ಹಂಪನಾ ಗೊರೂರು ಪ್ರಶಸ್ತಿಗೆ ಅರ್ಹರೇ?

 


ಸಾಹಿತ್ಯ ಎನ್ನುವುದು ಕೇವಲ ಅಕ್ಷರಗಳ ಗುಚ್ಛವಲ್ಲ. ಅದು ಮಾನವೀಯತೆಯ ದ್ಯೋತಕ. ಎರಡನ್ನೂ ನಾವು ಪ್ರತ್ಯೇಕಿಸಿದರೆ, ನಾವು ಎರಡಕ್ಕೂ ದ್ರೋಹ ಬಗೆದಂತೆ

ಇತ್ತೀಚೆಗೆ ಹಂಪ ನಾಗರಾಜಯ್ಯ (ಹಂಪನಾ) ಅವರಿಗೆ ಗೊರೂರು ರಾಮಸ್ವಾಮಿ ಐಯ್ಯಂಗಾರ್ ಪ್ರಶಸ್ತಿಯನ್ನು ದಯಪಾಲಿಸಲಾಯಿತು. ಇದು ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ. ಮೇಲ್ನೋಟಕ್ಕೆ  ಈ ಆಯ್ಕೆಯಲ್ಲಿ ದೋಷವೇನಿದೆ ಎನಿಸಬಹುದು. ಹಂಪನಾ, ಜೈನ ಧರ್ಮದ ಬಗ್ಗೆ ಸಂಶೋಧನೆಯನ್ನು ಮಾಡಿದ್ದು, ಕನ್ನಡ ಶಾಸ್ತ್ರೀಯ ಗ್ರಂಥಗಳು ಮತ್ತು ಸಾಹಿತ್ಯ ಚರಿತ್ರೆಯ ಸಂಶೋಧನೆಯನ್ನು ಮಾಡಿದ್ದಾರೆ. ಆದರೆ ವಿಷಯ ಇಲ್ಲಿಗೇ ನಿಲ್ಲುವುದಿಲ್ಲ.

ಈ ಪ್ರಶಸ್ತಿಯು ಪ್ರಾತಃಸ್ಮರಣೀಯ ಗೊರೂರು ರಾಮಸ್ವಾಮಿ ಐಯ್ಯಂಗಾರ್ ಅವರ ಹೆಸರನ್ನು ಹೊಂದಿದ್ದು, ಗೊರೂರು ಸಹೃದಯಿ, ಮಾನವೀಯ ಮೌಲ್ಯಗಳಿಗಾಗಿಯೇ ಕನ್ನಡ ಸಾಹಿತ್ಯದಲ್ಲಿ ಹೆಸರಾಗಿದ್ದಾರೆ.  ಗೊರೂರು ಅವರ ಹಾಸ್ಯ, ವ್ಯಂಗ್ಯ ಮತ್ತು ಸಾಂಸ್ಕøತಿಕ ಕಥನಗಳು ಸಹಾನುಭೂತಿ, ಅನುಕಂಪದಿಂದ ಎಂದಿಗೂ ಹೊರತಾಗಿರಲಿಲ್ಲ. ಅವರ ಬರಹಗಳು ಜನರನ್ನು ನಗಿಸಿದ್ದವು. ಹಾಗೆಯೇ ಸಾಮಾನ್ಯ ಜೀವನದ ಘನತೆಯ ಬಗ್ಗೆ ಜನರು ಗಂಭೀರ ಚಿಂತನೆ ಮಾಡುವಂತೆ ಪ್ರೇರೇಪಿಸಿದ್ದವು. ಅವರ ಹೆಸರಿನಲ್ಲಿ ಯಾರನ್ನೇ ಆಗಲಿ ಗೌರವಿಸುವುದು ಎಂದರೆ ಪ್ರಶಸ್ತಿ ಪುರಸ್ಕøತರಿಗೆ ಸಾಹಿತ್ಯಕ ದಕ್ಷತೆ ಇರಬೇಕು, ಅಷ್ಟೇ ಅಲ್ಲದೆ ವಿಶಾಲ ನೆಲೆಯ ಮಾನವೀಯ ಸಹಾನುಭೂತಿಯೂ ಅವರ ಸಾಹಿತ್ಯದಲ್ಲಿ ವ್ಯಕ್ತವಾಗಿರಬೇಕು.

ಸಮಸ್ಯೆ ಇರುವುದೇ ಇಲ್ಲಿ. ನೈತಿಕ ಬಿಕ್ಕಟ್ಟುಗಳು ಎದುರಾದ ಗಳಿಗೆಗಳಲ್ಲಿ ಹಂಪನಾ ಅವರ  ವರ್ತನೆ ವಿಶ್ವಾಸ ಮೂಡಿಸುವಂತಿರಲಿಲ್ಲ. ಧರ್ಮಸ್ಥಳಕ್ಕೆ ಸಂಬಂಧಿಸಿದ ಅತ್ಯಾಚಾರ ಮತ್ತು ಹತ್ಯೆಗಳ ಪ್ರಕರಣಗಳಲ್ಲಿ, ಹಂಪನಾ ಸಂತ್ರಸ್ತರೊಡನೆ ಗುರುತಿಸಿಕೊಳ್ಳಲು, ಅವರಿಗಾಗಿ ನ್ಯಾಯ ಒದಗಿಸುವಂತೆ ಆಗ್ರಹಿಸಲು ನಿರಾಕರಿಸಿರುವುದೇ ಅಲ್ಲದೆ, ತನಿಖೆಯನ್ನು ಆದೇಶಿಸಿದ ರಾಜ್ಯ ಸರ್ಕಾರದ ಮಧ್ಯಪ್ರವೇಶವನ್ನು ಖಂಡಿಸಿದವರೊಡನೆ ಗುರುತಿಸಿಕೊಂಡಿದ್ದಾರೆ. ಇವರ ಸ್ಥಾನಮಾನಗಳಿಗೆ ತಕ್ಕಂತೆ ಮಾನವ ಸಂಕಟಗಳಿಗೆ ಸ್ಪಂದಿಸಲು ನಿರಾಕರಿಸಿರುವುದು, ಸಾಹಿತ್ಯದ ಮೂಲ ಧ್ಯೇಯಕ್ಕೇ ವ್ಯತಿರಿಕ್ತವಾದುದು.

ಇಲ್ಲಿ ಸಾಹಿತ್ಯಕ ರಾಜಕೀಯವೂ ಇದೆ. ಹಂಪನಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಾತಿ ಆಧಾರಿತ ಗುಂಪುಗಳ ಜೊತೆಗೆ ಗುರುತಿಸಿಕೊಂಡಿದ್ದಾರೆ, ತನ್ಮೂಲಕ ಈ ಗುಂಪುಗಳ ಸಂಕುಚಿತ ಹಿತಾಸಕ್ತಿಗಳಿಗೆ ಒತ್ತಾಸೆಯಾಗಿದ್ದಾರೆ. ಆದರೆ ಕನ್ನಡ ಸಾಹಿತ್ಯ ವಲಯವನ್ನು ಒಗ್ಗೂಡಿಸಲು ಮುಂದಾಗಿಲ್ಲ. ಈ ರೀತಿಯ ವರ್ತನೆಗಳು ಸಾಹಿತ್ಯವನ್ನು ಕೂಡಿ ಬಾಳುವ ಐಕ್ಯತೆಯ ಸಾಧ್ಯತೆಗಳನ್ನು ವಿಫಲವಾಗಿಸುತ್ತವೆ, ಕನ್ನಡ ಭಾಷೆಗೆ ಸೇತುವೆಗಳ ಅವಶ್ಯಕತೆ ಇರುವಾಗ ಹಂಪನಾ ಅವರ ಉಪಸ್ಥಿತಿ ವಿಭಜನೆಯನ್ನೇ ಹೆಚ್ಚಿಸಿದೆ.

ಈ ಕಾರಣಕ್ಕಾಗಿಯೇ ಅನೇಕರು ಗೋರೂರು ಪ್ರಶಸ್ತಿಯನ್ನು ಅನರ್ಹ ವ್ಯಕ್ತಿಗೆ ಪ್ರದಾನಿಸಲಾಗಿದೆ ಎಂದು ಭಾವಿಸುತ್ತಾರೆ. ಒಬ್ಬ ಸಾಹಿತಿಯನ್ನು ಅವರ ಪ್ರಕಟಿತ ಕೃತಿಗಳ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ ಅಥವಾ ಶೈಕ್ಷಣಿಕ ಸ್ಥಾನಮಾನಗಳ ಮೂಲಕ ಅಳೆಯಲಾಗುವುದಿಲ್ಲ. ಸಾಹಿತ್ಯವು ವಿದ್ವತ್ತನ್ನೂ ಮೀರಿದ ಒಂದು ಪ್ರಕ್ರಿಯೆಯಾಗಿದ್ದು, ಅದು ನೈತಿಕ ನಡೆ, ನುಡಿ ಮತ್ತು ಮಾನವ ಘನತೆಯ ಬಗ್ಗೆ ಇರುವ ಬದ್ದತೆಯ ದ್ಯೋತಕವಾಗಿರುತ್ತದೆ. ಪ್ರಶಸ್ತಿಗಳನ್ನು ಕೊಡುವಾಗ ಅದು ಸಾಹಿತಿಯು ಎತ್ತಿಹಿಡಿದ ಮೌಲ್ಯಗಳನ್ನೂ ಬಿಂಬಿಸುತ್ತವೆ. ಒಬ್ಬ ವಿಭಜಕ ವ್ಯಕ್ತಿಗೆ ಪ್ರಶಸ್ತಿ ನೀಡುವ ಮೂಲಕ, ಅದೂ ಗೊರೂರು ಹೆಸರಿನಲ್ಲಿ ಕೊಡುವ ಮೂಲಕ ಸಂಘಟಕರು ಗೊರೂರು ಅವರ ಪರಂಪರೆಯನ್ನು ಪ್ರತಿನಿಧಿಸುವ ಒಳಗೊಳ್ಳುವಿಕೆ ಮತ್ತು ಮನುಜ ಬಾಂಧವ್ಯವನ್ನು ನಗಣ್ಯಗೊಳಿಸುತ್ತಿದ್ದಾರೆ.

ಇಲ್ಲಿ ವಿಷಯ ಇರುವುದು ಹಂಪನಾ ಅವರ ಕೊಡುಗೆಗಳ ಬಗ್ಗೆ ಅಲ್ಲ. ಅವು ವಾಸ್ತವ ಮತ್ತು ಗುರುತಿಸಲು ಯೋಗ್ಯವಾದದ್ದು. ಆದರೆ ಗೊರೂರು ಪ್ರಶಸ್ತಿಯನ್ನು ಗೊರೂರು ಅವರ ಸ್ಫೂರ್ತಿ ಮತ್ತು ಧ್ಯೇಯವನ್ನು ಪ್ರತಿನಿಧಿಸುವ, ನೋವಿಗೆ ಸ್ಪಂದಿಸಲು ಹಿಂಜರಿಯದ, ಕಾಳಜಿ ತೋರುವ ಮೌಲ್ಯಗಳನ್ನು ಅನುಸರಿಸುವ ಸಾಹಿತಿಗೆ ನೀಡಬೇಕಾಗುತ್ತದೆ. ಇಲ್ಲವಾದರೆ ಪ್ರಶಸ್ತಿಗಳೇ ತಮ್ಮ ನೈತಿಕ ಮಾನದಂಡವನ್ನು ಕಳೆದುಕೊಂಡು ಕೇವಲ ಆಲಂಕಾರಿಕ ಆಡಂಬರವಾಗಿಬಿಡುತ್ತವೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again