ಧರ್ಮಸ್ಥಳ ಉತ್ತರದಾಯಿತ್ವಕ್ಕಾಗಿ ನಿಲ್ಲದ ಸಂಘರ್ಷ

 ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ ಕರ್ನಾಟಕದ ದೇವಾಲಯ ಆಡಳಿತ ನಿರ್ವಹಣೆಯಲ್ಲಿ ವಿಭಿನ್ನ ನೆಲೆಯಲ್ಲಿ ನಿಲ್ಲುತ್ತದೆ. ಸಾವಿರಾರು ದೇವಸ್ಥಾನಗಳು ಮುಜರಾಯಿ ಇಲಾಖೆಯ ಮೇಲ್ವಿಚಾರಣೆಗೆ ಒಳಪಟ್ಟಿದ್ದರೂ, ಧರ್ಮಸ್ಥಳ ಮಾತ್ರ ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿದೆ. ಇಲ್ಲಿಗೆ ಬರುವ ಅಪಾರ ಮೊತ್ತದ ದೇಣಿಗೆಗಳು, ಸಂಸ್ಥೆಯ ಸ್ಥಿರಾಸ್ತಿಗಳು, ಸಾಂಸ್ಥಿಕ ಜಾಲ ಇವೆಲ್ಲವನ್ನೂ ಹೆಗ್ಗಡೆ ಕುಟುಂಬ ಖಾಸಗಿಯಾಗಿ ನಿರ್ವಹಿಸುತ್ತದೆ. ಈ ಕುಟುಂಬದವರೇ ಅನುವಂಶೀಯ ಧರ್ಮಾಧಿಕಾರಿಗಳಾಗಿರುತ್ತಾರೆ. ಈ ದೇವಸ್ಥಾನವನ್ನು ಸಾರ್ವಜನಿಕ ಉತ್ತರದಾಯಿತ್ವದಿಂದ ರಕ್ಷಿಸಿರುವುದು ಎದ್ದು ಕಾಣುತ್ತದೆ.

ತಪ್ಪಿಸಿಕೊಳ್ಳುವ ಹಾದಿಯ ಅನುಕ್ರಮ

1970 ಮತ್ತು 80ರಲ್ಲಿ ಧರ್ಮಸ್ಥಳವನ್ನು ಮುಜರಾಯಿ ದೇವಾಲಯ ಎಂದು ಘೋಷಿಸುವಂತೆ ಬೇಡಿಕೆಗಳ ಹಿನ್ನೆಲಯಲ್ಲಿ ವಿವಾದ ಏರ್ಪಟ್ಟಿತ್ತು. ನ್ಯಾಯಾಲಯಗಳು ಹೆಗ್ಗಡೆ ಕುಟುಂಬದ ಅನುವಂಶೀಯ ಧರ್ಮದರ್ಶಿತ್ವವನ್ನು ಗುರುತಿಸಿ, ಧರ್ಮಸ್ಥಳವನ್ನು ಸಂವಿಧಾನದ ಅನುಚ್ಛೇದ 26ರ ಅಡಿ ನಿರ್ವಹಿಸಬಹುದಾದ ಸಂಸ್ಥೆ ಎಂದು ತೀರ್ಪು ನೀಡಿದ್ದವು. ಈ ಸಾಂವಿಧಾನಿಕ ಕವಚ ಸಂಸ್ಥೆಯ ಸ್ವಾಯತ್ತತೆಯ ಬುನಾದಿಯೂ ಆಯಿತು.

1997ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದಾನಿ ದತ್ತಿಗಳ ಕಾಯ್ದೆಯು ರಾಜ್ಯದ ಎಲ್ಲ ದೇವಾಲಯಗಳನ್ನೂ ನಿಬರ್ಂಧಕ್ಕೊಳಪಡಿಸಲು ಇಚ್ಛಿಸಿತ್ತು. ಆದರೆ ಧರ್ಮಸ್ಥಳ ಈ ಕಾಯ್ದೆಯ ವ್ಯಾಪ್ತಿಯಿಂದ ಹೊರತಾಗಿತ್ತು. ಸರ್ಕಾರ ಈ ವಿಚಾರವನ್ನು ಹೆಚ್ಚು ಪ್ರಸ್ತಾಪಿಸಿರಲಿಲ್ಲ ಬಹುಶಃ ರಾಜಕೀಯವಾಗಿ ತಿರುಗುಬಾಣವಾಗುವ ಆತಂಕ ಸರ್ಕಾರಕ್ಕೆ ಇತ್ತು.

2007ರಲ್ಲಿ ಮತ್ತೊಂದು ಅವಕಾಶ ಲಭಿಸಿದ್ದು, ನ್ಯಾಯಮೂರ್ತಿ ಎಂ ರಾಮಾ ಜೋಯಿಸ್ ವರದಿಯೊಂದನ್ನು ಸಲ್ಲಿಸಿ, ಮಠಗಳು ಮತ್ತು ಶ್ರೀಮಂತ ದೇವಾಲಯಗಳು ಶಾಸನಬದ್ಧ ಮೇಲ್ವಿಚಾರಣೆಗೆ ಒಳಪಡಬೇಕು ಎಂದು ಶಿಫಾರಸು ಮಾಡಿದ್ದರು. ಸಾಮಾಜಿಕ ಕಾರ್ಯಕರ್ತರು, ನಾಗರಿಕ ಗುಂಪುಗಳು ಧರ್ಮಸ್ಥಳದ ಅಪಾರ ಮೊತ್ತದ ಆದಾಯವನ್ನು ಸೂಚಿಸಿ ಇದು ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಡಬೇಕು ಎಂದು ಆಗ್ರಹಿಸಿದ್ದರು. ಆದರೂ ಸರ್ಕಾರಗಳು ಹಿಂದಿನ ಕೋರ್ಟಿನ ತೀರ್ಪಿಗೆ ಪುನರ್ವಿಮರ್ಶೆಗೆ ಕ್ರಮ ಜರುಗಿಸಲಿಲ್ಲ.

2018ರಲ್ಲಿ ಸಿದ್ದರಾಮಯ್ಯ ಸರ್ಕಾರ ಮಠಗಳನ್ನು ಎಂಡೋಮೆಂಟ್ ಕಾನೂನುಗಳ ವ್ಯಾಪ್ತಿಗೆ ಒಳಪಡಿಸಲು ಅಧಿಸೂಚನೆ ಹೊರಡಿಸಿತ್ತು. ಅದರೆ ಮಠಾಧೀಶರ ತಕ್ಷಣದ, ತೀಕ್ಷ್ಣ ಪ್ರತಿಕ್ರಿಯೆ ತೀವ್ರವಾಗಿತ್ತು. ಧರ್ಮಸ್ಥಳವನ್ನು ಹೆಸರಿಸಲೂ ಇಲ್ಲ, ಆದರೆ ಇದು ಸಾರ್ವಜನಿಕ ಚರ್ಚೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಕೆಲವೇ ವಾರಗಳಲ್ಲಿ ಈ ಪ್ರಸ್ತಾವನೆಯನ್ನು ಹಿಂಪಡೆಯಲಾಯಿತು.

ಹೀಗಾಗಿ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಧರ್ಮಸ್ಥಳ ಮೇಲ್ವಿಚಾರಣೆಯಿಂದ ಮುಕ್ತವಾಗಿದ್ದು, ನ್ಯಾಯಾಲಯದ ಸಮ್ಮತಿ, ರಾಜಕೀಯ ಜಾಗ್ರತಿ ಮತ್ತು ದಾನ ಧರ್ಮಗಳ ಕಲ್ಪಿತ ವರ್ಚಸ್ಸು ಸಂಸ್ಥೆಯ ರಕ್ಷಣೆಗೆ ಕಾರಣವಾಗಿದೆ.

ಇದು ಏಕೆ ಮುಖ್ಯವಾಗುತ್ತದೆ ಎಂದರೆ ಕರ್ನಾಟಕದ ಯಾವುದೇ ದೇವಸ್ಥಾನವೂ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಿಂದ ಮುಕ್ತವಾಗಿಲ್ಲ. ಸಣ್ಣ ದೇವಾಲಯಗಳು, ಧರ್ಮಸ್ಥಳಕ್ಕೆ ಹೋಲಿಸಿದರೆ ಅತ್ಯಲ್ಪ ಆದಾಯ ಗಳಿಸಿದರೂ ಕಾನೂನು ನಿಬರ್ಂಧಗಳಿಗೆ ಒಳಗಾಗಿದ್ದು ಪ್ರತಿವರ್ಷ ಲೆಕ್ಕ ಪತ್ರಗಳನ್ನು, ಲೆಕ್ಕ ಪರಿಶೋಧಕರ ವರದಿಯನ್ನು ಸಲ್ಲಿಸಬೇಕಿದೆ. ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನವನ್ನು ಖಾಸಗಿ ಒಡೆತನದಲ್ಲಿರಲು ಅವಕಾಶ ನೀಡುವುದು ಕಾನೂನಿನ ದೃಷ್ಟಿಯಲ್ಲಿ ಸಮಾನತೆ ಎಂಬ ತತ್ವದ ಉಲ್ಲಂಘನೆಯಾಗುತ್ತದೆ. ಇದು ಅಪಾಯಕಾರಿ ನಿದರ್ಶನವನ್ನೂ ಹುಟ್ಟುಹಾಕುತ್ತದೆ. ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನಗಳು ಧಾರ್ಮಿಕ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕ ಉತ್ತರದಾಯಿತ್ವದಿಂದ ರಕ್ಷಿಸುವ ಕವಚಗಳಾಗುತ್ತವೆ.

ಮುಂದಿನ ಹಾದಿ

ಕರ್ನಾಟಕ ಸರ್ಕಾರ ಸುಧಾರಣೆಯ ಬಗ್ಗೆ ಗಂಭೀರವಾಗಿ ಪರಿಗಣಿಸುವುದಾದರೆ, ಮೂರು ನೆಲೆಗಳಲ್ಲಿ ಕಾರ್ಯಪ್ರವೃತ್ತವಾಗಬೇಕಾಗುತ್ತದೆ.

1) ಶಾಸನಾತ್ಮಕ ಸ್ಪಷ್ಟತೆ: ಎಂಡೋಮೆಂಟ್ ಕಾಯ್ದೆಗೆ ಕೂಡಲೇ ತಿದ್ದುಪಡಿ ಮಾಡಿ ಒಂದು ಆದಾಯ ಮಿತಿಯನ್ನು ಮೀರಿದ ಎಲ್ಲ ದೇವಾಲಯಗಳನ್ನೂ, ಅವುಗಳ ಸಂಪತ್ತು ಮತ್ತು ಆಸ್ತಿಯ ಹೊರತಾಗಿಯೂ, ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಬೇಕು. ರಾಜ್ಯ ಸರ್ಕಾರವು ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಆದರೆ ಹಣಕಾಸು ನಿರ್ವಹಣೆಯನ್ನು, ಸಾರ್ವಜನಿಕ ದೇಣಿಗೆಯನ್ನು ನಿಯಂತ್ರಿಸಬೇಕು.

2) ನ್ಯಾಯಾಂಗದ ಪರೀಕ್ಷೆ: ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೆÇ್ರೀತ್ಸಾಹಿಸುವ ಮೂಲಕ, ಅನುವಂಶೀಯ ಧರ್ಮದರ್ಶಿತ್ವ ಸಾರ್ವಜನಿಕ ಉತ್ತರದಾಯಿತ್ವವನ್ನೂ ಮೀರಿ ಇರಲು ಸಾಧ್ಯವೇ ಎಂದು ಪ್ರಶ್ನಿಸುವಂತಾಗಬೇಕು. ದೇಣಿಗೆಗಳು ಕೋಟ್ಯಂತರ ರೂ.ಗಳಲ್ಲಿರುವಾಗ ಇದು ಅಗತ್ಯ. ನ್ಯಾಯಾಲಯಗಳು ಅನುಚ್ಛೇದ 26ರ ಅಡಿಯಲ್ಲಿ ಹಕ್ಕುಗಳನ್ನು, ಅನುಚ್ಛೇದ 14ರ ಸಮಾನತೆಯ ತತ್ವವನ್ನು ಪರಿಶೀಲಿಸಿ ಸಾರ್ವಜನಿಕ ವಿಶ್ವಾಸದ ತತ್ವವನ್ನು ಗುರುತಿಸಬೇಕು.

3) ಸಾರ್ವಜನಿಕ ಕ್ರೋಢೀಕರಣ: ಸರ್ಕಾರಗಳು ಸಾರ್ವಜನಿಕರ ಒತ್ತಡ ಇಲ್ಲದೆ ಮುಂದೆ ಚಲಿಸುವುದಿಲ್ಲ. ನಾಗರಿಕ ಸಮಾಜವು ದೇಣಿಗೆಯ ಪ್ರಮಾಣವನ್ನು ಮುನ್ನಲೆಗೆ ತಂದು, ಪಾರದರ್ಶಕ ಲೆಕ್ಕಪರಿಶೋಧನೆ ಇಲ್ಲದಿರುವುದನ್ನು ಸರ್ಕಾರಕ್ಕೆ ಮನದಟ್ಟು ಮಾಡಬೇಕು. ಶ್ರದ್ಧೆ ನಂಬಿಕೆಗಳು ಸಂಸ್ಥೆಗಳನ್ನು ಹಣಕಾಸು ಮೇಲ್ವಿಚಾರಣೆಯಿಂದ ಮುಕ್ತಗೊಳಿಸುವುದಿಲ್ಲ ಎಂಬ ತತ್ವವನ್ನು ಮುಂದಿಡಬೇಕು.

ಉಪಸಂಹಾರ


ಧರ್ಮಸ್ಥಳ ಬಹಳ ಕಾಲದಿಂದ ಕಾನೂನು ವ್ಯಾಪ್ತಿಯಿಂದ ಹೊರಗುಳಿದಿದೆ. ಕಾನೂನು ಈ ಸಂಸ್ಥೆಯ ಬಳಿ ತಲುಪಲಾಗುವುದಿಲ್ಲ ಎಂಬ ಕಾರಣಕ್ಕಾಗಿ ಅಲ್ಲ, ರಾಜ್ಯ ಸರ್ಕಾರ ತನ್ನ ಬಾಹುಗಳನ್ನು ಅಲ್ಲಿಯವರೆಗೂ ಚಾಚುವುದಿಲ್ಲ ಎಂಬ ಕಾರಣದಿಂದ. ರಾಮಾ ಜೋಯಿಸ್ ವರದಿ ಒಂದು ನೀಲನಕ್ಷೆಯನ್ನು ನೀಡಿದ್ದು, ಕರ್ನಾಟಕ ಈ ಕೆಲಸವನ್ನು ಪೂರ್ಣಗೊಳಿಸಬೇಕಿದೆ. ಸಾರ್ವಜನಿಕರ ಹಣ ಹರಿಯುವಾಗ, ಸಾರ್ವಜನಿಕ ಉತ್ತರದಾಯಿತ್ವ ಸಹಜವಾಗಿ ಹಿಂಬಾಲಿಸಬೇಕು. ಧರ್ಮಸ್ಥಳ ಶಾಶ್ವತ ಅಪವಾದವಾಗಿ ಇರಲಾಗುವುದಿಲ್ಲ. ಧರ್ಮಸ್ಥಳ ಬೇರಾವುದೇ ರಾಜ್ಯದಲ್ಲಿ ಇದ್ದಿದ್ದರೂ ಅದನ್ನು ಎಷ್ಟೋ ವರ್ಷಗಳ ಹಿಂದೆ ಸರಕಾರದ ನಿಯಂತ್ರಣಕ್ಕೆ ತರಲಾಗುತ್ತಿತ್ತು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again