ಶೈತ್ಯಾಗಾರದಲ್ಲಿ ನ್ಯಾಯ ಮತ್ತು ಸತ್ಯ

 ನಿತಾರಿ ಸರಣಿ ಕೊಲೆಗಳಿಂದ ಧರ್ಮಸ್ಥಳದವರೆಗೆ ನಡೆದಿರುವ ಹೆಣ್ಮಕ್ಕಳ ಭೀಕರ ಹತ್ಯಾಕಾಂಡಗಳು ತನಿಖಾ ಮತ್ತು ನ್ಯಾಯದಾನ ವ್ಯವಸ್ಥೆ ಮೇಲೆ ಪ್ರಭಾವಶಾಲಿಗಳ ಬಿಗಿ ಹಿಡಿತವನ್ನು, ಅಂತಿಮವಾಗಿ ಕಾನೂನಿನ ನಿಷ್ಕ್ರಿಯತೆಯನ್ನು ಸೂಚಿಸುತ್ತದೆ.

.............

ಭಾರತದ ಅಪರಾಧಿಕ ನ್ಯಾಯ ವ್ಯವಸ್ಥೆಯು ಅತಿಯಾದ ಮೊಕದ್ದಮೆಗಳ ಭಾರದಿಂದ ನಲುಗುತ್ತಿದೆ ಎಂಬ ಮಾತು ಕೇಳಿಬರುತ್ತದೆಯಾದರೂ ಈ ವ್ಯವಸ್ಥೆಯ ವೈಫಲ್ಯ ಕಾಣುವುದು ಕೇವಲ ವಿಳಂಬದಲ್ಲಿ ಮಾತ್ರವೇ ಅಲ್ಲ. ಬದಲಾಗಿ ನ್ಯಾಯ ನಿಷ್ಕರ್ಷೆಯತ್ತ ಸಾಗುವ ಧೋರಣೆಯಲ್ಲಿ. ನೊಯಿಡಾದಲ್ಲಿ ಸಂಭವಿಸಿದ ನಿಥಾರಿ ಹತ್ಯೆಗಳು, ಗುರುಗ್ರಾಮ್‍ನಲ್ಲಿ ಗುರುತಿಸಲಾಗಿರುವ ಸೆಕ್ಟರ್ 36ರಲ್ಲಿ ನಡೆದ ಮಾಂಸದಂಗಡಿಯ ಭೀಕರ ಕೃತ್ಯಗಳು ಮತ್ತು ಇನ್ನೂ ಅಪೂರ್ಣವಾಗಿರುವ ಧರ್ಮಸ್ಥಳದ ಅತ್ಯಾಚಾರ-ಹತ್ಯೆ ಪ್ರಕರಣಗಳ ತನಿಖೆ ಇವೆಲ್ಲವೂ, ಕಾನೂನು, ರಾಜಕಾರಣ ಮತ್ತು ಅಧಿಕಾರ ಕೇಂದ್ರಗಳು ಸತ್ಯವನ್ನು ದುರ್ಬಲಗೊಳಿಸಲು ಒಂದಾಗುವ ಲಕ್ಷಣವನ್ನು ಬಿಂಬಿಸುತ್ತವೆ.

ನಿಥಾರಿ ಸರಣಿ ಹತ್ಯೆಗಳು ಆರಂಭವಾಗಿದ್ದು 2006ರಲ್ಲಿ. ಅಲ್ಲಿ ವಾಣಿಜ್ಯೋದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಬಂಗಲೆಯಲ್ಲಿ ಶವಗಳ ತುಣುಕುಗಳು ದೊರೆತಿದ್ದವು. ಇದು ಭಾರತದ ಅತ್ಯಂತ ಕರಾಳ ಪ್ರಹಸನಗಳಲ್ಲಿ ಒಂದಾಗಿದೆ. 16 ವರ್ಷಗಳ ಕಾಲ ನ್ಯಾಯಾಲಯಗಳು ಬಿಡುಗಡೆ, ಮರಣದಂಡನೆ ಮುಂತಾದ ಪ್ರಕ್ರಿಯೆಗಳಲ್ಲಿ ಕಾಲಕ್ಷೇಪ ಮಾಡಿದವು. 2023ರಲ್ಲಿ ಸುಪ್ರೀಂಕೋರ್ಟ್ ಉದ್ಯಮಿ ಮೊನಿಂದರನ ಬಂಟ ಸುರೀಂದರ್ ಕೊಲಿಯೆಂಬಾತನ ಶಿಕ್ಷೆಯನ್ನು ಖಚಿತಪಡಿಸಿತ್ತು. ಈ ಪ್ರಕರಣದಲ್ಲಿ ಫೆÇರೆನ್ಸಿಕ್ ವಿಭಾಗದ ನಿಷ್ಕ್ರಿಯತೆ ಸ್ಪಷ್ಟವಾಗಿ ಕಂಡಿತ್ತು. ಸಾಕ್ಷಿಗಳು ಹೇಳಿಕೆಗಳನ್ನು ಹಿಂಪಡೆದದ್ದನ್ನೆ ಅವಲಂಬಿಸುವ ಮೂಲಕ ತನಿಖಾ ಪ್ರಕ್ರಿಯೆಯು ಪ್ರಭಾವಶಾಲಿ ಉದ್ಯಮಿಯ ಬದಲು ಅವರ ಸೇವಕನ ವಿರುದ್ಧ ತಿರುಗಿತ್ತು. ಇಲ್ಲಿ ಅನುಮಾನಗಳಿಂದ ಸುತ್ತುವರೆದ ನ್ಯಾಯದ ಒಂದು ಚಿತ್ರಣವನ್ನು ಕಾಣಬಹುದಿತ್ತು.  

2023ರಲ್ಲಿ ಗುರುಗ್ರಾಮದ ಸೆಕ್ಟರ್ 36ರಲ್ಲಿ ಮತ್ತೊಂದು ಭೀಕರ ಘಟನೆ ವರದಿಯಾಗಿತ್ತು. ಪೆÇಲೀಸರು ಮಾಂಸ ಸಂಸ್ಕರಣ ಘಟಕವೊಂದರಲ್ಲಿ ಶೈತ್ಯಾಗಾರವನ್ನು ಶೋಧಿಸಿದ್ದರು. ಇಲ್ಲಿ ಹಲವಾರು ವಲಸೆ ಕಾರ್ಮಿಕರು ಕಣ್ಮರೆಯಾಗಿದ್ದು, ಅವರ ದೇಹದ ತುಣುಕುಗಳನ್ನು ವ್ಯವಸ್ಥಿತವಾಗಿ ರವಾನಿಸಲಾಗಿತ್ತು. ಇಲ್ಲಿಯೂ ಸಹ ತನಿಖೆಯಲ್ಲಿ ಅಪಾರದರ್ಶಕತೆ ಹೆಚ್ಚಾಗಿತ್ತು. ಎಫ್‍ಐಆರ್‍ಗಳನ್ನು ದಾಖಲಿಸುವಾಗ ದುರ್ಬಲವಾದ ಸೆಕ್ಷನ್‍ಗಳನ್ನು ಉಲ್ಲೇಖಿಸಲಾಗಿತ್ತು. ಒಡೆತನದ ಮಾದರಿಯನ್ನು ಮುಚ್ಚಿಹಾಕಲು ನಕಲಿ ಶೆಲ್ ಕಂಪನಿಗಳ ಹೆಸರುಗಳನ್ನು ಬಳಸಲಾಗಿತ್ತು, ಮಾಧ್ಯಮಗಳ ಆಸಕ್ತಿಯೂ ಕುಂದತೊಡಗಿ, ಒಮ್ಮೆ ಸ್ಥಳೀಯ ವ್ಯಾಪಾರ ಮತ್ತು ರಾಜಕೀಯ ಪೆÇೀಷಕರ ನಂಟು ತಿಳಿಯುತ್ತಿದ್ದಂತೆಯೇ ಮಾಧ್ಯಮಗಳು ನಿಷ್ಕ್ರಿಯವಾದವು. ನ್ಯಾಯಾಂಗವು ಜಾಮೀನು ನೀಡುವ ಹಂತದಲ್ಲೇ ಇದ್ದು, ಘಟನೆಯಲ್ಲಿ ಗುರುತಿಸಲಾದ ಕಾಲಾಳುಗಳನ್ನು ದಾಟಿ ತನಿಖೆಯನ್ನು ನಡೆಸಲೇ ಇಲ್ಲ.

ಕೊಂಚ ಹಿಂತಿರುಗಿ ನೋಡಿದಾಗ 1979ರಲ್ಲಿ ಕರ್ನಾಟಕದ ಧರ್ಮಸ್ಥಳದಲ್ಲಿ ವೇದವಲ್ಲಿ. 1986ರಲ್ಲಿ ಪದ್ಮಲತಾ ಎಂಬ ಯುವತಿಯರು ಅನುಮಾನಾಸ್ಪದ ಸನ್ನಿವೇಶಗಳಲ್ಲಿ ಮೃತಪಟ್ಟಿದ್ದು, ರಾಜಕೀಯ ಸಂಪರ್ಕ ಇರುವ ಕುಟುಂಬವೊಂದು ಈ ಸಾವುಗಳ ಹಿಂದಿದೆ ಎಂಬುದು ಜನರಿಗೆ ತಿಳಿದ ಸತ್ಯವಾಗಿತ್ತು. ಇದನ್ನು ಅತ್ಯಾಚಾರ ಮತ್ತು ಹತ್ಯೆ ಎಂದೇ ನಂಬಿದ್ದರು. ಆದರೆ ಈ ಪ್ರಕರಣಗಳು ಕ್ರಮೇಣ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿತ್ತು. ಕಮ್ಯುನಿಸ್ಟ್ ಮುಖಂಡ ದೇವಾನಂದರ ಮಗಳಾಗಿದ್ದ ಪದ್ಮಲತಾ ಸಾವಿನ ಪ್ರಕರಣದಲ್ಲಿ ಪೆÇಲೀಸರ ವೈಫಲ್ಯದ ನಂತರ ಸಿಐಡಿ ತನಿಖೆಯನ್ನು ಮುಂದುವರೆಸಿ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಘೋಷಿಸಿತು. ಹಲವು ದಶಕಗಳ ಕಾಲ ಕೆ ವಿ ರಾವ್ (ಯಳಚಿತಯ್ಯ) ಎಂಬ ಪ್ರಮುಖ ಕಾರ್ಯಕರ್ತರು ಧರ್ಮಸ್ಥಳದ ಧಣಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕಿರುವುದನ್ನು, ಫೆÇರೆನ್ಸಿಕ್ ಮಾದರಿಗಳನ್ನು ನಾಶ ಮಾಡಿರುವುದನ್ನು ಆರೋಪಿಸುತ್ತಲೇ ಇದ್ದರು. ಯಾವುದೇ ನ್ಯಾಯಾಲಯವೂ ಅಂತಿಮ ನಿರ್ಣಯವನ್ನು ತಳೆಯಲಿಲ್ಲ.

ಸಮಾನಾಂತರವಾಗಿ ನೋಡಿದಾಗ ಈ ಮೂರೂ ಪ್ರಕರಣಗಳು ಭಾರತವು ಹೇಗೆ ದೌರ್ಜನ್ಯಗಳನ್ನು ಗಮನಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಮೊದಲು ಅಪರಾಧಗಳಾಗುತ್ತವೆ, ನಂತರ ಬಿರುಸಿನ ಬಂಧನಗಳಾಗುತ್ತವೆ, ಆನಂತರ ಆಯ್ಕೆ ಮಾಡಿದ ವಿಷಯಗಳ ಸೋರಿಕೆಯಾಗುತ್ತದೆ, ಕೊನೆಯದಾಗಿ ನ್ಯಾಯ ಪ್ರಕ್ರಿಯೆಯ ನಿಧಾನಗತಿಯ ಕಾರಣ ಎಲ್ಲವೂ ಮರೆಯಾಗಿಹೋಗುತ್ತದೆ. ನಿಥಾರಿ, ಸೆಕ್ಟರ್ 36, ಧರ್ಮಸ್ಥಳ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ನೋಡಿದಾಗ, ಸ್ಪಷ್ಟವಾಗುವ ಮಾದರಿಗಳೆಂದರೆ, ಮೊದಲನೆಯದು ಸಾಕ್ಷಿಗಳನ್ನು ನಾಶಪಡಿಸುವುದು ಅಥವಾ ತಿರುಚುವುದು, ಎರಡನೆಯದು ಪ್ರಭಾವಶಾಲಿ ವ್ಯಕ್ತಿಗಳನ್ನು ರಕ್ಷಿಸುವುದು, ಅಸಹಾಯಕರಿಗೆ ಶಿಕ್ಷೆ ವಿಧಿಸುವುದು, ಮೂರನೆಯದು ಮಾಧ್ಯಮಗಳು ಆರಂಭಿಕ ಆಕ್ರೋಶದ ನಂತರ ತನ್ನ ಪಾಡಿಗೆ ತಾನು ವರದಿ ಮಾಡುವುದು, ನಾಲ್ಕನೆಯದು ನ್ಯಾಯಾಲಯಗಳು ಮೊಕದ್ದಮೆಗಳನ್ನು ಕೊನೆಯಿಲ್ಲದೆ ಮುಂದೂಡುತ್ತಾ, ಅಂತಿಮ ತೀರ್ಪನ್ನು ತಾಂತ್ರಿಕ ಅಂಶಗಳಿಗೆ ಸೀಮಿತಗೊಳಿಸುವುದು.

ಇದನ್ನು ಕೇವಲ ವಿಳಂಬ ಎಂದು ಹೇಳುವುದರಿಂದ, ವಾಸ್ತವವನ್ನು ಮರೆಮಾಚಿದಂತಾಗುತ್ತದೆ. ಇಲ್ಲಿ ನಮಗೆ ಸಂಸ್ಥೆಗಳ ಹೇಡಿತನ, ಅನನುಕೂಲಕರ ಜಾಲಗಳಾದ ಹಣ, ಜಾತಿ ಅಥವಾ ಧರ್ಮ ಅಡ್ಡ ಬಂದಾಗ ಮುಂದುವರೆಯಲು ಹಿಂಜರಿಯುವುದು ಸಾಮಾನ್ಯವಾಗಿ ಕಾಣುವಂತಿದೆ.

ಭಾರತ ತ್ವರಿತಗತಿಯ ನಗರೀಕರಣದ ಹಾದಿಯಲ್ಲಿ ಸಾಗುತ್ತಿದ್ದು, ನಮ್ಮದು ಕಾನೂನು ನಿಯಮಗಳನ್ನು ಪಾಲಿಸುವ ಪ್ರಭುತ್ವ ಎಂದು ಹೇಳಲಾಗುತ್ತದೆ. ಆದರೆ ಒಂದು ದೇಶವು ನಿಥಾರಿ ಪ್ರಕರಣವನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗದಿದ್ದರೆ, ಧರ್ಮಸ್ಥಳದ ಅನ್ಯಾಯಗಳನ್ನು ಮರು ತನಿಖೆಗೆ ಒಳಪಡಿಸಿ ತಾರ್ಕಿಕ ತುಂದಿಗೆ ತಲುಪಿಸಲಾಗದೇ ಹೋದರೆ, ಫೆÇರೆನ್ಸಿಕ್ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಧ್ವಂಸ ಮಾಡಿದರೆ, ಸಮಾನ ನ್ಯಾಯದ ಭರವಸೆ ಪೆÇಳ್ಳು ಎನಿಸುತ್ತದೆ. ಇಲ್ಲಿ ಕಲಿಯಬೇಕಾದ ಪಾಠ ಎಂದರೆ, ಪ್ರಜಾಪ್ರಭುತ್ವವೊಂದು ನಾಚಿಕೆಗೇಡಿನ ಅಪರಾಧಗಳನ್ನು ಪ್ರಾಮಾಣಿಕವಾಗಿ ಎದುರಿಸಿ ನಿಲ್ಲಲು ಸಾಧ್ಯವಾಗದಿದ್ದರೆ ಅಲ್ಲಿ ಶಿಕ್ಷಾಭೀತಿ ಇಲ್ಲದ ನಿರ್ಭಿಡತೆ ಮನೆಮಾಡುತ್ತದೆ.

ನಿಥಾರಿಯಲ್ಲಿ ದೊರೆತ ಮೂಳೆಗಳು, ಸೆಕ್ಟರ್ 36ರ  ಶೈತ್ಯಾಗಾರಗಳು, ವೇದವಲ್ಲಿ-ಪದ್ಮಲತಾ-ಸೌಜನ್ಯರ ಕ್ಷೀಣ ಧ್ವನಿ ಇವೆಲ್ಲವೂ ಪ್ರತ್ಯೇಕ ಘಟನೆಗಳಲ್ಲ. ಎಲ್ಲವೂ ಅಪೂರ್ಣವಾಗಿರುವ ಚರಿತ್ರೆಯ ಅಧ್ಯಾಯಗಳು. ಯಾವ ಸಂತ್ರಸ್ತರೂ ನ್ಯಾಯ ಪಡೆಯುವ ಹಾದಿಯಲ್ಲಿ ಕಡುಬಡವರಾಗಿ, ಮಹಿಳೆಯಾಗಿ ಕಾಣಕೂಡದು ಎಂದು ಸೂಚಿಸುವ ಅಧ್ಯಾಯಗಳು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again