ಕಾನೂನು ಮೀರಿದ ರಾಜಕಾರಣ ಅಪಮಾನಕರ ಕ್ರಮ
ಕರ್ನಾಟಕ ಸರ್ಕಾರ ಇತ್ತೀಚಿನ ನಿರ್ಣಯವೊಂದರಲ್ಲಿ 60 ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆದಿರುವುದು, ರಾಜ್ಯದ ದೀರ್ಘ ಇತಿಹಾಸದಲ್ಲಿ ರಾಜಕೀಯ ಕಾರಣಗಳಿಗಾಗಿ ಕಾನೂನು ಮೀರುವ ಅಧ್ಯಾಯದ ಮತ್ತೊಂದು ಅವಮಾನಕರ ಪ್ರಸಂಗವಾಗಿದೆ. ಸರ್ಕಾರದ ಈ ಕ್ರಮ ಅಸಮರ್ಥನೀಯವಾಗುವುದು ಪ್ರಕರಣಗಳ ಸಂಖ್ಯೆಯಿಂದಲ್ಲ, ಬದಲಾಗಿ, ಅಳಿಸಿಹಾಕುವ ಅಪರಾಧಗಳ ಸ್ವರೂಪಗಳಿಗಾಗಿ. ಇವಾವುದೂ ಹಾನಿ ಮಾಡದ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳಲ್ಲ. ಇವುಗಳ ಪೈಕಿ 11 ಪ್ರಕರಣಗಳು, 2019ರಲ್ಲಿ ರಾಮನಗರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಂಧನದ ಹಿನ್ನೆಲೆಯಲ್ಲಿ ಈ ಗಲಭೆ ಸಂಭವಿಸಿತ್ತು, ಜನರ ಗುಂಪು ಪೆÇಲೀಸರತ್ತ ಕಲ್ಲು ತೂರಿ ಗಾಯಗೊಳಿಸಲಾಗಿತ್ತು. ಇತರ ಪ್ರಕರಣಗಳು 2023ರಲ್ಲಿ ಆಂತರಿಕ ಮೀಸಲಾತಿಯ ವಿಚಾರದಲ್ಲಿ ಶಿವಮೊಗ್ಗದಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ್ದು. ಅಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸದ ಬಳಿ ಸಂಘರ್ಷ ನಡೆದಿತ್ತು. ಇನ್ನಿತರ ಪ್ರಕರಣಗಳು ಗಣೇಶ ಚತುರ್ಥಿ ಮೆರವಣಿಗೆ, ರಾಣಿ ಬೆನ್ನೂರಿನಲ್ಲಿ ನಡೆದ ಕೋಮು ಗಲಭೆಗಳು, 2019ರ ಚಿತ್ತಾಪುರದಲ್ಲಿ ಕಲ್ಲುತೂರಾಟದಲ್ಲಿ ಆರೋಪ ಹೊತ್ತಿದ್ದ 33 ಜನರು ಪೆÇಲೀಸರ ಮೇಲೆ ದಾಳಿ ನಡೆಸಿತ್ತು. ಜಾನುವಾರು ಸಾಗಾಣಿಕೆಯ ವಾಹನವೊಂದನ್ನು ವಶಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಗಲಭೆ ನಡೆದಿತ್ತು.
ಈ ಗಂಭೀರ ಅಪರಾಧಗಳು ದೊಂಬಿ, ಗಲಭೆ, ಸಾರ್ವಜನಿಕ ಆಸ್ತಿಪಾಸ್ತಿಯ ಹಾನಿ, ಪೆÇಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಇತ್ಯಾದಿ ಪ್ರಕರಣಗಳನ್ನು ಒಳಗೊಂಡಿವೆ. ಇವುಗಳನ್ನು ರಾಜಕೀಯ ಸ್ವರೂಪದ್ದು ಎಂದು ಪರಿಗಣಿಸಿ ರದ್ದುಪಡಿಸುವುದು ಕಾನೂನು ಮತ್ತು ಉತ್ತರದಾಯಿತ್ವ ಅಪೇಕ್ಷಿಸುವ ನಾಗರಿಕರಿಗೆ ಅಪಮಾನ ಮಾಡಿದಂತೆ. ಸರ್ಕಾರದ ಸಮರ್ಥನೆಯನ್ನು ವಾಸ್ತವದ ನೆಲೆಯಲ್ಲಿ ಒಪ್ಪಲಾಗದು. ಕ್ರಿಮಿನಲ್‍ಗಳು ಪೆÇಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದಾಗ, ಸರ್ಕಾರದ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದಾಗ ಅವರಿಗೆ ರಾಜಕೀಯ ರಕ್ಷಣೆಯ ಬಹುಮಾನ ನೀಡಿದರೆ, ಕಾನೂನಿಗೆ ಯಾರು ಗೌರವ ಕೊಡುತ್ತಾರೆ?
ಕೆಲವು ಮೊಕದ್ದಮೆಗಳು ರಾಜಕೀಯ ಪ್ರೇರಿತವಾಗಿದ್ದವು. ಅದರಲ್ಲಿ ಸತ್ಯ ಇರಲಿಲ್ಲ ಎಂದು ವಾದಿಸುವುದು ಒಪ್ಪುವಂತಹುದಲ್ಲ. ಅಪರೂಪದ ಪ್ರಕರಣಗಳಲ್ಲಿ - ರೈತರ ಪ್ರತಿಭಟನೆ, ಕಾರ್ಮಿಕರ ಹೋರಾಟ, ಶಾಂತಿಯುತ ಪ್ರತಿಭಟನೆಗಳಲ್ಲಿ - ಮಾನವೀಯ ನೆಲೆಯಲ್ಲಿ ಪ್ರಕರಣಗಳನ್ನು ಹಿಂಪಡೆಯಬಹುದು. ಆದರೆ ಈ ತರ್ಕವನ್ನೇ ಹಿಂಸಾತ್ಮಕ ಅಪರಾಧಗಳಿಗೆ ಅನ್ವಯಿಸಲಾಗುವುದಿಲ್ಲ. ಇಲ್ಲಿ ಅನುಕಂಪಕ್ಕಿಂತಲೂ ಹೆಚ್ಚಾಗಿ ರಾಜಕೀಯ ಅವಶ್ಯಕತೆ, ಪಕ್ಷದ ಕಾರ್ಯಕರ್ತರನ್ನು, ಪ್ರಭಾವಶಾಲಿ ನಾಯಕರನ್ನು ಕಾಪಾಡಲು ಕಾರ್ಯಾಂಗವನ್ನು ದುರ್ಬಳಕೆ ಮಾಡಿಕೊಳ್ಳುವುದು ಸ್ಪಷ್ಟ ಉದ್ದೇಶವಾಗಿ ಕಾಣುತ್ತದೆ.
ದುರಂತ ಎಂದರೆ, ಈ ರೀತಿ ಸರಕಾರಗಳು ಕ್ರಿಮಿನಲ್‍ಗಳ ವಿರುದ್ಧ ಪ್ರಕರಣಗಳನ್ನು ಹಿಂಪಡೆದಿರುವುದು ಮೊದಲ ಸಲ ಏನಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ರಾಜಕೀಯವಾಗಿ ಅಹಿತಕರವಾದ ಮೊಕದ್ದಮೆಗಳನ್ನು ಅಳಿಸಿಹಾಕಿವೆ. ಪ್ರತಿಬಾರಿಯೂ ಕರ್ನಾಟಕದ ಹೈಕೋರ್ಟ್ ಈ ದುರ್ಬಳಕೆಗೆ ತಡೆಯಾಗಿ ನಿಂತಿದೆ. ಈ ವರ್ಷದ ಮೇ ತಿಂಗಳಲ್ಲಿ 43 ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ಪ್ರಯತ್ನವನ್ನು ತಡೆಹಿಡಿದಿತ್ತು. ಇದರಲ್ಲಿ 2022ರ ಹುಬ್ಬಳ್ಳಿ ಗಲಭೆಗಳೂ ಇದ್ದವು. ಅಲ್ಲಿ ಜನರ ಗುಂಪು ಪೆÇಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಅಧಿಕಾರಿಗಳನ್ನು ಗಾಯಗೊಳಿಸಿತ್ತು. ಹೈಕೋರ್ಟಿನ ವಿಭಾಗೀಯ ಪೀಠವು ಇಂತಹ ಹಿಂಪಡೆಯುವ ಕ್ರಮಗಳು ಕ್ರಿಮಿನಲ್ ಪೆÇ್ರಸೀಜರ್ ಕೋಡ್ ಸೆಕ್ಷನ್ 321ರ ಉಲ್ಲಂಘನೆಯಾಗುತ್ತದೆ ಎಂದು ಹೇಳಿ, ಸಾರ್ವಜನಿಕ ಪ್ರಾಸಿಕ್ಯೂಟರ್ ಈ ಹಿಂಪಡೆತವನ್ನು ಪರಿಶೀಲಿಸಿ ನ್ಯಾಯಾಲಯದ ಅನುಮತಿ ಪಡೆಯಬಹುದೇ ಹೊರತು, ಸಚಿವ ಸಂಪುಟ ಅಲ್ಲ ಎಂದು ಹೇಳಿತ್ತು. ನ್ಯಾಯಾಲಯವು ಸರ್ಕಾರದ ಕ್ರಮವನ್ನು ಖಂಡಿಸಿದ್ದೇ ಅಲ್ಲದೆ ಅದು ಕಾನೂನು ನಿಯಮವನ್ನು ನಿರ್ಲಕ್ಷಿಸುವ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಕ್ರಮ ಎಂದು ಬಣ್ಣಿಸಿತ್ತು.
ಆದಾಗ್ಯೂ ನ್ಯಾಯಾಂಗದಿಂದ ಹಲವು ಬಾರಿ ನಿರಾಕರಿಸಲ್ಪಟ್ಟು, ಖಂಡಿಸಲ್ಪಟ್ಟರೂ, ಸರ್ಕಾರಗಳು ನಿರ್ಭೀತಿಯಿಂದ ಈ ಕ್ರಮ ಕೈಗೊಳ್ಳುತ್ತಲೇ ಇವೆ. ಇದರ ಪರಿಣಾಮಗಳು ಭೀಕರವಾಗಿರುತ್ತವೆ. ಅವರ ಮೇಲೆ ದಾಳಿ ನಡೆಸಿದವರ ವಿರುದ್ಧ ಮೊಕದ್ದಮೆ ರದ್ದುಪಡಿಸಿದರೆ, ಪೆÇಲೀಸರ ನೈತಿಕ ಶಕ್ತಿ ಕುಸಿಯುತ್ತದೆ. ನ್ಯಾಯ ವಿತರಣೆಯನ್ನು ಆಯ್ಕೆ ಮಾಡಿದ ಜನರಿಗೆ ಒದಗಿಸುವುದು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ. ಪ್ರಭಾವಶಾಲಿ ವ್ಯಕ್ತಿಗಳಿಗೆ ಸಂಬಂಧಿಸಿದವರಿಗೆ ಈ ಅನುಕೂಲ ಒದಗಿಸುವುದು ಆಡಳಿತ ವ್ಯವಸ್ಥೆಯಲ್ಲಿ ಜನರ ವಿಶ್ವಾಸವನ್ನು ಕುಗ್ಗಿಸುತ್ತದೆ. ಕೊನೆಯದಾಗಿ ಪ್ರಜಾಪ್ರಭುತ್ವ ಅಳ್ವಿಕೆಯೇ ನಗಣ್ಯವಾಗಿ, ಕಾನೂನುಗಳನ್ನು ಕೇವಲ ಅನುಕೂಲಕ್ಕೆ ತಕ್ಕಂತೆ ಬಳಸುವ ಮೂಲಕ ಪಕ್ಷಪಾತ ನೀತಿಯನ್ನು ಅನುರಿಸುವುದು, ಅಪಾಯಕಾರಿಯಾಗುತ್ತದೆ.
ರಾಜಕೀಯ ಅನುಕೂಲತೆಗಳಿಂದ ಸಾರ್ವಜನಿಕರ ಭದ್ರತೆ ಮತ್ತು ನ್ಯಾಯಾಂಗದ ಅಧಿಕಾರವನ್ನು ಮೀರಿ ನಡೆಯುವ ಮೂಲಕ ಕರ್ನಾಟಕದ ಆಳುವ ವರ್ಗಗಳು ಮತ್ತೊಮ್ಮೆ ಗಂಭೀರ ಸಂದೇಶವನ್ನು ರವಾನಿಸಿದ್ದಾರೆ. ಈ ರಾಜ್ಯದಲ್ಲಿ ತಪ್ಪು ಮಾಡಿದವರನ್ನು, ಕಾನೂನು ಪ್ರಕಾರ ಶಿಕ್ಷಿಸುವುದಕ್ಕಿಂತಲೂ ಹೆಚ್ಚಾಗಿ, ರಕ್ಷಿಸಲಾಗುತ್ತದೆ ಎಂಬ ಸಂದೇಶ ಸ್ಪಷ್ಟವಾಗುತ್ತದೆ. ನ್ಯಾಯಾಲಯಗಳು ಕಡ್ಡಾಯವಾಗಿ ಇಂತಹ ಪ್ರಸಂಗಗಳನ್ನು ತಡೆಗಟ್ಟಿ, ನಾಗರಿಕ ಸಮಾಜವು ಒತ್ತಡ ಹೇರುತ್ತಿದ್ದರೆ, ಈ ರೀತಿಯ ಶಿಕ್ಷಾಭೀತಿ ಇಲ್ಲದ ಕ್ರಮಗಳು ಸಂಭವಿಸುವುದಿಲ್ಲ. ಇಲ್ಲವಾದರೆ ಕರ್ನಾಟಕದಲ್ಲಿ ಕಾನೂನು ನಿಯಮಗಳೇ ಇಲ್ಲವಾಗುತ್ತವೆ.
Comments
Post a Comment