`ಡಿ ಗ್ಯಾಂಗ್' ಏಕಾಧಿಪತ್ಯ: ಜಾರ್ಜ್ ಆರ್ವೆಲ್ ನಿರೂಪಿಸಿದಂಥ ಶೋಷಣೆಗೆ ಒಂದು ಪ್ರಾತ್ಯಕ್ಷಿಕೆ

 



 ಜಾರ್ಜ್ ಆರ್ವೆಲ್ ಇಂದು ಬದುಕಿದ್ದಲ್ಲಿ, ಅವನ `1984' ಕಾದಂಬರಿಯಲ್ಲಿ ಸೃಷ್ಟಿಸಿದ್ದ ಕಲ್ಪಿತ ಸ್ಥಳ, ಸರ್ವಾಧಿಕಾರದ ಪ್ರಭುತ್ವ ಹೊಂದಿರುವ ಓಷಾನಿಯಾ ರಾಜ್ಯವನ್ನು ಕಲ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಆ ರಾಜ್ಯದಲ್ಲಿ ಭಾಷೆ, ಇತಿಹಾಸ ಮತ್ತು ವಾಸ್ತವ ಎಲ್ಲವನ್ನೂ ಆಳುವ ಪಕ್ಷವೇ ನಿಯಂತ್ರಿಸುವುದು ಈ ಕಥನದ ವೈಶಿಷ್ಟ್ಯ. ಈ ಹೋಲಿಕೆಯನ್ನು ಸ್ಪಷ್ಟವಾಗಿ ಹೇಳುವುದಾದರೆ, ಧರ್ಮಸ್ಥಳವನ್ನು ನಾನು `ಆರ್ವೆಲ್‍ನ ಪ್ರಯೋಗಾಲಯ' ಎಂದು ಕರೆಯುವಾಗ, ಅದು ಅರ್ಥಪೂರ್ಣವಾಗಿಯೇ ಕಾಣುತ್ತದೆ. ಇಲ್ಲಿ ಸಾರ್ವಜನಿಕ ಚರ್ಚೆಗಳನ್ನು ಎಡಿಟ್ ಮಾಡಲಾಗುತ್ತದೆ, ಭಾಷೆಯನ್ನು ಅಸ್ತ್ರವನ್ನಾಗಿ ಬಳಸಲಾಗುತ್ತದೆ, ಔದಾರ್ಯ-ದಾನ ಇವೆಲ್ಲವೂ ನಿಯಂತ್ರಣದ ಸಾಧನಗಳಾಗುತ್ತವೆ, ನೈತಿಕ ವೈರುಧ್ಯಗಳನ್ನು ಸಮರ್ಥಿಸಲಾಗುತ್ತದೆ. ಆರ್ವೆಲ್‍ನ ಓಷಾನಿಯಾದಲ್ಲಿ ಕಾಣುವ ಸತ್ಯ ಮತ್ತು ಸಮೃದ್ಧಿ ಸಚಿವಾಲಯಗಳನ್ನು ನೈಜ ಜಗತ್ತಿನಲ್ಲಿ ಊಹಿಸಿಕೊಂಡಾಗ, ನಮಗೆ ಪಂಚೆ, ಪೇಟ ಮತ್ತು ಗಂಧದ ಸುವಾಸನೆಯಷ್ಟೇ ಕಾಣುತ್ತದೆ. ಈ ಚೌಕಟ್ಟಿನಲ್ಲೇ ಈ ಪ್ರಬಂಧವನ್ನು ಧರ್ಮಸ್ಥಳದ ಸಾರ್ವಜನಿಕ ಬದುಕು ಮತ್ತು ಖಾಸಗಿ ಅಧಿಕಾರದ ದೃಷ್ಟಿಯಿಂದ ಬರೆಯಲಾಗಿದೆ.

ಧರ್ಮಸ್ಥಳ ಕೇವಲ ದೇವಾಲಯ ತಾಣ ಅಲ್ಲ. ಇಲ್ಲಿ ಸುಗಂಧ ದ್ರವ್ಯಗಳ ಸುವಾಸನೆಯ ಮುಸುಕಿನಲ್ಲಿ ಸತ್ಯವನ್ನು ಮರೆಮಾಚಲಾಗುತ್ತದೆ; ಔದಾರ್ಯ, ದಾನದ ಹೆಸರಿನಲ್ಲಿ ರಾಜಕೀಯ ಭದ್ರಕೋಟೆಯನ್ನು ನಿರ್ಮಿಸಲಾಗಿದೆ, ಈ ಸಾಂಸ್ಕøತಿಕ ಸಾಮ್ರಾಜ್ಯದ ಅತಿ ದೊಡ್ಡ ಪವಾಡ ಎಂದರೆ, ಭಕ್ತಿಪರವಶ ಜನ ಪ್ರಶ್ನಿಸುವುದನ್ನೇ ಅಪರಾಧ ಎಂದು ಭಾವಿಸುತ್ತಾರೆ.

ಆದಾಗ್ಯೂ ವಾಸ್ತವತೆಯ ಸ್ಪಷ್ಟ ಚಿತ್ರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇಲ್ಲಿನ ಡಿ ಗ್ಯಾಂಗ್ ವಿಶಾಲ ಸಮಾಜದ ಅತಿ ದೊಡ್ಡ ಶತ್ರುವಾಗಿದೆ. ಸತ್ಯ, ವಾಸ್ತವ, ಆರ್ಥಿಕತೆ, ಸಂಸ್ಕøತಿಯ ಮೇಲೆ ಈ ಗ್ಯಾಂಗ್ ಹೊಂದಿರುವ ನಿಯಂತ್ರಣ ಪೂರ್ಣಪ್ರಮಾಣದ್ದಾಗಿದ್ದು, ಅದು ಸಮಾಜ ಸ್ನೇಹಿ ಮುಖವಾಡವನ್ನು ಧರಿಸಿಕೊಂಡೇ ದಶಕಗಳ ಅಪರಾಧಗಳನ್ನು ಸಮಾಧಿ ಮಾಡುತ್ತದೆ.

ಭಾಗ 1 -  ಪ್ರಚಾರದ ಕಾರ್ಯತಂತ್ರ 

ಯಾರಿಂದಲೂ ಮುಟ್ಟಲಾಗದ ಅಧಿಕಾರಯುತ ಅಭೇದ್ಯ ಸಮೂಹವಾಗಿ ಡಿ ಗ್ಯಾಂಗ್ ರಚನೆಯಾಗಿದ್ದು, ಇದು ನೈತಿಕವಾಗಿ ಚಂದ ಕಾಣುವ ತಂತ್ರವನ್ನು ಅಳವಡಿಸಿಕೊಂಡಿದೆ. ಇವರು ತಮ್ಮ ವರ್ಚಸ್ಸಿಗೆ ಆಗಾಗ್ಗೆ ಮೆರುಗು ನೀಡುತ್ತಲೇ, ಅದಕ್ಕೆ ಒಂದು ಸಂತ ಲೇಪನವನ್ನೂ ಬಳಿದುಕೊಂಡಿದ್ದಾರೆ.

ಪ್ರತಿಯೊಂದು ಜನಪರ ಯೋಜನೆಯನ್ನೂ ಸಹ ಇಲ್ಲಿ ಸಾರ್ವಜನಿಕ ಸಂಪರ್ಕದ ಕೊಂಡಿಯಾಗಿ ನಾಟಕೀಯವಾಗಿ ಬಿಂಬಿಸಲಾಗುತ್ತದೆ. ಉಚಿತ ವಿವಾಹಗಳು, ಮಧ್ಯಾಹ್ನದ ಬಿಸಿಯೂಟ ಇವೆಲ್ಲವನ್ನೂ ಅನುಕೂಲಸಿಂಧು ರೀತಿಯಲ್ಲಿ ಪ್ರಚಾರ ಮಾಡಲಾಗುತ್ತದೆ. ಗ್ರಾಮೀಣಾಭಿವೃದ್ಧಿಯ ಹೆಸರಿನಲ್ಲಿ ಸುತ್ತಲಿನ ಗ್ರಾಮಗಳನ್ನು ರಾಜಕೀಯವಾಗಿ ಆರ್ಥಿಕವಾಗಿ ಪರಾವಲಂಬಿಯಾಗಿ ಮಾಡಲಾಗುತ್ತದೆ.

ಮಾಧ್ಯಮಗಳು ಈ ಪ್ರಚಾರದ ಮುಖ್ಯ ಕಚೇರಿಗಳಂತೆ ಯಾವುದೇ ಶುಲ್ಕ ಇಲ್ಲದೆಯೇ ನಿರ್ವಹಿಸುತ್ತವೆ. ಟಿವಿ ವಾಹಿನಿಗಳು ಭಕ್ತಿಪೂರ್ವಕ ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ವಾಸ್ತವವನ್ನು ಪವಿತ್ರ ಶ್ಲೋಕವನ್ನಾಗಿ ಬಿಂಬಿಸುತ್ತವೆ. ಯಾವುದೇ ಖಂಡನೆ ಅಥವಾ ವಿಮರ್ಶೆಯನ್ನು ಪತ್ರಿಕೆಯಲ್ಲಿ ಮುದ್ರಣವಾಗುವ ಮುನ್ನವೇ ಅಳಿಸಿಹಾಕಲಾಗುತ್ತದೆ. ಪಾವಿತ್ರ್ಯತೆಯನ್ನು ನಿರೂಪಣೆಗಳ ಮೂಲಕ ನಿಯಂತ್ರಿಸುವ ಈ ಮಾದರಿಯಲ್ಲಿ ವಾಸ್ತವಾಂಶಗಳು ಹೊಂದಾಣಿಕೆಯ ಮೆದು ವಿಷಯಗಳಾಗಿ ಪರಿವರ್ತನೆಯಾಗುತ್ತವೆ. ಆರ್ವೆಲ್ ಬರೆದ ಹಾಗೆ, ಭೂತವನ್ನು ನಿಯಂತ್ರಿಸುವವರೇ ಭವಿಷ್ಯವನ್ನೂ ನಿಯಂತ್ರಿಸುತ್ತಾರೆ. ವರ್ತಮಾನವನ್ನು ನಿಯಂತ್ರಿಸುವವರು ಭೂತವನ್ನು ನಿಯಂತ್ರಿಸುತ್ತಾರೆ. ಧರ್ಮಸ್ಥಳ ಮೂರನ್ನೂ ನಿಯಂತ್ರಿಸುತ್ತದೆ.

ಭಾಗ 2 - ಔದಾರ್ಯದ ಹೆಸರಿನಲ್ಲಿ ಶೋಷಣೆಯ ಆರ್ಥಿಕ ಮಾದರಿ

ಧರ್ಮಸ್ಥಳದ ಆರ್ಥಿಕತೆಯು ನಡೆಯುವುದು ನಗದು ವ್ಯವಹಾರವನ್ನು ಅವಲಂಬಿಸಿರುವಷ್ಟೇ ಪ್ರಮಾಣದಲ್ಲಿ ಕೃತಜ್ಞತಾ ಭಾವನೆಯನ್ನೂ ಅವಲಂಬಿಸುತ್ತದೆ. ಇಲ್ಲಿ ಔದಾರ್ಯ ಎನ್ನುವುದು ಹೂಡಿಕೆಯಾಗಿ ಪರಿಣಮಿಸುತ್ತದೆ, ಇಲ್ಲಿ ನಡೆಯುವ ವಹಿವಾಟುಗಳಲ್ಲಿ ಕಾಣುವ ಕರೆನ್ಸಿ ಎಂದರೆ ಮೌನವಾಗಿರುವುದು.

ಇಲ್ಲಿ ಸಂಪತ್ತು ದೇಣಿಗೆಗಳ ಮೂಲಕ, ಭೂಮಿಯನ್ನು ಉಡುಗೊರೆಯಾಗಿ ಕೊಡುವುದರಿಂದ,  ಸ್ವಇಚ್ಛೆಯ ಕಾಣಿಕೆಯ ಮೂಲಕ ಹರಿದುಬರುತ್ತದೆ. ಆದರೆ ಒಂದು ಕಾರ್ಯತಂತ್ರದ ರೂಪದಲ್ಲಿ ಹೊರಗೆ ಹರಿಯುತ್ತದೆ. ಇಲ್ಲಿ ನಿಷ್ಠೆ ಎನ್ನುವುದು ಇಡೀ ಪ್ರಕ್ರಿಯೆಯ ಬುನಾದಿಯಾಗಿರುತ್ತದೆ. ಅಭಿವೃದ್ಧಿಯ ಗುತ್ತಿಗೆಗಳು ಶ್ರದ್ಧೆ ಇರುವವರಿಗೇ ದೊರೆಯುತ್ತವೆ, ಡಿ ಗ್ಯಾಂಗ್ ನಡೆಸುವ ಸಂಸ್ಥೆಗಳು ಉದ್ಯೋಗದ ಏಕಸ್ವಾಮ್ಯ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತವೆ.

ಇಲ್ಲಿ ಕಾಣುವ ಕಡು ಬಡವ ಫಲಾನುಭವಿಯೂ ಕೃತಜ್ಞರಹಿತನಾಗಿರಲು ಸಾಧ್ಯವೇ ಇಲ್ಲ. ದಾನ ಎನ್ನುವುದು ಅಗೋಚರ ಒಪ್ಪಂದದ ರೂಪದಲ್ಲಿ ಬರುತ್ತದೆ. ಅಲ್ಲಿ ನಿಮ್ಮ ದನಿಯನ್ನು ವಶಪಡಿಸಿಕೊಳ್ಳಲಾಗುತ್ತದೆ. ಸಾರ್ವಜನಿಕವಾಗಿ ಪೆÇೀಷಕರಿಗೆ ಧನ್ಯವಾದಗಳನ್ನು ಸಲ್ಲಿಸಬಹುದು, ಆದರೆ ಅವರನ್ನು ಖಂಡಿಸುವಾಗ ಪಿಸುಮಾತಿನಲ್ಲಿ, ಗುಸುಗುಸು ಮಾತಿನಲ್ಲೇ ಮಾತನಾಡಬೇಕಾಗುತ್ತದೆ. ಆರ್ವೆಲ್‍ನ ಸಮೃದ್ಧಿ ಸಚಿವಾಲಯದಂತೆಯೇ ಈ ಮಾದರಿ ಇದೆ. ಜನತೆಯನ್ನು ಹತಾಶೆಯ ಭಾವದಿಂದ ಹೊರಗಿರಿಸಲಾಗುತ್ತದೆ, ತತ್ಪರಿಣಾಮವಾಗಿ ಅವರು ಅವಲಂಬನೆಯನ್ನೇ ಆಶೀರ್ವಾದ ಎಂದು ಭಾವಿಸುತ್ತಾರೆ.

ಭಾಗ 3 - ಪ್ರತಿರೋಧವನ್ನು ಮಣಿಸುವುದು

ಇಲ್ಲಿ ಪ್ರಚಾರ ಎನ್ನುವುದು ಸಾರ್ವಜನಿಕ ಪ್ರಹಸನವಷ್ಟೇ. ಆರ್ಥಿಕತೆಯೇ ಮುಖ್ಯ ಬಲ. ದಮನವೇ ಇದರ ಬೆನ್ನೆಲುಬು.

ದಶಕಗಳ ಕಾಲದಿಂದ ಇಲ್ಲಿ ಕೇಳಿಬರುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ಆರೋಪಗಳನ್ನು - ಕೆಲವರು ಇದನ್ನು ಗುಪ್ತ ಜನಾಂಗೀಯ ದೌರ್ಜನ್ಯ ಎಂದೂ ಕರೆಯುತ್ತಾರೆ - ಬಹಳ ಸೂಕ್ಷ್ಮತೆಯಿಂದ ಅಳಿಸಿಹಾಕಲಾಗುತ್ತದೆ. ಆದರೆ ಇದು ಸಾಧ್ಯವಾಗುವುದು ನ್ಯಾಯಾಲಯದ ಕಲಾಪಗಳ ಮೂಲಕ ಅಲ್ಲ, ಅಥವಾ ಸಾರ್ವಜನಿಕರ ಖಂಡನೆಯ ಮೂಲಕ ಅಲ್ಲ, ಬದಲಾಗಿ ಮೌನವಾದ, ಉಸಿರುಗಟ್ಟಿಸುವ ಸಾಂಸ್ಕøತಿಕ ಅಧಿಕಾರ ಮತ್ತು ನಿಯಂತ್ರಣದ ಮೂಲಕ.

ಸಂತ್ರಸ್ತರ ಕತೆಗಳನ್ನು `ಗುಮಾನಿ' ಅಥವಾ `ಗಾಳಿ ಸುದ್ದಿ' ಎಂದು ಬಣ್ಣಿಸಲಾಗುತ್ತದೆ ಅಥವಾ ಕೌಟುಂಬಿಕ ಕಲಹ ಎಂದು ಹಣೆಪಟ್ಟಿ ನೀಡಲಾಗುತ್ತದೆ. ಇಲ್ಲವಾದರೆ ಅವು ಯಾರಿಗೂ ಕಾಣಿಸದ ಹಾಗೆ ಮರೆಯಾಗಿಬಿಡುತ್ತದೆ. ಸಾರ್ವಜನಿಕರಲ್ಲಿ, ಮುಕ್ತವಾಗಿ ಜೋರಾಗಿ ಮಾತನಾಡುವುದೇ ಸಾಮಾಜಿಕ ಸೌಹಾರ್ದತೆಯನ್ನು ಕೆಡಿಸುತ್ತದೆ ಎಂಬ ಭಾವನೆಯನ್ನು ಮೂಡಿಸುತ್ತದೆ. ಆರ್ವೆಲ್‍ನ ತರ್ಕದ ನೆಲೆಯಲ್ಲೇ ನೋಡಿದರೆ, ಸೌಹಾರ್ದ ಎಂದರೆ ಮೌನವಾಗಿರುವುದು, ತೆಪ್ಪಗಿರುವುದು ಮತ್ತು ಮೌನ ಎಂದರೆ ದಮನಕಾರಿ ಶಕ್ತಿಗಳ ದೃಷ್ಟಿಯಲ್ಲಿ ಶಾಂತಿ ಎನಿಸಿಕೊಳ್ಳುತ್ತದೆ.

ಪಕ್ಷಾತೀತವಾಗಿ ರಾಜಕಾರಣಿಗಳು ಮಿಥ್ಯೆಯ ಸಂರಕ್ಷಕರಾಗಿ ವರ್ತಿಸುತ್ತಾರೆಯೇ ಹೊರತು ಅಸತ್ಯ ಮತ್ತು ಅಧರ್ಮವನ್ನು ಪ್ರಶ್ನಿಸುವವರಾಗಿ ಅಲ್ಲ. ಮಾಧ್ಯಮಗಳು ಸತ್ಯವನ್ನು ಲಭ್ಯತೆಯ ನೆಲೆಯಲ್ಲಿ ನೋಡುತ್ತಾರೆ, ಹಾಗಾಗಿ ಸತ್ಯ ಎಲ್ಲೂ ಗೆಲ್ಲುವುದಿಲ್ಲ. ಜನತೆಯನ್ನು ದಶಕಗಳ ಕಾಲದಿಂದ ನೈತಿಕತೆಯ ಮೂಲಕ ನಿಬರ್ಂಧಿಸಿ ದಾರಿಗೆ ತರಲಾಗಿದೆ, ಹಾಗಾಗಿ ಪ್ರತಿರೋಧ ಎನ್ನುವುದು ಧರ್ಮನಿಂದನೆಯಾಗುತ್ತದೆ.

ಧರ್ಮಸ್ಥಳದ ಹೊಸ ಪರಿಭಾಷೆಯ ನಿಘಂಟು

* ಸೇವೆ - ಔದಾರ್ಯದ ಮುಖವಾಡ ಹೊತ್ತ ವಿನಯ, ವಿನಮ್ರತೆ.

* ಉಚಿತ ಸಾಮೂಹಿಕ ವಿವಾಹ - ಬಡ ಜನತೆಯನ್ನು ನಿಷ್ಠೆಯಿಂದ ಬಂಧಿಸುವ ಪ್ರಕ್ರಿಯೆ.

* ಅನ್ನದಾನ (ಆಹಾರ ದಾಸೋಹ) - ಅವಲಂಬನೆಯನ್ನು ಶಾಶ್ವತವಾಗಿ ನೆನಪಿಸುವ ಕ್ರಿಯೆ.

* ಗ್ರಾಮೀಣಾಭಿವೃದ್ಧಿ ಯೋಜನೆ - ಪ್ರಗತಿಯ ಮುಖವಾಡ ಹೊತ್ತ ಆರ್ಥಿಕ ನಿಯಂತ್ರಣ.

* ಮಹಿಳಾ ಸಬಲೀಕರಣ ಯೋಜನೆ - ಖಾಸಗಿಯಾಗಿ ಜನರನ್ನು ತೆಪ್ಪಗಾಗಿಸುವ ಒಂದು ಹಂದರ.

* ಶೈಕ್ಷಣಿಕ ಸಂಸ್ಥೆಗಳು - ನಿಷ್ಠಾವಂತ ಜನರನ್ನು ಉತ್ಪಾದಿಸುವ ಕಾರ್ಖಾನೆ.

* ಟ್ರಸ್ಟ್ ಆಸ್ತಿಯ ನಿರ್ವಹಣೆ - ಯಾವುದೇ ಲೆಕ್ಕಪರಿಶೋಧನೆಗೆ ಒಳಪಡದ ನಿಲುಕದ ಆಸ್ತಿಯನ್ನು ನಿಯಂತ್ರಿಸುವ ಪರಮಾಧಿಕಾರ.

* ಸಮಾಜ ಸ್ನೇಹಿ - ಯಾವುದೇ ವಿಮರ್ಶೆಗೆ ಒಳಪಡದ ರಾಜಕೀಯ ಕೋಟೆ.

* ಸಾಮಾಜಿಕ ಸೌಹಾರ್ದ - ಅನ್ಯಾಯಗಳ ಬಗ್ಗೆ ಬಲಾತ್ಕಾರದ ಮೌನ.

* ಪವಿತ್ರ ಪರಂಪರೆ - ಅನಾನುಕೂಲ ಉಂಟುಮಾಡುವ ಸತ್ಯಗಳನ್ನು ಅಳಿಸಿಹಾಕಿ, ಶುಚಿಗೊಳಿಸಲಾದ ಇತಿಹಾಸ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again