ದೇವಮಾನವರು ಅತೀತರಾದಾಗ - ಅಸಾರಾಂನಿಂದ ಧರ್ಮಸ್ಥಳದವರೆಗೆ

 2013ರಲ್ಲಿ 16 ವರ್ಷದ ಬಾಲಕಿಯೊಬ್ಬಳು ಸ್ವಘೋಷಿತ ದೇವಮಾನವ ಅಸಾರಾಂ ಅವರ ಮೇಲೆ ಅತ್ಯಾಚಾರದ ಆರೋಪ ಮಾಡಿದಾಗ, ಭಾರತದ ಸಾರ್ವಜನಿಕ ಪ್ರಜ್ಞೆ ಅಲ್ಲಾಡಿಹೋಗಿತ್ತು. (ಇದಕ್ಕೂ ಮುನ್ನ ಅಸಾರಾಂ ಮತ್ತು ಅವರ ಬೆಂಬಲಿಗರು ಹಲವು ಅತ್ಯಾಚಾರ, ಹತ್ಯೆಗಳಿಗೆ ಕಾರಣರಾಗಿದ್ದರು. 2013ರ ಪ್ರಕರಣವು ಅಸಾರಾಂ ಅವರನ್ನು ಬೆನ್ನಟ್ಟಲು ಒಂದು ಸ್ಪಷ್ಟ ಅವಕಾಶ ಒದಗಿಸಿತ್ತು.) ಆದರೆ ಆರಂಭದಲ್ಲಿ ಆಕ್ರೋಶದ ಬದಲು ವ್ಯಕ್ತವಾಗಿದ್ದು ನಿರಾಕರಣೆ. ಆತನನ್ನು ಆರಾಧಿಸುತ್ತಿದ್ದ ಲಕ್ಷಾಂತರ ಜನರು, ದೇವಮಾನವನೊಬ್ಬ ಇಂತಹ ಹೀನ ಅಪರಾಧ ಮಾಡುತ್ತಾನೆ ಎನ್ನುವುದನ್ನು ನಂಬಲು ಒಪ್ಪಲಿಲ್ಲ ಅಸಾರಾಂನ ಸಾಮ್ರಾಜ್ಯ, ದೇವಾಲಯಗಳು, ಶಾಲೆಗಳು, ಮಾಧ್ಯಮ ವಾಹಿನಿಗಳು, ಅಂಧ ಭಕ್ತರ ಪಡೆಗಳು, ಆತನ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತವು. ತದನಂತರ ನಡೆದದ್ದು ಸಂತ್ರಸ್ತೆಯ ವಿರುದ್ಧ ಸಮರ ಮಾತ್ರವಲ್ಲ, ಸತ್ಯದ ವಿರುದ್ಧವೇ ಯುದ್ಧ ನಡೆದಿತ್ತು. ವರದಿಯನ್ನು ಪ್ರಕಟಿಸಿದ  ಪತ್ರಕರ್ತರನ್ನು ಬೆದರಿಸಲಾಯಿತು, ಅವರ ಮೇಲೆ ದಾಳಿ ಮಾಡಲಾಯಿತು, ಅಪಮಾನಿಸಲಾಯಿತು. ಕೆಲವರು ಭೂಗತರಾಗಬೇಕಾಯಿತು. ಮಾಧ್ಯಮದ ಬೆನ್ನೆಲುಬು ನೈತಿಕವಾಗಿ ಅಗ್ನಿಪರೀಕ್ಷೆಗೊಳಗಾಗಿತ್ತು. ಬಹುತೇಕವಾಗಿ ಇದು ಕುಸಿದಿದ್ದವು.

ಇದೇ ಮಾದರಿಯನ್ನು ಈಗ ಕರ್ನಾಟಕದಲ್ಲಿ ನೋಡುತ್ತಿದ್ದೇವೆ. ಧರ್ಮಸ್ಥಳದಲ್ಲಿ ದೇವಮಾನವ ಕುಟುಂಬವು ಹಲವು ದಶಕಗಳ ಕಾಲ ದಾನ ಧರ್ಮಗಳಲ್ಲಿ, ಸರಳತೆ ಮತ್ತು ಧರ್ಮನಿಷ್ಠೆಯ ನೆಪದಲ್ಲಿ, ಇದೇ ರೀತಿಯ ಭಕ್ತಿ, ಭೀತಿ ಮತ್ತು ನಿರಾಕರಣೆ ನಡೆದಿದೆ. ನಿಗೂಢ ಸಾವುಗಳು, ಲೈಂಗಿಕ ದೌರ್ಜನ್ಯಗಳ ಆರೋಪಗಳು ಎದುರಾದಾಗ, ವೇದವಲ್ಲಿ ಹತ್ಯೆಯ ಪ್ರಕರಣವು ಬಯಲಾದಾಗ, ದೇವಾಲಯದ ನಗರಿ ಒಗ್ಗಟ್ಟಾಗಿತ್ತು. ಪೆÇಲೀಸರು ವಿನಮ್ರರಾಗಿದ್ದರು, ರಾಜಕಾರಣಿಗಳು ದೇವಮಾನವ ಕುಟುಂಬಕ್ಕೆ ಗೌರವಸೂಚಕವಾಗಿ ನಡೆದುಕೊಂಡರು. ಬಹುಪಾಲು ಮುಖ್ಯವಾಹಿನಿ ಮಾಧ್ಯಮಗಳು ಅನ್ಯಮನಸ್ಕವಾಗಿ ವರ್ತಿಸಿದವು. ಶ್ರದ್ಧೆ ನಂಬಿಕೆಯನ್ನು ಘಾಸಿಗೊಳಿಸಲು ಯಾರೂ ಮುಂದೆ ಬರಲಿಲ್ಲ. ಅಸಾರಾಂ ಸಾಮ್ರಾಜ್ಯದಲ್ಲಿ ಮತ್ತು ಧರ್ಮಸ್ಥಳದಲ್ಲಿ ದೈವೀಕ ಮುಸುಕು ಮಾನವನ ದುಷ್ಕøತ್ಯಗಳಿಗೆ ಕವಚಗಳಾದವು.

ಅಸಾರಾಂನ ಪತನ ಅಷ್ಟು ಸುಲಭವಾಗಿ ಆಗಲಿಲ್ಲ. ಅವರ ಜಾಲದಲ್ಲಿ ನಿವೃತ್ತ ಅಧಿಕಾರಶಾಹಿಗಳು, ನ್ಯಾಯಮೂರ್ತಿಗಳು, ರಾಜಕಾರಣಿಗಳು ಇದ್ದವು. ಇವರು ತಮ್ಮ ಅಧಿಕಾರ ಮತ್ತು ಹಣವನ್ನು ಅಸಾರಾಂಗೆ ಅರ್ಪಿಸಿದ್ದರು. ಹಲವು ತಿಂಗಳುಗಳ ಕಾಲ ಬಂಧನದಿಂದ ತಪ್ಪಿಸಿಕೊಂಡಿದ್ದ ಅಸಾರಾಂ ಬೆಂಬಲಕ್ಕೆ ನಿಂತ ಭಕ್ತಾದಿಗಳು ರಸ್ತೆಗೆ ಅಡ್ಡಲಾಗಿ ನಿಂತರು. ಪೆÇಲೀಸ್‍ವಾಹನಗಳ ಮೇಲೆ ದಾಳಿ ನಡೆಸಿದರು. ಮಾಧ್ಯಮಗಳ ಕಚೇರಿಗಳನ್ನು ಧ್ವಂಸ ಮಾಡಿದರು. ಆಜ್‍ತಕ್, ಎಬಿಪಿ ನ್ಯೂಸ್ ಮತ್ತು ಸ್ಥಳೀಯ ಗುಜರಾತಿ ಮಾಧ್ಯಮಗಳ ವರದಿಗಾರರು ದೈಹಿಕ ಹಲ್ಲೆ ಎದುರಿಸಬೇಕಾಯಿತು. ಅವರ ಕ್ಯಾಮರಾಗಳನ್ನು ಒಡೆದುಹಾಕಲಾಯಿತು, ಚಾರಿತ್ರ್ಯವಧೆಗೆ ಒಳಗಾಗಬೇಕಾಯಿತು. ಆದರೂ ಧೈರ್ಯವಾಗಿ ಮುಂದುವರೆದ ಸಂಪಾದಕರು ಸುಳ್ಳು ಆರೋಪಗಳ ಕಾನೂನು ನೋಟಿಸ್ ಸ್ವೀಕರಿಸಬೇಕಾಯಿತು. ಸಾಮಾಜಿಕ ಮಾಧ್ಯಮಗಳ ಗುಂಪು ಅವರ ಮೇಲೆ ಮುಗಿಬಿದ್ದಿತ್ತು. ಅಂತಿಮವಾಗಿ, ಕೆಲವೇ ಪ್ರಾಮಾಣಿಕ ದಿಟ್ಟ ಪತ್ರಕರ್ತರು, ಕೆಲವು ದಿಟ್ಟ ಅಧಿಕಾರಿಗಳು, ಅಸರಾಂ ಶಿಕ್ಷೆಗೊಳಗಾಗುವಂತೆ ಮಾಡಿದ್ದರು.

ಕರ್ನಾಟಕದಲ್ಲಿ ಇದೇ ರೀತಿಯ ಧೈರ್ಯ ಕಂಡುಬರುತ್ತಿಲ್ಲ. ಕರ್ನಾಟಕದ ಸುದ್ದಿಪತ್ರಿಕೆಗಳು, ಒಂದು ಕಾಲದಲ್ಲಿ ನಿರ್ಭಿಡೆಗೆ ಹೆಸರಾಗಿದ್ದು, ಈಗ ಧರ್ಮಸ್ಥಳದ ಪವಿತ್ರ ಗೌರವವನ್ನು ಪ್ರಶ್ನಿಸಲು ಸಹ ಹಿಂಜರಿಯುತ್ತಿವೆ. ಕೆಲವೇ ಸ್ವತಂತ್ರ ಧ್ವನಿಗಳು ಪ್ರಯತ್ನ ಮುಂದುವರೆಸಿವೆ, ಭೂ ಕಬಳಿಕೆ, ರಾಜಕೀಯ ದುರ್ಬಳಕೆ, ದೇವಸ್ಥಾನದ ಹಣದ ದುರುಪಯೋಗ, ದೇವಸ್ಥಾನದ ಸಿಬ್ಬಂದಿಗೆ ಸಂಬಂಧಿಸಿದ ನಿಗೂಢ ಅಸಹಜ ಸಾವುಗಳು ಇವೆಲ್ಲವನ್ನೂ  ಬೆಂಬತ್ತಿದ್ದಾರೆ. ಆದರೆ ಕತೆಗಳು ಬೆಳಗಾಗುವುದರೊಳಗಾಗಿ ಮರೆಯಾಗಿರುತ್ತವೆ. ಜಾಹಿರಾತು ವರಮಾನ, ರಾಜಕೀಯ ಕೃಪೆ, ಧರ್ಮಸ್ಥಳವನ್ನು ಮುಟ್ಟಕೂಡದು ಎಂಬ ಅಲಿಖಿತ ಒಪ್ಪಂದ ಈ ನಿರೂಪಣೆಗಳನ್ನು ಮುಚ್ಚಿಹಾಕಿವೆ.

ಅಸಾರಾಂನ ಮಾಧ್ಯಮದ ಕಾರ್ಯತಂತ್ರ ಬೆದರಿಕೆಯ ಮಾದರಿಯನ್ನು ಅನುಸರಿಸಿತ್ತು. ಧರ್ಮಸ್ಥಳದ ತಂತ್ರ ಕೊಂಚ ಮೆದುವಾಗಿ ತೋರುತ್ತದೆ, ಆದರೆ ಪ್ರಭಾವ ಬೀರುವಂತಿರುತ್ತದೆ. ಮಾಧ್ಯಮ ಸಮೂಹಗಳಿಗೆ ಮುಖ್ಯಸ್ಥನಿಂದ ಒಂದು ದೂರವಾಣಿ ಕರೆ , ದೇವಸ್ಥಾನದ ಹಣದಿಂದ ಸ್ಕಾಲರ್‍ಷಿಪ್ ಅಥವಾ ವರದಿಯನ್ನು ಕೈಬಿಡುವಂತೆ ಸದ್ದಿಲ್ಲದೆ ಮನವಿ ಮಾಡುವುದು ಈ ತಂತ್ರಗಾರಿಕೆಯ ಭಾಗವಾಗಿದೆ. ಫಲಿತಾಂಶ ಒಂದೇ, ಮಾಧ್ಯಮಗಳು ಮೌನವಾಗುತ್ತವೆ. ಮಾಧ್ಯಮಗಳು ಅನುಕೂಲಸಿಂಧುಗಳಾದಾಗ ಸಾರ್ವಜನಿಕರು ಅಧಿಕಾರ ಕೇಂದ್ರದ ವಿರುದ್ಧದ ತಮ್ಮ ಪ್ರಮುಖ ಅಸ್ತ್ರವನ್ನು ಕಳೆದುಕೊಳ್ಳುತ್ತಾರೆ.

ಈ ನಿರ್ಭಿಡೆಯಲ್ಲಿ ಲಿಂಗತ್ವದ ಮಾದರಿಯನ್ನೂ ಗುರುತಿಸಬಹುದು. ಅಸಾರಾಂ ಆಶ್ರಮಗಳು ಆಧ್ಯಾತ್ಮಿಕ ಚಿಕಿತ್ಸೆಯ ಹೆಸರಿನಲ್ಲಿ ಬೇಟೆಯಾಡುವ ಕೇಂದ್ರಗಳಾದವು. ಸಂತ್ರಸ್ತರಿಗೆ ಅವರನ್ನು ಶುದ್ಧೀಕರಿಸಲಾಗುತ್ತಿದೆ ಎಂದು ನಂಬಿಸಲಾಯಿತು. ಧರ್ಮಸ್ಥಳದಲ್ಲಿ ಉನ್ನತ ಶ್ರೇಣಿಯು ಶಾಶ್ವತವಾಗಿ ಬೇರೂರಿದ್ದು, ಮಹಿಳೆಯರು ಸದಾ ಅಂಚಿನಲ್ಲಿರುತ್ತಾರೆ, ದನಿ ಇಲ್ಲದವರಾಗಿ, ಅಗೋಚರವಾಗಿಯೇ ಇರುತ್ತಾರೆ.  ದಶಕಗಳ ಮುನ್ನ ವೇದವಲ್ಲಿ ಮತ್ತು ಪ್ರೇಮಲತಾ ಅವರ ಪ್ರಕರಣಗಳು ಸಂಭವಿಸಿದಾಗ ಪೆÇಲೀಸ್ ಮತ್ತು ಪತ್ರಿಕೆಗಳು ಪ್ರಬಲ ಕುಟುಂಬವನ್ನು ರಕ್ಷಿಸುವುದರಲ್ಲಿ ಆಸಕ್ತಿ ತೋರಿದ್ದವೇ ಹೊರತು ಸತ್ಯವನ್ನು ಕಂಡುಹಿಡಿಯಲು ಮುಂದಾಗಲಿಲ್ಲ.  ಮಹಿಳೆಯ ಘನತೆ ಸ್ಥಳೀಯ ಭಕ್ತಿಗೆ ತೆತ್ತ ಬೆಲೆ ಆಯಿತು.

ಅಸಾರಾಂಗೆ ಶಿಕ್ಷೆಯಾಗಿದ್ದು ಒಂದು ಅಂಶವನ್ನು ಹೊರಗೆಡಹಿದೆ. ಆತನ ಮಾತ್ರ ಅಲ್ಲದೆ ಯಾವುದೇ ದೇವ ಮಾನವರು ಕಾನೂನು ಮತ್ತು ತರ್ಕವನ್ನು ಮೀರಿದರವಾಗಿರುವುದಿಲ್ಲ ಎಂಬ ತಿಳುವಳಿಕೆ ಚರ್ಚೆಯಾಗಬೇಕಿತ್ತು. ಆದರೆ ಹೊಸ ಅಸಾರಾಂಗಳು ಹುಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಕೇಸರಿ ವಸ್ತ್ರ ತೊಟ್ಟರೆ ಕೆಲವರು ಮುಂಡಾಸು ತೊಡುತ್ತಾರೆ. ಶಾಲೆ, ಆಸ್ಪತ್ರೆ, ಧರ್ಮಶಾಲೆಗಳನ್ನು ಕಟ್ಟಿಸುತ್ತಾರೆ. ಎಲ್ಲವೂ ಸಹ ನೈತಿಕ ಕವಚಗಳಾಗುತ್ತವೆ. ಅವರ ಅನುಯಾಯಿಗಳು ಶ್ರದ್ಧೆಯ ಬಗ್ಗೆ ಇರುವ ಭಯವನ್ನೇ ಆಧ್ಯಾತ್ಮಿಕತೆಗೆ ಶರಣಾದಂತೆ ಎಂದು ತಪ್ಪಾಗಿ ಭಾವಿಸುತ್ತಾರೆ. ಅವರ ವರ್ತನೆಯನ್ನು ಯಾರಾದರೂ ಪ್ರಶ್ನಿಸಿದರೆ, ಅದನ್ನು ಧರ್ಮನಿಂದನೆ ಎನ್ನಲಾಗುತ್ತದೆ.

ಉತ್ತರದಾಯಿತ್ವವನ್ನು ಪ್ರಶ್ನಿಸುವುದರಲ್ಲಿ ಯಾವ ಧರ್ಮನಿಂದನೆಯೂ ಇರಲು ಸಾಧ್ಯವಿಲ್ಲ. ನಿಜವಾದ ಪಾಪಕರ್ಮ ಇರುವುದು ಪಾವಿತ್ರ್ಯತೆಯ ಹೆಸರಿನಲ್ಲಿ ಅನಿಬರ್ಂಧಿತ ಅಧಿಕಾರವನ್ನು ಬಳಸುವುದರಲ್ಲಿ. ಅಸಾರಾಂ ಅತ್ಯಾಚಾರ ಮಾಡಿ, ಬೆದರಿಕೆ ಹಾಕಿ, ಹತ್ಯೆ ಮಾಡಿದರೂ ದೈವತ್ವವನ್ನು ಅಪೇಕ್ಷಿಸಬಹುದಾದರೆ, ಯಾವುದೇ ವ್ಯಕ್ತಿಯಾದರು ಸಾಮಾಜಿಕ ಗೌರವ ಮತ್ತು ರಾಜಕೀಯ ಮೌನವನ್ನು ತನ್ನ ರಕ್ಷಣೆಗಾಗಿ ಬಳಸಿಕೊಳ್ಳಬಹುದು. ಶ್ರದ್ಧೆ, ಅಂಧ ಶ್ರದ್ಧೆಯಾದಾಗ, ಅದು ಅಪರಾಧಗಳಿಗೆ ಒಂದು ನೆಪವಾಗುತ್ತದೆ.

ಅಸಾರಾಂನನ್ನು ಬಯಲಿಗೆಳೆದ ಪತ್ರಕರ್ತರ ಧೈರ್ಯವೇ ನಮಗೆ, ಸತ್ಯವನ್ನೇ ತ್ಯಾಗ ಎಂದು ಭಾವಿಸುವಾಗ ಭಕ್ತಿ ಮತ್ತು ಪ್ರಜಾಪ್ರಭುತ್ವ ಒಟ್ಟಾಗಿರಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಮನದಟ್ಟು ಮಾಡುತ್ತದೆ. ಇದೇ ನೈತಿಕ ಸವಾಲು ಕರ್ನಾಟಕವನ್ನು ಬಾಧಿಸುತ್ತಿದೆ. ದೇವಮಾನವರ ಅಪರಾಧಗಳನ್ನೆಲ್ಲಾ ಮುಚ್ಚಿ ಹಾಕಿ ಅವರನ್ನು ಆರಾಧಿಸಲು ರಾಜ್ಯ ಸಜ್ಜಾಗಿದೆಯೇ? ಅಥವಾ ಧರ್ಮ ಮತ್ತು ವಂಚನೆಯನ್ನು ಬೇರ್ಪಡಿಸುತ್ತದೆಯೇ ?

ಅಲ್ಲಿಯವರೆಗೂ ಧರ್ಮಸ್ಥಳ, ಅಸಾರಾಂ ಆಶ್ರಮದಂತೆಯೇ, ಸ್ಮಾರಕವಾಗಿ ಉಳಿಯುತ್ತದೆ. ಆದರೆ ಈ ಸ್ಮಾರಕ ಸತ್ಯಕ್ಕಾಗಿ ಅಲ್ಲ ಭೀತಿಯ ಸ್ಮಾರಕವಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again