ಕರ್ನಾಟಕದ ನದಿಗಳು ಅಪಾಯದಲ್ಲಿ; ಸರ್ಕಾರ ಕೂಡಲೇ ಕ್ರಮ ವಹಿಸಬೇಕು
ತುರ್ತು ಕ್ರಮಗಳನ್ನು ಜರುಗಿಸದೆ ಹೋದರೆ ರಾಜ್ಯವು ಜೀವನಾಡಿಗಳನ್ನು ದ್ರವರೂಪದ ಹೊರೆಯನ್ನಾಗಿ ಕಾಣುವ ಅಪಾಯವನ್ನು ಎದುರಿಸಲಿದೆ.
...................
ತಲ್ಲಣ * ಬಿವಿಸೀ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ (ಕೆಎಸ್‍ಪಿಸಿಬಿ) ಇತ್ತೀಚೆಗೆ ಗಂಭೀರ ಎಚ್ಚರಿಕೆಯನ್ನು ನೀಡಿದ್ದು, ರಾಜ್ಯದಲ್ಲಿರುವ 12 ಪ್ರಮುಖ ನದಿಗಳು ಮನುಷ್ಯರ ಬಳಕೆಗೆ ಯೋಗ್ಯವಿಲ್ಲ ಎಂದು ಹೇಳಿದೆ. ಈ ವಾಸ್ತವವು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆಘಾತಕಾರಿಯಾಗಿದ್ದು, ಪರಿಸರ ಸಮತೋಲನ ಮತ್ತು ಸುಸ್ಥಿರತೆಗೂ ಅಪಾಯ ತರುತ್ತದೆ. ಕುಡಿಯುವ ನೀರು, ಕೃಷಿ ಮತ್ತು ಕೈಗಾರಿಕೆಗಳಿಗೆ ಈ ನದಿಗಳನ್ನೇ ಅವಲಂಬಿಸುವ ಕರ್ನಾಟಕಕ್ಕೆ ಇದು ಗಂಭೀರ ಎಚ್ಚರಿಕೆಯಾಗಿದೆ.
ಕೆಎಸ್‍ಪಿಸಿಬಿ ಸಲ್ಲಿಸಿರುವ ವಾರ್ಷಿಕ ನೀರಿನ ಗುಣಮಟ್ಟದ ವರದಿಯ ಅನುಸಾರ, ಕಲುಷಿತವಾಗಿರುವ ನದಿಗಳ ಪೈಕಿ ಕಾವೇರಿ, ಕೃಷ್ಣ, ತುಂಗಭದ್ರ, ಕಾಳಿ, ಭೀಮ, ಶಿಂಶಾ, ಕಬಿನಿ, ಮಲಪ್ರಭಾ, ಘಟಪ್ರಭಾ, ಹೇಮಾವತಿ ಮತ್ತು ಶರಾವತಿ ನದಿಗಳನ್ನು ಉಲ್ಲೇಖಿಸಲಾಗಿದೆ. ಈ ನದಿಗಳು ಒಟ್ಟಾರೆಯಾಗಿ ಏಳು ಕೋಟಿ ಜನರ ಅವಶ್ಯಕತೆಗಳನ್ನು ಪೂರೈಸುತ್ತಿದ್ದು, ಫಲವತ್ತಾದ ಕಾವೇರಿ ತಟದಿಂದ ಅತಿ ಹೆಚ್ಚು ಜನಸಂದಣಿ ಹೊಂದಿರುವ ಕರಾವಳಿಯ ದಕ್ಷಿಣ ಕನ್ನಡದವರೆಗೂ ಹರಿಯುತ್ತವೆ.
ಅಪಾಯಕಾರಿ ಶೋಧ
ಮಂಡಲಿಯ ನೀರು ಪರೀಕ್ಷೆಗಳಲ್ಲಿ ಕಂಡುಬಂದಿರುವಂತೆ, ಈ ನದಿಗಳ ಹಲವು ತೊರೆಗಳು ಅಪಾಯಕಾರಿ ಮಟ್ಟವನ್ನೂ ಮೀರಿರುವ ಬಯೋಕೆಮಿಕಲ್ ಆಕ್ಸಿಜನ್ ಅವಶ್ಯಕತೆಯನ್ನು (ಬಿಓಡಿ) ಹೊಂದಿವೆ. ಇದರೊಂದಿಗೆ ಬ್ಯಾಕ್ಟೀರಿಯಾ, ಅಮೋನಿಯಾ ಮತ್ತು ಕೈಗಾರಿಕಾ ತ್ಯಾಜ್ಯಗಳನ್ನೂ ಹೊಂದಿವೆ. ಈ ಮಲಿನ ಪದಾರ್ಥಗಳು ಕೊಳಚೆ ತುಂಬಿರುವ ಒಳಚರಂಡಿಗಳು, ಕೃಷಿ ತ್ಯಾಜ್ಯ ನೀರು, ರಾಸಾಯನಿಕ ತ್ಯಾಜ್ಯ, ಅನಿಬರ್ಂಧಿತ ನಗರ ಪ್ರದೇಶದ ತ್ಯಾಜ್ಯಗಳನ್ನು ಒಳಗೊಂಡಿವೆ. ನೇತ್ರಾವತಿ, ತುಂಗಭದ್ರ ಮತ್ತು ಭೀಮಾ ನದಿಗಳ ತೊರೆಗಳನ್ನು ಡಿ ಮತ್ತು ಇ ವರ್ಗಕ್ಕೆ ಸೇರಿಸಲ್ಪಟ್ಟಿದ್ದು, ಇದು ಅಪಾಯದ ಸೂಚನೆಯಾಗಿದೆ. ಅಲ್ಲದೆ, ಈ ನದಿಗಳ ನೀರು ಕುಡಿಯಲು ಅಥವಾ ಜಲಚರಗಳ ನಿರ್ವಹಣೆಗೆ ಯೋಗ್ಯವಾಗುವುದಿಲ್ಲ ಎಂದು ಹೇಳಲಾಗಿದ್ದು, ಸೂಕ್ತ ಚಿಕಿತ್ಸಕ ಕ್ರಮಗಳು ಅತ್ಯವಶ್ಯವಾಗಿವೆ.
ಆರೋಗ್ಯ, ಪರಿಸರ ಪ್ರಭಾವ
ಈ ನದಿಗಳ ನೀರನ್ನು ಕುಡಿಯುವುದರಿಂದ ಅಥವಾ ಬಳಸುವುದರಿಂದ ಉಂಟಾಗುವ ದುಷ್ಪರಿಣಾಮಗಳು ಭೀಕರವಾಗಿರುತ್ತವೆ. ಹೆಚ್ಚಿನ ಪ್ರಮಾಣದ ಕೊಲಿಫಾರ್ಮ್ ಮಲ ಮಾಲಿನ್ಯವನ್ನು ಸೂಚಿಸುತ್ತದೆ. ಇದು ಟೈಫಾಯ್ಡ್, ಕಾಲರಾ, ಮಲಬದ್ಧತೆ, ಭೇದಿ, ಹೆಪಾಟೈಟಿಸ್ ಎ ಮತ್ತು ಇ ರೋಗಗಳಿಗೆ ಕಾರಣವಾಗುತ್ತದೆ. ಬಹಳ ಕಾಲ ಇದನ್ನು ಸೀಸ, ಪಾದರಸ ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ಬರುವ ಕಾಡ್ಮಿಮಮ್ ಮುಂತಾದ ರಾಸಾಯನಿಕ ಪದಾರ್ಥಗಳಿಗೆ ಮುಕ್ತವಾಗಿರಿಸುವುದರಿಂದ ಬಳಕೆದಾರರ ನರಗಳ ಮೇಲೆ, ಮೂತ್ರ ಪಿಂಡದ ಮೇಲೆ, ಜಠರದ ಮೇಲೆ ಭೀಕರ ಪರಿಣಾಮಗಳುಂಟಾಗುತ್ತವೆ.
ಮನುಷ್ಯರ ಆರೋಗ್ಯವನ್ನೂ ಮೀರಿ ಪರಿಸರದ ನಾಶವನ್ನು ಗಮನಿಸಿದಾಗ ಇನ್ನೂ ಆತಂಕಕಾರಿಯಾಗಿ ಕಾಣುತ್ತದೆ. ಕಲುಷಿತ ನದಿಗಳು ಜಲಚರಗಳ ಜೀವವೈವಿಧ್ಯತೆಗೆ ಧಕ್ಕೆ ಉಂಟುಮಾಡುತ್ತದೆ, ಮೀನುಗಳನ್ನು ಕೊಲ್ಲುತ್ತವೆ, ನೈಸರ್ಗಿಕ ಸಮತೋಲನವನ್ನೇ ಅವಲಂಬಿಸುವ ಸೂಕ್ಷ್ಮ ಜೀವಿಗಳಿಗೆ ಅಪಾಯಕಾರಿಯಾಗುತ್ತದೆ. ನದಿ ವಿಸ್ತಾರ, ತೊರೆಗಳ ಯೂಟ್ರೋಫಿಕೇಷನ್ ಸಾಮಾನ್ಯವಾಗಿ ಅತಿಯಾದ ಪೆÇೀಷಕಾಂಶಗಳ ಹೊರಸೂಸುವಿಕೆಯಿಂದ ಉಂಟಾಗುತ್ತದೆ, ಇದರಿಂದ ಆಮ್ಲಜನಕ ಪ್ರಮಾಣ ಕಡಿಮೆಯಾಗಿ, ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತವೆ. ಇದು ಒಳನಾಡಿನ ಮೀನುಗಾರಿಕೆ ಮತ್ತು ನದಿ ಆಧಾರಿತ ಜೀವನೋಪಾಯಗಳಿಗೆ ಅಪಾಯಕಾರಿಯಾಗುತ್ತದೆ.
ನೇತ್ರಾವತಿ: ಜೀವನಾಡಿ ಅಪಾಯದಲ್ಲಿ
ನೇತ್ರಾವತಿ ನದಿಯು ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಇಲ್ಲಿ 30 ಲಕ್ಷ ಜನರು ವಾಸಿಸುತ್ತಾರೆ. ಇದು ಅತ್ಯಂತ ಹೆಚ್ಚು ಕಲುಷಿತವಾದ ನದಿ ಆಗಿದೆ. ಕೆಎಸ್‍ಪಿಸಿಬಿ ನೀಡಿರುವ ಸ್ಯಾಂಪಲ್‍ಗಳು ಬಂಟ್ವಾಳ ಮತ್ತು ಉಲ್ಲಾಳ ಪ್ರದೇಶಗಳಿಂದ ಸಂಗ್ರಹಿಸಲಾಗಿದ್ದು, ಅಪಾಯಕಾರಿ ಮಟ್ಟದ ಮಾಲಿನ್ಯವನ್ನು ಸೂಚಿಸುತ್ತವೆ. ಮನೆಗಳ ತ್ಯಾಜ್ಯ, ಕೋಳಿಫಾರಂಗಳ ತ್ಯಾಜ್ಯ ಮತ್ತು ಸಣ್ಣ ಉದ್ದಿಮೆಗಳಿಂದ ಹೊರಸೂಸುವ ಕೈಗಾರಿಕಾ ತ್ಯಾಜ್ಯಗಳು ಮಾಲಿನ್ಯಕ್ಕೆ ಕಾರಣವಾಗಿವೆ. ಪರಿಸರವಾದಿಗಳು ಮಂಗಳೂರಿನ ನಗರೀಕರಣ ಪ್ರಕ್ರಿಯೆ ಮತ್ತು ದಿಕ್ಕು ದೆಸೆ ಇಲ್ಲದ ಮರಳು ಗಣಿಗಾರಿಕೆಯ ಪರಿಣಾಮವಾಗಿ ಈ ಸಮಸ್ಯೆ ಉಲ್ಬಣಿಸಿದೆ ಎಂದು ಎಚ್ಚರಿಸುತ್ತಲೇ ಇದ್ದಾರೆ. ಇದು ನದಿಯ ಸಹಜ ಹರಿವನ್ನು ಬದಲಿಸಿ, ಸ್ವಯಂ ಶುದ್ಧೀಕರಣದ ಸಾಮಥ್ರ್ಯವನ್ನು ಕಡಿಮೆ ಮಾಡುತ್ತದೆ..
ಸರ್ಕಾರ ಮತ್ತು ಮಂಡಲಿ ಪ್ರತಿಕ್ರಿಯೆ
ಈ ಶೋಧಗಳಿಗೆ ಪ್ರತಿಕ್ರಿಯಿಸಿದ ಮಂಡಲಿಯು ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಕೈಗಾರಿಕೆಗಳಿಗೆ ತಮ್ಮ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಉನ್ನತೀಕರಿಸಲು ಸೂಚಿಸಿದ್ದು, ಶೂನ್ಯ ದ್ರವ ಹೊರಸೂಸುವಿಕೆಯ ನಿಯಮಗಳನ್ನು ಅಳವಡಿಸಲು ಆಗ್ರಹಿಸಿದೆ. ತನ್ಮೂಲಕ ತ್ಯಾಜ್ಯ ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಸೂಕ್ತವಾಗಿ ಅನುಸರಿಸಲು ಕೋರಿದೆ. ಆದರೆ, ಇದು ದುರ್ಬಲವಾಗಿದ್ದು, ಸಣ್ಣ ಪುಟ್ಟ ಪಟ್ಟಣಗಳಲ್ಲಿ ತ್ಯಾಜ್ಯವು ನೇರವಾಗಿ ಯಾವುದೇ ಸಂಸ್ಕರಣೆಗೊಳಗಾಗದೆ ನದಿಗಳಲ್ಲೇ ಲೀನವಾಗುತ್ತವೆ.
ರಾಜ್ಯ ಸರ್ಕಾರವು ಈ ಬಿಕ್ಕಟ್ಟನ್ನು ಗುರುತಿಸಿದ್ದು, ಅಮೃತ್ ಜಲಾಭಿವೃದ್ಧಿ ಯೋಜನೆಯ ಅಡಿ ತ್ಯಾಜ್ಯ ನಿರ್ವಹಣೆಯ ಕ್ರಿಯೆಯನ್ನು ಉತ್ತಮಪಡಿಸಲು ಮುಂದಾಗಿದ್ದು, ಇದಕ್ಕಾಗಿ ಕ್ಲೀನ್ ಗಂಗಾ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಲಿಯ ರಾಷ್ಟ್ರೀಯ ಕಾರ್ಯಯೋಜನೆಯ ಸಹಕಾರ ಪಡೆಯಲಿದೆ. ನಿಯಮಗಳನ್ನು ಉಲ್ಲಂಘಿಸುವ ಸ್ಥಳೀಯ ಸಂಸ್ಥೆಗಳಿಗೆ ದಂಡ ವಿಧಿಸಲು ಯೋಚಿಸಲಾಗಿದೆ. ತಜ್ಞರು ಹೇಳುವಂತೆ, ಈ ನಿಯಮಗಳ ಜಾರಿ ಮಾಡುವುದರಲ್ಲಿ ನಿಧಾನವಾಗುತ್ತಿದ್ದು, ವ್ಯವಸ್ಥಿತವಾಗಿ ನಡೆಯುತ್ತಿಲ್ಲ.
ಮುಂದಿನ ಹಾದಿ
ಕರ್ನಾಟಕದ ನದಿ ಮಾಲಿನ್ಯದ ಸಮಸ್ಯೆಗಳನ್ನು ಸೂಕ್ತ ಸಹಯೋಗದೊಂದಿಗೆ ಸುಸ್ಥಿರ ಧೋರಣೆಯಡಿ ನಿರ್ವಹಿಸಬೇಕಿದೆ.
· * ಎಲ್ಲ ರೀತಿಯ ತ್ಯಾಜ್ಯ ಮತ್ತು ತ್ಯಾಜ್ಯ ಸಂಸ್ಕರಣಾ ಮೂಲ ಸೌಕರ್ಯಗಳನ್ನು ಎಲ್ಲ ನಗರ, ಉಪನಗರಗಳ ವ್ಯಾಪ್ತಿಯಲ್ಲಿ ಉನ್ನತೀಕರಣಗೊಳಿಸುವುದು.
· * ನಿಯಮಿತವಾಗಿ ನೀರಿನ ಗುಣಮಟ್ಟ ನಿರ್ವಹಣೆ ನಡೆಸುವುದು ಮತ್ತು ಮಾಲಿನ್ಯದ ದತ್ತಾಂಶವನ್ನು ಸಾರ್ವಜನಿಕವಾಗಿ ವರದಿ ಮಾಡುವುದು.
· * ಸಮುದಾಯ ಜಾಗೃತಿಯ ಮೂಲಕ ಮನೆಗಳಲ್ಲಿ ತ್ಯಾಜ್ಯವನ್ನು ಸುರಿಯುವ ಪದ್ಧತಿಯನ್ನು ನಿಯಂತ್ರಿಸುವುದು.
· * ನೈಸರ್ಗಿಕ ಶೋಧನೆಯನ್ನು ಹೆಚ್ಚಿಸಲು ನದಿ ತೀರದ ಸಸ್ಯವರ್ಗದ ಮರುಸ್ಥಾಪನೆ ಮಾಡುವುದು.
· * ಕಟ್ಟುನಿಟ್ಟಾದ ಕೈಗಾರಿಕಾ ನಿಬಂಧನೆಗಳನ್ನು ರೂಪಿಸಿ, ತ್ಯಾಜ್ಯ ಹೊರಸೂಸುವಿಕೆಯನ್ನು ಆನ್ ಲೈನ್ ಮೂಲಕ ಮೇಲ್ವಿಚಾರಣೆ ನಡೆಸಿ, ಕೂಡಲೇ ಕ್ರಮ ಕೈಗೊಳ್ಳುವುದು.
Comments
Post a Comment