಅಧ್ಯಾಯವನ್ನು ಮೌನವಾಗಿ ದಾಟಲು ಪ್ರಯತ್ನಿಸುವುದು ಗಂಭೀರ ವಿರೋಧಾಭಾಸ. ಸಂವಿಧಾನ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಭಾಷಣಗಳು ನಡೆಯುತ್ತಿದ್ದರೂ, ಅದೇ ಪಕ್ಷದ ಆಡಳಿತದಲ್ಲಿ ಸಂವಿಧಾನವೇ ಕಾಯಾರ್ಂಗದ ಅಧೀನಕ್ಕೆ ಒಳಗಾಗಿದ್ದ ಸತ್ಯವನ್ನು ಮರೆಮಾಡಲು ಸಾಧ್ಯವಿಲ್ಲ. ವಿರೋಧಿಗಳ ಬಂಧನ, ಮಾಧ್ಯಮಗಳ ಮೌನ ಮತ್ತು ನ್ಯಾಯಾಂಗದ ಶಕ್ತಿ ಕುಂಠಿತಗೊಂಡ ಸ್ಥಿತಿಯಲ್ಲೇ ಸಂವಿಧಾನ ತಿದ್ದುಪಡಿ ಜಾರಿಯಾಗಿತ್ತು. ಇಂತಹ ಹಿನ್ನೆಲೆಯೊಂದಿಗೆ ಸಂವಿಧಾನ ಭಕ್ತಿಯ ಘೋಷಣೆ ಕೇಳಿಸಿದಾಗ, ಅದು ನಿಷ್ಠೆಯಲ್ಲ, ಸಂದರ್ಭೋಚಿತ ರಾಜಕೀಯ ಸೌಲಭ್ಯವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
----------------------------------------
ಸಂವಿಧಾನ ಒದಗಿಸಿದ್ದ ಮಹಿಳಾ
ರಕ್ಷಣೆ ಮೀರಿದ `ಕೈ' ಸರ್ಕಾರ
1985ರ ಶಾಹ್ ಬಾನೋ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನ ನಿರ್ವಹಣಾ ಭತ್ಯೆ ನೀಡಬೇಕು ಎಂದು ತೀರ್ಪು ನೀಡಿತ್ತು. ಇದು ಸಂವಿಧಾನದ ಸಮಾನತೆ ಮತ್ತು ಲಿಂಗನ್ಯಾಯದ ತತ್ವಗಳಿಗೆ ಅನುಗುಣವಾಗಿತ್ತು. ಆದರೆ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ, ಧಾರ್ಮಿಕ ಒತ್ತಡಗಳಿಗೆ ಮಣಿದು, ಸಂಸತ್ತಿನಲ್ಲಿ ಕಾನೂನು ತಂದು ಆ ತೀರ್ಪನ್ನೇ ಪರಿಣಾಮಕಾರಿಯಾಗಿ ರದ್ದುಪಡಿಸಲು ಕಾನೂನು ಕ್ರಮ ಜರುಗಿಸಿತು. ಇದರ ಮೂಲಕ ನ್ಯಾಯಾಂಗದ ತೀರ್ಪನ್ನು ಮೀರಿಸುವ ರಾಜಕೀಯ ಹಸ್ತಕ್ಷೇಪ ಮತ್ತೊಮ್ಮೆ ನಡೆಯಿತು.
Comments
Post a Comment