ಆರೆಸ್ಸೆಸ್ ನಿಷೇಧ ಸಮಸ್ಯೆಗೆ ಪರಿಹಾರ ಆಗುವುದಿಲ್ಲ

 ವಿಭಜಕ ಚಿಂತನೆಗಳನ್ನು ಸಂವಾದ, ಚರ್ಚೆಗಳೊಂದಿಗೆ ಎದುರಿಸಬೇಕೇ ಹೊರತು ನಿಷೇಧದ ಮೂಲಕ ಅಲ್ಲ.

ಹೌದಲ್ಲ... * ಬಿವಿಸೀ

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಂತಹವ್ರು ಒಂದು ರಾಜಕೀಯವಾಗಿ ಮುಖ್ಯವಾದ ವಿಷಯದ ಬಗ್ಗೆ ಪ್ರಸ್ತಾಪಿಸಿದಾಗ ಜನರು ಅದನ್ನು ಕೇಳಿಸಿಕೊಳ್ಳುತ್ತಾರೆ. ಅವರ ಇತ್ತೀಚಿನ ಟಿವಿ ಶೋ ಒಂದರ ಹೇಳಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವನ್ನು ಪ್ರಸ್ತಾಪಿಸಿರುವುದು ಮತ್ತೊಮ್ಮೆ ಸೈದ್ಧಾಂತಿಕ ಸ್ವಾತಂತ್ರ್ಯದ ವಿಚಾರವನ್ನು, ಸರ್ಕಾರದ ಅತಿಯಾದ ಕ್ರಮಗಳನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಿದೆ. ರಾಜಕೀಯ ಕಾವು ಏರುತ್ತಿರುವ ಹೊತ್ತಿನಲ್ಲಿ ಆರೆಸ್ಸೆಸ್ ನಿಷೇಧ ಕುರಿತ ಅವರ ಮಾತುಗಳು ಅಹಿತಕರವೂ ಹೌದು, ಅವಶ್ಯಕವೂ ಹೌದು.

ನ್ಯಾ ಹೆಗ್ಡೆ ಅವರ ವಾದವು ನೇರವಾಗಿವೆ. ಯಾವುದೇ ಸಂಘಟನೆಯ ಸಿದ್ಧಾಂತವನ್ನು ಒಪ್ಪದೆ ಇದ್ದ ಮಾತ್ರಕ್ಕೆ ಅದನ್ನು ನಿಷೇಧಿಸಲಾಗುವುದಿಲ್ಲ, ಕಾನೂನುಬಾಹಿರ ಮಾಡಲಾಗುವುದಿಲ್ಲ. ಅವರು ಹೇಳುವಂತೆ, ಆರೆಸ್ಸೆಸ್ ಇನ್ನಿತರ ಯಾವುದೇ ಕಾನೂನುಬದ್ಧ ಸಂಸ್ಥೆಯ ಹಾಗೆಯೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಾಂವಿಧಾನಿಕ ಹಕ್ಕನ್ನು ಹೊಂದಿದೆ. ಈ ಸಂಘಟನೆಯು ಹಿಂಸೆಯನ್ನು ಪ್ರಚೋದಿಸಿದೆ ಅಥವಾ ಹಿಂಸೆಯಲ್ಲಿ ತೊಡಗಿದೆ ಎನ್ನಲು ಸಾಕ್ಷ್ಯಾಧಾರಗಳು ಇಲ್ಲದೆ ಹೋದರೆ, ನಿಷೇಧಿಸುವುದು ಪ್ರಜಾಪ್ರಭುತ್ವ ವಿರೋಧಿಯಷ್ಟೇ ಅಲ್ಲದೆ, ಸರ್ಕಾರಕ್ಕೆ ತಿರುಗುಬಾಣವಾಗುತ್ತದೆ. ಇದು ಮೂಲತಃ ಆರೆಸ್ಸೆಸ್ ಸಂಘಟನೆಯನ್ನು ಸಮರ್ಥಿಸುವ ವಾದ ಅಲ್ಲ; ಬದಲಾಗಿ ಭಾರತದ ಸಂವಿಧಾನ ಒಳಗೊಂಡಿರುವ ಸಂಘಟನೆಯ ಹಾಗೂ ಶ್ರದ್ಧಾಭಕ್ತಿಗಳ ಹಕ್ಕಿನ ಸಮರ್ಥನೆಯಾಗುತ್ತದೆ.

ಆರೆಸ್ಸೆಸ್ ನಿಷೇಧಕ್ಕಾಗಿ ಆಗ್ರಹಿಸುವುದು ರಾಜಕೀಯ ಹತಾಶೆಯ ಸಂಕೇತವಾಗಿ ಕಾಣುವುದೇ ಹೊರತು, ಕಾನೂನಾತ್ಮಕ ಅಗತ್ಯತೆಯಾಗಿ ಅಲ್ಲ. ಸಂಘಪರಿವಾರದ ಟೀಕಾಕಾರರು ಸಂಘಟನೆಯನ್ನು ಬಿಜೆಪಿಯ ಹಿಂದಿರುವ ಆಡಳಿತ ಶಕ್ತಿ ಎಂದು ಭಾವಿಸುವುದಲ್ಲದೆ, ಬಹುಸಂಖ್ಯಾವಾದವನ್ನು ಹರಡುತ್ತಿದ್ದು ಅಸಹಿಷ್ಣುತೆಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸುತ್ತಾರೆ. ಆದಾಗ್ಯೂ ಇದಕ್ಕೆ ಪ್ರತಿಯಾಗಿ ಸಿದ್ಧಾಂತವನ್ನು ಎದುರಿಸುವ ನಿಟ್ಟಿನಲ್ಲಿ ನೇರವಾದ ನಿಷೇಧಿಸುವ ಅಸ್ತ್ರವನ್ನು ಬಳಸಿದರೆ ಅದು ಬೌದ್ಧಿಕ ಸೋಲು ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ದುರಾಲೋಚನೆಗಳಿಗೆ ನಿಷೇಧ ಅಥವಾ ಸೆನ್ಸಾರ್‍ಷಿಪ್ ಹೇರುವುದರ ಬದಲು ಉತ್ತಮ ಆಲೋಚನೆಗಳನ್ನು ಜನರ ಮುಂದಿಡುವುದು ಉತ್ತಮ. ಸರ್ಕಾರದ ಕರ್ತವ್ಯ ಇರುವುದು ಹಿಂಸೆಯನ್ನು ಕಾನೂನಾತ್ಮಕವಾಗಿ ಹತ್ತಿಕ್ಕುವುದೇ ಹೊರತು ಚಿಂತನೆಯನ್ನೇ ನಿಯಂತ್ರಿಸುವುದಲ್ಲ.

ನ್ಯಾ ಹೆಗ್ಡೆ ಅವರು ಇದನ್ನು ನೆನಪಿಸಿರುವುದು ವಿಶೇಷ ಒತ್ತು ನೀಡುತ್ತದೆ ಏಕೆಂದರೆ ಭಾರತದಲ್ಲಿ ಆರೆಸ್ಸೆಸ್ ಮೇಲೆ ಮೊದಲು ಎರಡು ಬಾರಿ ನಿಷೇಧವನ್ನು ಪ್ರಯೋಗಿಸಲಾಗಿದೆ. ಮಹಾತ್ಮ ಗಾಂಧಿ ಹತ್ಯೆಯ ನಂತರ 1948ರಲ್ಲಿ ಮತ್ತು 1975ರ ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್ ನಿಷೇಧಿತವಾಗಿತ್ತು. ಎರಡೂ ಸಂದರ್ಭಗಳಲ್ಲಿ ನಿಷೇಧ ವಿಫಲವಾಗಿದ್ದು, ತನ್ನದೇ ವೈರುಧ್ಯಗಳಿಂದ ಸೋಲು ಕಂಡಿದೆ. ದಮನ ಮಾಡುವುದು ಅನುಕಂಪ ಹುಟ್ಟಿಸುತ್ತದೆಯೇ ಹೊರತು ಸುಧಾರಣೆಯಾಗುವುದಿಲ್ಲ. ಈ ಪಾಠವನ್ನು ಕಲಿಯಲು ನಾವು ಹಿಂಜರಿಯುತ್ತೇವೆ.

ಮೇಲಾಗಿ, ನಿಷೇಧಗಳು ಅಪಾಯಕಾರಿಯಾಗಿಯೂ, ಆಯ್ದ ಪ್ರಸಂಗಗಳಾಗಿಯೂ ಇರುತ್ತವೆ. ಆರೆಸ್ಸೆಸ್ ಸಂಘಟನೆಯನ್ನು ಸೈದ್ಧಾಂತಿಕ ಉಗ್ರವಾದದ ಕಾರಣಕ್ಕಾಗಿ ನಿಷೇಧಿಸಿದರೆ, ಬೇರೆಲ್ಲಾ ಧಾರ್ಮಿಕ ಹಾಗೂ ರಾಜಕೀಯ ವಲಯಗಳಲ್ಲೂ ಇದೇ ಮಾನದಂಡವನ್ನು ಅನುಸರಿಸಬೇಕಲ್ಲವೇ? ಸಾರ್ವಜನಿಕ ಸುವ್ಯವಸ್ಥೆಯ ಹೆಸರಿನಲ್ಲಿ ಇದನ್ನು ಅನುಸರಿಸಿದರೆ ಒಂದು ಬದಿಯನ್ನು ಮಾತ್ರ ದಮನಿಸಿದಂತಾಗಿ, ಕಾನೂನು ದೃಷ್ಟಿಯಲ್ಲಿ ಸಮಾನತೆ ಎಂಬ ತತ್ವವನ್ನೇ ಉಲ್ಲಂಘಿಸಿದಂತಾಗುತ್ತದೆ.

ನ್ಯಾ ಹೆಗ್ಡೆ ಅವರ ಮಧ್ಯಪ್ರವೇಶವನ್ನು ಪ್ರಬುದ್ಧತೆಯ ಕರೆ ಎಂದೇ ಭಾವಿಸಬೇಕಿದೆ. ವಿಭಜಕ ಚಿಂತನೆಗಳನ್ನು ಸಂವಾದ, ಚರ್ಚೆಗಳೊಂದಿಗೆ ಎದುರಿಸಬೇಕೇ ಹೊರತು ನಿಷೇಧದ ಮೂಲಕ ಅಲ್ಲ. ಪ್ರಜಾಪ್ರಭುತ್ವಗಳು ಭಿನ್ನಮತವನ್ನು ಸಹಿಸಿಕೊಳ್ಳುವ ಮೂಲಕ ಬೆಳೆಯುತ್ತವೆಯೇ ಹೊರತು ಅದನ್ನು ಅಳಿಸಿಹಾಕುವ ಮೂಲಕ ಅಲ್ಲ. ಆರೆಸ್ಸೆಸ್‍ನ್ನು ನಿಷೇಧಿಸುವುದು ಕೆಲವೇ ಪಕ್ಷಪಾತೀಯ ಭಾವನೆಗಳನ್ನು ತೃಪ್ತಿಪಡಿಸಬಹುದು, ಆದರೆ ಅದು ಭಾರತದ ರಾಜಕೀಯ ವ್ಯಾಧಿಯನ್ನು ಶಮನ ಮಾಡುವುದಿಲ್ಲ. ಶಮನಕಾರಿ ಮಾರ್ಗ ಇರುವುದು ಮಾತುಕತೆಗಳಲ್ಲಿ, ಉತ್ತರದಾಯಿತ್ವದಲ್ಲಿ ಮತ್ತು ಸಂವಿಧಾನದಲ್ಲಿ ಆಳವಾದ ನಂಬಿಕೆ ಇರಿಸುವಲ್ಲಿ. ಆದರೆ ಭೀತಿಯಿಂದ ನಿಷೇಧಿಸುವುದರಲ್ಲಿ ಅಲ್ಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again