ಬೀದಿ ನಾಯಿಗಳ ಹಾವಳಿಯನ್ನು ನಿವಾರಿಸುವುದು ಅಗತ್ಯ

 ಪ್ರಾಣಿಗಳ ಮೇಲಿನ ಅನುಕಂಪಕ್ಕಿಂತಲೂ ಮುಖ್ಯವಾದದ್ದು ಮನುಷ್ಯನ ಜೀವ-ಬದುಕು

ಭಾರತ ತುರ್ತು ಕ್ರಮಗಳನ್ನು ಕೈಗೊಂಡು, ಸ್ಪಷ್ಟ ನೀತಿ ಯೋಜನೆಗಳ ಮೂಲಕ, ಬೀದಿಗಳನ್ನು ಸುರಕ್ಷಿತವಾಗಿ ಮಾಡಲು ಧೈರ್ಯ ಮಾಡಬೇಕಿದೆ.

ಭಾರತ ಇಂದು ಅಪರೂಪ ಎನಿಸುವ ಆದರೆ ಬಹಳ ಭೀಕರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದು ಬೀದಿ ನಾಯಿಗಳ ಹಾವಳಿ. 60 ದಶಲಕ್ಷ ಬೀದಿ ನಾಯಿಗಳನ್ನು ಹೊಂದಿರುವ ದೇಶದಲ್ಲಿ, ಮುಕ್ತವಾಗಿ ಓಡಾಡುವ ಅತಿ ದೊಡ್ಡ ಸಂಖ್ಯೆಯ ನಾಯಿಗಳನ್ನು ಹೊಂದಿರುವ ಕುಪ್ರಸಿದ್ಧಿಗೆ ಭಾರತ ಪಾತ್ರವಾಗಿದೆ. ಮೆಟ್ರೋ ನಗರಗಳಿಂದ ಹಳ್ಳಿಗಾಡುಗಳವರೆಗೆ ಇದೇ ಸಮಸ್ಯೆ ಎದುರಾಗುತ್ತಿದ್ದು, ನಾಯಿಗಳ ಹಿಂಡು ಬೀದಿಗಳಲ್ಲಿ ಓಡಾಡಿಕೊಂಡಿದ್ದು, ದಾರಿಯಲ್ಲಿ ಹೋಗಿಬರುವವರ ಮೇಲೆ ದಾಳಿ ನಡೆಸುತ್ತಿವೆ, ಮಕ್ಕಳು ಮತ್ತು ವಯಸ್ಸಾದವರ ಮೇಲೆ ಎಗರಿ ಬೀಳುತ್ತಿವೆ, ಸರಕು ವಿತರಣೆಯ ಸಿಬ್ಬಂದಿಯನ್ನು, ಸೈಕಲ್ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತಿವೆ. ಹಾಗಾಗಿ ನೆರೆಹೊರೆಯಲ್ಲಿ ತೀವ್ರವಾದ ಭೀತಿ ಆವರಿಸಿದೆ. ಮಕ್ಕಳು ಮತ್ತು ದೊಡ್ಡವರೂ ಸಹ ಈ ನಾಯಿಗಳ ಕಾಟದಿಂದ ಹೈರಾಣಾಗಿದ್ದು, ಇದು ನಿತ್ಯ ಭಯ ಸೃಷ್ಟಿಸುತ್ತಿದೆ. ಹಾಗೆಯೇ ಭಾರತ ಅತಿ ಹೆಚ್ಚಿನ ಪ್ರಮಾಣದ ರೇಬಿಸ್ ಕಾಯಿಲೆಯಿಂದ ಸಾಯುವವರನ್ನು ಹೊಂದಿದ್ದು ಇದು ಕೇವಲ ಅನಾನುಕೂಲವಷ್ಟೇ ಅಲ್ಲ, ಜನರ ಸಾವು ಬದುಕಿನ ಪ್ರಶ್ನೆಯಾಗಿದೆ.

 ಕಾನೂನು ಮತ್ತು ನ್ಯಾಯಾಲಯಗಳು ಪ್ರಾಣಿಗಳ ಹಕ್ಕು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸಮತೋಲನಗೊಳಿಸಲು ಹೆಣಗಾಡುತ್ತಿವೆ. ಈ ಹಿಂದಿನ ತೀರ್ಪುಗಳು ಬೀದಿ ನಾಯಿಗಳನ್ನು ರಕ್ಷಿಸುವ ದಿಕ್ಕಿನಲ್ಲೇ ಹೆಚ್ಚಾಗಿದ್ದು ಪ್ರಾಣಿ ಕ್ರೌರ್ಯ ನಿಬರ್ಂಧಿಸುವ ಕಾಯ್ದೆಯನ್ನು ಅನುಸರಿಸಲಾಗುತ್ತಿದೆ. ಆದರೆ ಹೆಚ್ಚುತ್ತಿರುವ ಮನುಷ್ಯರ ಸಾವು ನೋವುಗಳು ಸುಪ್ರೀಂಕೋರ್ಟ್‍ಗೂ ಸಹ ತನ್ನ ಹಿಂದಿನ ಆದೇಶವನ್ನು ಮರುಪರಿಷ್ಕರಣೆ ಮಾಡುವಂತೆ ಮಾಡಿದೆ. ಈ ಗೊಂದಲದ ಮೂಲ ಇರುವುದು ಮೂಲಭೂತ ಪ್ರಶ್ನೆಯೊಂದರಲ್ಲಿ. ಸಂವಿಧಾನದ ಅನುಚ್ಛೇದ 21 ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಪ್ರಜೆಗಳಿಗೆ ನೀಡುತ್ತದೆ. ಈ ಹಕ್ಕನ್ನು ನಿಬರ್ಂಧವಿಲ್ಲದ ಪ್ರಾಣಿಗಳು ಅಪಾಯಕ್ಕೊಡ್ಡಿದಾಗ, ಮನುಷ್ಯರ ಕ್ಷೇಮವೇ ಮೊದಲ ಆದ್ಯತೆಯಾಗಬೇಕು ಎಂಬ ಆಗ್ರಹವು ನ್ಯಾಯಯುತವೇ ಆಗುತ್ತದೆ.

 ದುರದೃಷ್ಟವಶಾತ್ ಸರ್ಕಾರಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ವಿಫಲವಾಗಿವೆ. ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಯೋಜನೆಯ ಅಡಿಯಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಕ್ರಮವು ಆಮೆ ವೇಗದಲ್ಲಿ ಸಾಗುತ್ತಿದ್ದು, ಅಲ್ಲಲ್ಲಿ ಮಾತ್ರ ಜಾರಿಯಾಗುತ್ತಿದೆ. ಬಹುಪಾಲು ನಗರಗಳಲ್ಲಿ ಕೆಲವೇ ನಾಯಿಗಳನ್ನು ಈ ಚಿಕಿತ್ಸೆಗೆ ಒಳಪಡಿಸಲಾಗಿದೆ. ಇದು ಅವುಗಳ ಸಂಖ್ಯೆಯನ್ನು ತಗ್ಗಿಸಲು ನೆರವಾಗುವುದಿಲ್ಲ. ಏತನ್ಮಧ್ಯೆ ಫಲವತ್ತತೆ ಇರುವ ನಾಯಿಗಳು ಮರಿಗಳನ್ನು ಹಾಕುತ್ತಲೇ ಇದ್ದು, ಇದರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಇನ್ನೂ ತೀವ್ರಗೊಳಿಸುವ ಅಂಶ ಎಂದರೆ, ಆಹಾರದ ಸಮೃದ್ಧ ಲಭ್ಯತೆ. ರಸ್ತೆ ಬದಿಯಲ್ಲಿ ಬಿಸಾಡಿರುವ ಆಹಾರ, ಕಸಾಯಿ ಖಾನೆಯ ತ್ಯಾಜ್ಯಗಳು, ಇವುಗಳಿಗೆ ಸಿದ್ಧ ಆಹಾರ ಒದಗಿಸುತ್ತವೆ. ಕೆಲವು ಸರ್ಕಾರಗಳು, ಕರ್ನಾಟಕವನ್ನೂ ಸೇರಿದಂತೆ, ಕೋಟ್ಯಂತರ ರೂ ಖರ್ಚು ಮಾಡುತ್ತಿದ್ದು ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿವೆ. ಇದರ ಉದ್ದೇಶ ಒಳ್ಳೆಯದೇ. ಆದರೆ ಪರಿಣಾಮ ಪ್ರಾಣಿಗಳನ್ನು ಇನ್ನೂ ಧೈರ್ಯದಿಂದ ಓಡಾಡುವಂತೆ ಮಾಡುತ್ತಿದೆ, ಹೆಚ್ಚು ಆಕ್ರಮಣಕಾರಿಯಾಗಿ, ಪರಾವಲಂಬಿಯಾಗಿ ಮಾಡುತ್ತಿದೆ.

 ಈ ಸಮಸ್ಯೆಯನ್ನು ಇಡೀ ದೇಶದಲ್ಲಿ ಒಂದು ಗಂಭೀರ ವಿಚಾರವಾಗಿ ಪರಿಗಣಿಸಿ ವಸ್ತುನಿಷ್ಟವಾಗಿ ಕ್ರಮ ಜರುಗಿಸಬೇಕಿದೆ. ಇದನ್ನು ಸಾರ್ವಜನಿಕ ತುರ್ತುಸ್ಥಿತಿ ಎಂದು ಘೋಷಿಸುವುದು ಸೂಕ್ತ. ಮುಂದಿನ ಹಾದಿಯು ದೀರ್ಘಕಾಲೀನವಾಗಿದ್ದು, ಯಾವುದೇ ರಾಜಿ ಇಲ್ಲದೆ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ. ಮೊದಲನೆಯದಾಗಿ ಯುದ್ಧೋಪಾದಿಯಲ್ಲಿ ಸಂತಾನಹರಣ ಚಿಕಿತ್ಸೆ ನಡೆಸಬೇಕಿದೆ. ಮೇಲ್ನೋಟಕ್ಕೆ ಇದನ್ನು ಜಾರಿಗೊಳಿಸುವುದರ ಬದಲು ಸಾಮೂಹಿಕವಾಗಿ ಪ್ರತಿ ಜಿಲ್ಲೆಯಲ್ಲೂ ಶೇಕಡಾ 70-80ರಷ್ಟು ಬೀದಿ ನಾಯಿಗಳನ್ನು ಒಳಗೊಳ್ಳಬೇಕಿದೆ. ಇದನ್ನು ಮೂರು ವರ್ಷಗಳ ಒಳಗೆ ಪೂರೈಸಬೇಕಿದೆ. ಚಿಕಿತ್ಸೆಗೊಳಗಾದ ಪ್ರತಿಯೊಂದು ಬೀದಿ ನಾಯಿಗೂ ಲಸಿಕೆ ನೀಡಿ ರೇಬೀಸ್ ರೋಗವನ್ನು ತಗ್ಗಿಸಬೇಕಿದೆ. ಎರಡನೆಯದಾಗಿ ಪ್ರತಿ ನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯತ್‍ಗಳು ತ್ಯಾಜ್ಯ ನಿರ್ವಹಣೆಯ ಗುರಿಯನ್ನು ನಿಗದಿಪಡಿಸಬೇಕು, ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಸುರಿಯುವುದನ್ನು ದಂಡನಾರ್ಹ ಎಂದು ಘೋಷಿಸಬೇಕು. ಬೀದಿ ನಾಯಿಗಳಿಗೆ ಆಹಾರ ಸುಲಭವಾಗಿ ಸಿಗುತ್ತಿದ್ದರೆ, ಸಂತಾನ ಹರಣ ಚಿಕಿತ್ಸೆ ಫಲಪ್ರದವಾಗುವುದಿಲ್ಲ.

 ಮೂರನೆಯದಾಗಿ, ನಗರ ಪ್ರದೇಶಗಳನ್ನು ಬೀದಿ ನಾಯಿಗಳ ಉಪಟಳಕ್ಕೆ ಮುಕ್ತವಾಗಿ ಬಿಡಲಾಗುವುದಿಲ್ಲ. ನಗರದ ಹೊರವಲಯದಲ್ಲಿ ಅಶ್ರಯ ತಾಣಗಳನ್ನು ನಿರ್ಮಿಸಿ, ಎನ್‍ಜಿಒಗಳು ಮತ್ತು ಖಾಸಗಿ ಪಶುವೈದ್ಯಕೀಯ ಸಿಬ್ಬಂದಿಯ ಸಹಕಾರದೊಂದಿಗೆ, ಅವುಗಳನ್ನು ನಿರ್ವಹಿಸಬೇಕು. ನಾಯಿಗಳ ಬಗ್ಗೆ ವಿಶೇಷ ಕಾಳಜಿ ತೋರುವ ನಾಗರಿಕರಿಗೆ ಅವುಗಳನ್ನು ದತ್ತು ಪಡೆಯಲು ಪೆÇ್ರೀತ್ಸಾಹಿಸಬೇಕು. ಇದಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕು. ಇದೇವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ಎಸೆಯುವುದನ್ನು ನಿಷೇಧಿಸಬೇಕು. ಆಹಾರ ಒದಗಿಸಲು ಬಯಸುವವರು ಅವುಗಳ ನಿಯಂತ್ರಣದ ಜವಾಬ್ದಾರಿಯನ್ನೂ ತೆಗೆದುಕೊಂಡು ವಾತಾವರಣವನ್ನು ತಿಳಿಗೊಳಿಸಬೇಕು.

ಅಂತಿಮವಾಗಿ, ಸಂಸತ್ತು ಕಾನೂನು ನಿಯಮವನ್ನು ಸ್ಪಷ್ಟಪಡಿಸಬೇಕಿದೆ. ಭಾರತ ಕಾನೂನು ಗೊಂದಲಗಳಲ್ಲಿ ಮುಂದುವರೆಯಲು ಆಗುವುದಿಲ್ಲ. ಅನುಕಂಪ ಮತ್ತು ರಕ್ಷಣೆಯ ನಡುವೆ ಸಮತೋಲನ ಸ್ಥಾಪಿಸಲು ನ್ಯಾಯಾಲಯಗಳು ಪರದಾಡುವಂತಾಗಬಾರದು. ಸ್ಪಷ್ಟ ನೀತಿಯಾಗಿ, ಮನುಷ್ಯನ ಜೀವ ರಕ್ಷಣೆಯೇ ಪ್ರಥಮ ಆದ್ಯತೆಯಾಗಿ, ಪ್ರಾಣಿ ಕ್ಷೇಮವು ಅದರ ಒಂದು ಭಾಗವಾಗಿ ಇರಬೇಕು.

 ಬಹಳ ವರ್ಷಗಳ ಕಾಲ ಈ ವಿಷಯವನ್ನು ಹೀಗೆಯೇ ಬೆಳೆಯಲು ಬಿಡಲಾಗಿದೆ. ಸಂತಾನಹರಣ ಚಿಕಿತ್ಸೆಯನ್ನೂ ಅರೆಮನಸ್ಸಿನಿಂದ ನಡೆಸಲಾಗುತ್ತಿದ್ದು, ಭಾವನಾತ್ಮಕ ನೆಲೆಯಲ್ಲಿ ಮಾಡಲಾಗುತ್ತಿದೆ. ತತ್ಪರಿಣಾಮವಾಗಿ, ಸಾವಿರಾರು ಜೀವಗಳು ನಾಶವಾಗಿದ್ದು, ಗ್ರಾಮಗಳಲ್ಲಿ, ನಗರಗಳಲ್ಲಿ ಭೀತಿ ಆವರಿಸಿದೆ. ಆಧುನಿಕ  ದೇಶವೊಂದು ಇದನ್ನೇ ಸಾಮಾನ್ಯ ನಿಯಮ ಎಂದು ಭಾವಿಸಲಾಗುವುದಿಲ್ಲ. ಭಾರತ ತುರ್ತು ಕ್ರಮಗಳನ್ನು ಕೈಗೊಂಡು, ಸ್ಪಷ್ಟ ನೀತಿ ಯೋಜನೆಗಳ ಮೂಲಕ, ಬೀದಿಗಳನ್ನು ಸುರಕ್ಷಿತವಾಗಿ ಮಾಡಲು ಧೈರ್ಯ ಮಾಡಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again