ಜಯಂತ್ ಮೇಲೆ ಹಲ್ಲೆ ನ್ಯಾಯಕ್ಕೆ ಬಗೆಯಲಾದ ದ್ರೋಹ

 ಒಬ್ಬ ಪ್ರತ್ಯಕ್ಷ ಸಾಕ್ಷಿಗೆ ಹೀಗಾಗಬಹುದಾದರೆ, ಸತ್ಯ ಅರಿಯುವ ಸಾಧ್ಯತೆಗಳು ಎಲ್ಲಿರುತ್ತವೆ ಎಂದು ಕೇಳುತ್ತಿದ್ದಾರೆ.

ಅಹುದಾದರಹುದೆನ್ನಿ * ಬಿವಿಸೀ

`ಸೌಜನ್ಯಾಗೆ ನ್ಯಾಯ' ಆಂದೋಲನದ ಪ್ರಮುಖರಲ್ಲಿ ಒಬ್ಬರಾದ ಟಿ ಜಯಂತ್ ಅವರ ಮೇಲೆ ಹಲ್ಲೆ ನಡೆಸಿರುವುದು, ತನಿಖೆಯ ಕೋಣೆಯೊಳಗೆ ನಡೆದಿರುವ ಕ್ರೂರ ವರ್ತನೆ ಮಾತ್ರವಲ್ಲ, ಇದು ರಾಜ್ಯ ಸರ್ಕಾರವು ಬಲಾಢ್ಯರನ್ನು ರಕ್ಷಿಸುತ್ತದೆ ಮತ್ತು ಪ್ರತಿರೋಧವನ್ನು ಶಿಕ್ಷಿಸುತ್ತದೆ ಎಂದು ಸಂದೇಶ ನೀಡುವ ಒಂದು ಪ್ರಕರಣವಾಗಿದೆ. ಔಪಚಾರಿಕ ನೋಟಿಸ್ ಪಡೆದ ಹಿನ್ನೆಲೆಯಲ್ಲಿ ಜಯಂತ್ ಎಸ್‍ಐಟಿ ಕಚೇರಿಯೊಳಗೆ ಪ್ರವೇಶಿಸಿದಾಗ, ತನಿಖೆಗೆ ಸಹಕರಿಸುವ ಒಬ್ಬ ನಾಗರಿಕನಾಗಿ ಪ್ರವೇಶಿಸಿದ್ದರು. ಆದರೆ ಅವರು ಹೊರಬರುವಾಗ, ಹಲ್ಲೆಗೊಳಗಾಗಿ, ನಿಂದನೆಗೀಡಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿಯಲ್ಲಿ ಬಂದಿದ್ದರು. ಇದೇ ಒಂದು ಹಗರಣವಾಗಿದೆ. ನಂತರದ ಬೆಳವಣಿಗೆಗಳೂ ನೈಜ ಹಗರಣವನ್ನು ಅನಾವರಣಗೊಳಿಸಿತ್ತು. ಏಕೆಂದರೆ ರಾಜ್ಯ ಸರ್ಕಾರ ಈ ಬೆಳವಣಿಗೆಯ ಬಗ್ಗೆ ಮೌನ ವಹಿಸಿರುವುದು ನಿಗೂಢವಾಗಿದೆ.

ಜಯಂತ್ ಅವರು ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ವಿವರವಾದ ದೂರು ಸಲ್ಲಿಸಿದ್ದಾರೆ. ಎಸ್‍ಐಟಿ ಕಚೇರಿಯ ಒಳಗೆ ತಮ್ಮ ಮೇಲೆ ನಡೆದ ಹಲ್ಲೆಯಲ್ಲಿ ಗಾಯಗೊಂಡಿರುವುದಕ್ಕೆ ವೈದ್ಯಕೀಯ ಪುರಾವೆಗಳನ್ನು ಒದಗಿಸಿದ್ದಾರೆ. ಯಾವುದೇ ಸಾಮಾನ್ಯ ಕಾನೂನು ಪ್ರಕ್ರಿಯೆಯಲ್ಲಿ, ಎಫ್‍ಐಆರ್ ಕೆಲವೇ ನಿಮಿಷಗಳಲ್ಲಿ ದಾಖಲಾಗಬೇಕಿತ್ತು. ಆರೋಪಿ ಅಧಿಕಾರಿಗಳನ್ನು ಮತ್ತು ಹಲ್ಲೆ ಮಾಡಲು ಬಳಸಿಕೊಂಡ ವ್ಯಕ್ತಿಯನ್ನು ಅದೇ ದಿನ ಬಂಧಿಸಬೇಕಿತ್ತು. ಠಾಣೆಯೊಳಗೆ ಹಲ್ಲೆ ನಡೆಸುವುದು ತಾಂತ್ರಿಕ ದುರ್ವರ್ತನೆ ಅಲ್ಲ. ಇದು ಜಾಮೀನು ರಹಿತ, ಕ್ರಿಮಿನಲ್ ಅಪರಾಧವಾಗುತ್ತದೆ. ಆದರೂ ಈ ಪ್ರಕರಣದಲ್ಲಿ ಬೆಳ್ತಂಗಡಿ ಪೆÇಲೀಸರು ಏನೂ ನಡೆದೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ. ಎಫ್‍ಐಆರ್ ದಾಖಲಿಸಿಲ್ಲ, ಬಂಧಿಸಿಲ್ಲ, ಅಮಾನತು ಆದೇಶ ನೀಡಿಲ್ಲ, ತನಿಖೆ ನಡೆದಿಲ್ಲ. ಬಹುಶಃ ಕಾನೂನು ಹಠಾತ್ತನೆ ತನ್ನ ಹಿಡಿತ ಕಳೆದುಕೊಂಡಿದೆ.

ಇದೇ ರೀತಿಯ ದೂರನ್ನು ಸಾಮಾನ್ಯ ನಾಗರಿಕರೊಬ್ಬರು ಸಲ್ಲಿಸಿದ್ದರೆ ಪೆÇಲೀಸರು ಇದೇ ರೀತಿಯ ಅಸಹಾಯಕತೆಯನ್ನು ತೋರುತ್ತಿದ್ದರೇ? ಖಂಡಿತವಾಗಿಯೂ ಇಲ್ಲ. ಒಬ್ಬ ತರಕಾರಿ ವ್ಯಾಪಾರಿ, ಆಟೋರಿಕ್ಷಾ ಚಾಲಕ, ಅಥವಾ ಕೆಳ ಶ್ರೇಣಿಯ ಪೆÇಲೀಸ್ ಕಾನ್ಸ್‍ಟೇಬಲ್ ಇಂತಹ ಆರೋಪ ಎದುರಿಸಿದ್ದಲ್ಲಿ, ಪೆÇಲೀಸರು ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದರು. ಇಲ್ಲಿ ಆರೋಪಿಗಳು ಎಸ್‍ಐಟಿ ಅಧಿಕಾರಿಗಳೇ ಆಗಿದ್ದಾರೆ, ಇವರು ದಶಕಗಳ ಕಾಲ ನಡೆದ ಅಸಹಜ ಸಾವುಗಳ, ಅಪಹರಣಗಳ ಮತ್ತು ಆರೋಪಿತ ಅತ್ಯಾಚಾರಗಳ ತನಿಖೆ ನಡೆಸುತ್ತಿದ್ದಾರೆ. ಈ ಆರೋಪಗಳು ಕರ್ನಾಟಕದ ಅತ್ಯಂತ ಪ್ರಬಲ ಸಂಸ್ಥೆಯೊಡನೆ ಸಂಪರ್ಕ ಹೊಂದಿವೆ. ಹಾಗಾಗಿ ಹಠಾತ್ತನೆ ನಿಯಮಗಳು ಬದಲಾಗುತ್ತವೆ. ಹಠಾತ್ತನೆ ಪೆÇಲೀಸರು ತಮ್ಮ ಬಾಧ್ಯತೆಗಳನ್ನು ಮರೆಯುತ್ತಾರೆ. ಹಠಾತ್ತನೆ ದೂರುದಾರನೇ ಅಪರಾಧಿಯಾಗುತ್ತಾನೆಯೇ ಹೊರತು ಹಲ್ಲೆ ನಡೆಸಿದವರಲ್ಲ.

ರಾಜಕೀಯ ಆಡಳಿತ ಯಂತ್ರದ ಮೌನ ಇನ್ನೂ ಖಂಡನಾರ್ಹವಾಗಿದೆ. ಎಸ್‍ಐಟಿ ತನಿಖೆಯ ಪ್ರಗತಿಯ ಬಗ್ಗೆ ರನ್ನಿಂಗ್ ಕಾಮೆಂಟ್ರಿ ನೀಡುತ್ತಿದ್ದ ಗೃಹ ಸಚಿವ ಜಿ ಪರಮೇಶ್ವರ ಈಗ ಮರೆಯಾಗಿದ್ದಾರೆ. ಎಸ್‍ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಈ ಘಟನೆಯನ್ನು ನಿರಾಕರಿಸುವ ಅಥವಾ ವಿವರಿಸುವ, ಆರೋಪಗಳ ಬಗ್ಗೆ ಮಾಹಿತಿ ನೀಡುವ ಒಂದೇ ಒಂದು ಮಾತು ಆಡಿಲ್ಲ. ಉಪ ಮುಖ್ಯಮಂತ್ರಿ ಈ ಮುನ್ನ ಧರ್ಮಸ್ಥಳದ ಹಿತಾಸಕ್ತಿಯನ್ನು ಸಮರ್ಥಿಸಿದ್ದವರು, ಈಗ ಏನೂ ನಡೆದೇ ಇಲ್ಲ ಎನ್ನುವಂತೆ ನಟಿಸುತ್ತಿದ್ದಾರೆ. ಒಬ್ಬ ನಾಗರಿಕನನ್ನು ಹೇಳಿಕೆ ಮಾಡಿಕೊಳ್ಳಲೆಂದು ಠಾಣೆಗೆ ಕರೆಸಿ ಚಿತ್ರಹಿಂಸೆಗೊಳಪಡಿಸಿದ ನಂತರ, ಉದ್ದೇಶಪೂರ್ವಕವಾಗಿ ಮೌನ ವಹಿಸುವುದಕ್ಕೂ ವಿಶೇಷ ಮಾದರಿಯ ನೈತಿಕ ದಿವಾಳಿತನ ಇರಬೇಕಾಗುತ್ತದೆ.

ವೈದ್ಯಕೀಯ ಸಾಕ್ಷ್ಯಗಳೊಂದಿಗೆ ಸಲ್ಲಿಸಲಾದ ಒಂದು ದೂರನ್ನು ನಿರ್ಲಕ್ಷಿಸುವುದೆಂದರೆ, ಇಲ್ಲಿ ಅಂತಿಮ ಫಲಿತಾಂಶವನ್ನು ಊಹಿಸದೆ ಇರಲಾಗುವುದಿಲ್ಲ. ಪೆÇಲೀಸ್ ಯಂತ್ರವು ಕೇವಲ ನಿಷ್ಕ್ರಿಯವಾಗಿಲ್ಲ, ಇದು ರಾಜಿಯಾಗಿದೆ. ಯಾರನ್ನು ರಕ್ಷಿಸಬೇಕು, ಯಾರನ್ನು ತುಳಿಯಬೇಕು ಎನ್ನುವುದನ್ನು ಅದು ನಿರ್ಧರಿಸಿದೆ. ಸಮಾಧಿಯಾಗಿರುವ ಸತ್ಯವನ್ನು ಹೊರತೆಗೆಯುವ ಬದಲು ಎಸ್‍ಐಟಿ ನ್ಯಾಯವನ್ನೇ ಸಮಾಧಿ ಮಾಡುತ್ತಿರುವ ಆರೋಪಕ್ಕೆ ಗುರಿಯಾಗಿದೆ.

ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ. ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ. ಈಗ ಕರ್ನಾಟಕದ ಜನರು, ಒಬ್ಬ ಪ್ರತ್ಯಕ್ಷ ಸಾಕ್ಷಿಗೆ ಹೀಗಾಗಬಹುದಾದರೆ, ಸತ್ಯ ಅರಿಯುವ ಸಾಧ್ಯತೆಗಳು ಎಲ್ಲಿರುತ್ತವೆ ಎಂದು ಕೇಳುತ್ತಿದ್ದಾರೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again