ಆರ್ ವಿ ದೇಶ್‍ಪಾಂಡೆ ಗೌರವದಿಂದ ನಿರ್ಗಮಿಸುವುದು ಒಳಿತು

 ದೇಶಪಾಂಡೆ ಅವರು ತಮ್ಮ 78ರ ಇಳಿವಯಸ್ಸಿನಲ್ಲಿ ಸಾರ್ವಜನಿಕವಾಗಿ ತಮಗೆ ಸಚಿವ ಪದವಿ ಸಿಕ್ಕಿಲ್ಲ ಎಂದು ಹಲುಬುತ್ತಾ ಇದ್ದರೆ, ಅವರ ವ್ಯಕ್ತಿತ್ವಕ್ಕೇ ಕುಂದುಬರುತ್ತದೆ.


ಆರ್ ವಿ ದೇಶಪಾಂಡೆ ಕರ್ನಾಟಕದ ರಾಜಕಾರಣದಲ್ಲಿ ಕಳೆದ ನಾಲ್ಕು ದಶಕಗಳಿಂದಲೂ ನಿರಂತರವಾಗಿ ಕೇಳಿಬರುತ್ತಿರುವ ಹೆಸರು ಮತ್ತು ಕಾಣುತ್ತಿರುವ ವ್ಯಕ್ತಿ. ಉತ್ತರ ಕನ್ನಡದಿಂದ ಸತತವಾಗಿ ಆಯ್ಕೆಯಾಗುತ್ತಿರುವ ದೇಶಪಾಂಡೆ 1983ರಿಂದ ಪ್ರತಿ ಸರ್ಕಾರದಲ್ಲೂ ಸಚಿವ ಹುದ್ದೆ ಪಡೆದಿರುವುದು ಒಂದು ಅಪರೂಪದ ವಿಷಯ. ಮುಖ್ಯಮಂತ್ರಿ ಯಾರೇ ಆಗಿದ್ದರೂ ಇವರು ಸಚಿವರಾಗಿದ್ದಾರೆ. ರಾಜ್ಯದ ಕೆಲವೇ ರಾಜಕಾರಣಿಗಳು, ಅಧಿಕಾರ ವಲಯದ ಎಲ್ಲ ಭಾಗಗಳನ್ನೂ ಇವರಷ್ಟು ಆಪ್ತತೆಯಿಂದ, ಹತ್ತಿರದಿಂದ ಮತ್ತು ಇಷ್ಟು ದೀರ್ಘಕಾಲ ನೋಡಿದವರಿಲ್ಲ.

 ಆದರೂ ಈಗ 78 ವಯೋಮಾನದ ದೇಶಪಾಂಡೆ  ಅತೃಪ್ತರಾಗಿ ಕಾಣುತ್ತಿದ್ದಾರೆ. ಹಲವು ತಿಂಗಳುಗಳಿಂದ ದೇಶಪಾಂಡೆ ಸಿದ್ದರಾಮಯ್ಯನವರ ಪ್ರಸ್ತುತ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ,  ಆಗೀಗ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಪದೇ ಪದೇ ಅವರು ಸೇವಾ ಹಿರಿತನ ಮತ್ತು ಅನುಭವದ ಬಗ್ಗೆ ಮಾತನಾಡುತ್ತಿರುವುದು ತಮ್ಮ ಬಗ್ಗೆ ಟಾಂ ಟಾಂ ಮಾಡಿಕೊಳ್ಳುತ್ತಿರುವಂತೆ ತೋರುತ್ತದೆ. ಅಂದರೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ತಾವು ಸಚಿವರಾಗಿರಬೇಕು ಎಂಬ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಈಗ ದೇಶಪಾಂಡೆ ಕೊಂಚ ವಿರಮಿಸಿ ಹಿಂತಿರುಗಿ ನೋಡುವ ಸಮಯ. ಅವರನ್ನು ಸರ್ಕಾರದಲ್ಲಿ ನಿರ್ಲಕ್ಷಿಸಲಾಗಿಲ್ಲ. ಇಂದಿಗೂ ಸಹ ಬಹಳ ಮುಖ್ಯವಾದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದು ಅಪಾರ ಪ್ರಭಾವ ಮತ್ತು ಗೌರವ ಹೊಂದಿರುವ ಹುದ್ದೆಯಾಗಿದ್ದು, ಇವರ ದಶಕಗಳ ಆಡಳಿತದ ಅನುಭವವನ್ನು ಅರ್ಥಪೂರ್ಣವಾಗಿ ಉಪಯೋಗಿಸಬಹುದು. ಮತ್ತೊಮ್ಮೆ ಸಚಿವ ಸಂಪುಟದ ಹುದ್ದೆಗಾಗಿ ಹಂಬಲಿಸುವ ಬದಲು ಈ ಅವಕಾಶವನ್ನೇ ಬಳಸಿ ತಮ್ಮ ಕೊಡುಗೆ ಸಲ್ಲಿಸಬಹುದು, ಸಚಿವ ಹುದ್ದೆಯ ನಿತ್ಯ ಬವಣೆಯನ್ನು ತಪ್ಪಿಸಬಹುದು ಎಂದೇಕೆ ಅವರು ಯೋಚಿಸಬಾರದು?

 ಇದು ದೇಶಪಾಂಡೆ ಗೌರವಕ್ಕೆ ಅರ್ಹರೋ ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ. ಇವರು ಖಂಡಿತವಾಗಿಯೂ ಅರ್ಹರೇ. ಆದರೆ ತಮ್ಮ ವೃತ್ತಿಯ ಮುಂದುವರೆದ ಹಂತದಲ್ಲಿರುವಾಗ, ಸಚಿವ ಹುದ್ದೆಗಾಗಿ ಹಾತೊರೆಯುವುದು, ವಯಸ್ಸು ಮತ್ತು ರಾಜಕೀಯ ವರ್ಚಸ್ಸು ಎರಡರಲ್ಲೂ ತಮಗಿಂತಲೂ ಕಿರಿಯರ ನೇತೃತ್ವದಲ್ಲಿ ಸಚಿವರಾಗಿ ಸೇವೆ ಸಲ್ಲಿಸಲು ಹಂಬಲಿಸುವುದು ಅಗತ್ಯವಿಲ್ಲ. ಒಬ್ಬ ನಿಜವಾದ ಮೇಧಾವಿ ವ್ಯಕ್ತಿಗೆ ತಾನು ಯಾವ ಸಂದರ್ಭದಲ್ಲಿ ನಿರ್ಗಮಿಸಬೇಕು ಎಂಬ ಅರಿವು ಇರಬೇಕು. ಮುಂದಿನ ಪೀಳಿಗೆಗೆ ಯಾವ ಸಮಯದಲ್ಲಿ ಅವಕಾಶ ನೀಡಬೇಕು ಎಂಬ ಪರಿವೆ ಇರಬೇಕು. ಹಾಗೆಯೇ ಮತ್ತೊಮ್ಮೆ ಅಧಿಕಾರದಲ್ಲಿ ಇಲ್ಲದಿದ್ದರೂ ತಮ್ಮದೇ ಪರಂಪರೆಯನ್ನು ಹೇಗೆ ಮುಂದುವರಿಸಬೇಕು ಎಂಬ ಅರಿವಿರಬೇಕು. ಇದಕ್ಕೆ ದೇಶಪಾಂಡೆ ತಮ್ಮ ರಾಜಕೀಯ ಗುರುವಾಗಿದ್ದ ರಾಮಕೃಷ್ಣ ಹೆಗಡೆಯವರನ್ನು ಒಮ್ಮೆ ಪರಾಮರ್ಶಿಸಿಕೊಳ್ಳುವುದು ಒಳ್ಳೆಯದು.

 ದೇಶಪಾಂಡೆ ಅವರ ವೃತ್ತಿಜೀವನ ಅವರಿಗೆ ಎಲ್ಲವನ್ನೂ ನೀಡಿದೆ. ಸುದೀರ್ಘ ಸೇವಾವಕಾಶ, ಸಂಪತ್ತು, ಪ್ರಭಾವ, ಸಾರ್ವಜನಿಕರಲ್ಲಿ ಅಸ್ಮಿತೆ ಎಲ್ಲವನ್ನೂ ನೀಡಿದೆ. ಭಾರತದ ರಾಜಕಾರಣದಲ್ಲಿ ಕೆಲವರಷ್ಟೇ ಇಷ್ಟು ಕಾಲ ಇದನ್ನು ಕಂಡಿದ್ದಾರೆ. ಆದಾಗ್ಯೂ ದೇಶಪಾಂಡೆ ಅವರು ಸಾರ್ವಜನಿಕವಾಗಿ ತಮಗೆ ಸಚಿವ ಪದವಿ ಸಿಕ್ಕಿಲ್ಲ ಎಂದು ಹಲಬುತ್ತಾ ಇದ್ದರೆ, ಅವರ ವ್ಯಕ್ತಿತ್ವಕ್ಕೇ ಕುಂದುಬರುತ್ತದೆ. ಬದಲಾಗಿ ಇನ್ನೂ ಉನ್ನತ ಹಾದಿಯನ್ನು ಕ್ರಮಿಸಿ, ಯುವ ನಾಯಕರನ್ನು ತಯಾರು ಮಾಡಿ, ಆಡಳಿತ ನೀತಿ ಸುಧಾರಣೆಗಳಿಗೆ ಮಾರ್ಗದರ್ಶನ ನೀಡಿ, ತಮ್ಮ ನಾಯಕತ್ವವು ಕೇವಲ ಕಚೇರಿಯನ್ನು ಹೊಂದಿರುವುದರಲ್ಲಿ ಮಾತ್ರ ಯಶಸ್ವಿಯಾಗಿಲ್ಲ ಎಂದು ನಿರೂಪಿಸಬೇಕಿದೆ.

 

ಇಲ್ಲಿ ಸರಳವಾದ ಪ್ರಶ್ನೆ ಎಂದರೆ, ರಾಜಕೀಯದಲ್ಲಿ ಇಷ್ಟೆಲ್ಲಾ ಗಳಿಸಿದ ನಂತರವೂ ಆರ್ ವಿ ದೇಶಪಾಂಡೆ ತೃಪ್ತರಾಗಿಲ್ಲ ಎಂದರೆ, ಕಾಂಗ್ರೆಸ್‍ನ ಯುವ ನಾಯಕರಿಗೆ ಅವರ ಜವಾಬ್ದಾರಿ ನಿಭಾಯಿಸಲು ಅವಕಾಶ ಮಾಡಿಕೊಡಲು ತಯಾರಾಗಿಲ್ಲದಿರುವುದು ಸರಿಯೇ? ಈ ಪ್ರಶ್ನೆಗೆ ಉತ್ತರವೇ ಅವರನ್ನು ಹೇಗೆ ಸ್ಮರಿಸಲಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಕೇವಲ ಉಳಿದುಕೊಂಡವರಾಗಿ ನೆನಪಿನಲ್ಲುಳಿಯುವುದಿಲ್ಲ, ಬದಲಾಗಿ ತಾನು ಯಾವಾಗ ನಿರ್ಗಮಿಸಬೇಕು ಎಂದು ಅರಿತಿದ್ದ ಒಬ್ಬ ಮುತ್ಸದ್ದಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again