ಸೌಜನ್ಯ ಪ್ರಕರಣ: 13 ವರ್ಷ ಕಳೆದರೂ ಅಪರಾಧಿಯ ಬಂಧನವಾಗಿಲ್ಲ

 ಸೌಜನ್ಯ ಪ್ರಕರಣವು, ಭಾರತದಲ್ಲಿ ಕಾನೂನು ನಿಯಮ ಪಾಲನೆಯು ಹೇಗೆ ಪ್ರಭಾವಶಾಲಿಗಳಿಗೆ ಶರಣಾಗುತ್ತದೆ ಎನ್ನಲು ಒಂದು ನಿದರ್ಶನವಾಗಿದೆ.

ಭಾರತದ ಯಾವುದೇ ರಾಜ್ಯದಲ್ಲಾದರೂ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಕಾನೂನು ನಿರೀಕ್ಷಿತವಾಗಿ ತ್ವರಿತಗತಿಯಲ್ಲಿ ಸಾಗುತ್ತವೆ. ಸಂತ್ರಸ್ತೆಯ ಕುಟುಂಬವು ತಮ್ಮ ದೂರಿನಲ್ಲಿ ಶಂಕಿತ ವ್ಯಕ್ತಿಗಳ ಹೆಸರನ್ನೂ ಸೂಚಿಸಿದ ಕೂಡಲೇ, ಸಾಮಾನ್ಯವಾಗಿ ಪೆÇಲೀಸರು ಎಫ್‍ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿ, ವಿಚಾರಣೆಯನ್ನು ಚಾಲನೆಗೊಳಿಸುತ್ತಾರೆ. ಆದರೂ 2012ರಲ್ಲಿ ಬಾಲಕಿ ಸೌಜನ್ಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣದಲ್ಲಿ ಈ ನ್ಯಾಯಿಕ ತತ್ವವು ತಳೆಕೆಳಗಾಗಿದ್ದು, 13 ವರ್ಷಗಳು ಕಳೆದರೂ ಕುಟುಂಬವು ಹೆಸರಿಸಿದ ಒಬ್ಬರನ್ನೂ ಸಹ ಬಂಧಿಸಲಾಗಿಲ್ಲ.

ಇದು ಕೇವಲ ವಿಳಂಬ ಎನಿಸುವುದಿಲ್ಲ. ಬದಲಾಗಿ ನ್ಯಾಯದ ನಿರಾಕರಣೆಯೇ ಆಗಿದೆ. ಸೌಜನ್ಯಳ ಪೆÇೀಷಕರು ನೇರವಾಗಿ ಈ ದುಷ್ಕøತ್ಯಕ್ಕೆ ಕಾರಣರಾದವರನ್ನು ಗುರುತಿಸಿದ್ದಾರೆ. ಆದಾಗ್ಯೂ ವ್ಯವಸ್ಥೆಯು ಅಪರಾಧಿಗಳನ್ನು ರಕ್ಷಿಸುವ ಸಲುವಾಗಿ ಮೌನಕ್ಕೆ ಜಾರಿದೆ. ದೂರನ್ನು ಆಧರಿಸಿ ಕ್ರಮ ಜರುಗಿಸುವ ಬದಲು ಪೆÇಲೀಸರು ಅನಿರ್ದಿಷ್ಟ ವಿಳಂಬ ಮಾಡುತ್ತಿದ್ದು, ಪ್ರಕರಣದ ವಿವರಗಳನ್ನು ತಿರುಚುವುದೇ ಅಲ್ಲದೆ ನ್ಯಾಯಯುತವಾದ ತನಿಖೆಯನ್ನೂ ನಡೆಸದೆ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ. ನೇರವಾಗಿ ವಿಚಾರಣೆ ಮತ್ತು ಬಂಧನದಲ್ಲಿ ಅಂತ್ಯವಾಗಬೇಕಿದ್ದ ಒಂದು ಪ್ರಕರಣವು ಈಗ ರಾಜಕೀಯ ಪ್ರಭಾವ ಮತ್ತು ಭಯಭೀತಿಗಳ ಅಡಿಯಲ್ಲಿ ಸಮಾಧಿಯಾಗಿದೆ.

ಇದಕ್ಕೆ ಕಾರಣ ಆರೋಪಿಯು ಕುಖ್ಯಾತ ಡಿ ಗ್ಯಾಂಗ್‍ಗೆ ಸೇರಿದವರಾಗಿದ್ದಾರೆ. ಈ ಸ್ಥಳೀಯ ಗುಂಪಿನ ಜಾಲ ಆಳವಾದ ರಾಜಕೀಯ ಬೇರುಗಳನ್ನು ಹೊಂದಿದೆ. ಪೆÇಲೀಸರು ಸತ್ಯದೊಡನೆ ನಿಲ್ಲುವುದರ ಬದಲು, ಅಧಿಕಾರ  ಮತ್ತು ಬಲಾಢ್ಯರನ್ನು ರಕ್ಷಿಸಲು ಮುಂದಾಗಿದ್ದಾರೆ. ಕರ್ನಾಟಕದ ಅಂದಿನ ಬಿಜೆಪಿ ಸರ್ಕಾರ ಇದರಲ್ಲಿ ಶಾಮೀಲಾಗಿರುವುದು ಶತಃಸಿದ್ಧ. ಆಗ ಗೃಹಸಚಿವರಾಗಿದ್ದ ಆರ್ ಅಶೋಕ್ ಈಗ ವಿರೋಧ ಪಕ್ಷದ ನಾಯಕರಾಗಿದ್ದು ಈ ಬಂಧನದ ಆದೇಶ ನೀಡಲು ಎಲ್ಲ ಅವಕಾಶಗಳನ್ನೂ ಹೊಂದಿದ್ದರು, ಕಾನೂನು ಪ್ರಕ್ರಿಯೆ ನಡೆಯಬಹುದಾಗಿತ್ತು. ಆದರೆ ಆಗ ಈ ಸಚಿವರು ಯಾವ ಕ್ರಮವನ್ನೂ ಜರುಗಿಸಲಿಲ್ಲ. ಅವರ ಮೌನ ಮತ್ತು ನಿಷ್ಕ್ರಿಯತೆಯೇ ಪ್ರಕರಣವನ್ನು 13 ವರ್ಷಗಳ ಕಾಲ ಕೊಳೆಯುವಂತೆ ಮಾಡಿದೆ. ಅಪರಾಧಿಗಳು ಮುಕ್ತವಾಗಿ ಓಡಾಡಿಕೊಂಡಿದ್ದಾರೆ.

ಸೌಜನ್ಯ ಪ್ರಕರಣವು, ಭಾರತದಲ್ಲಿ ಕಾನೂನು ನಿಯಮ ಪಾಲನೆಯು ಹೇಗೆ ಪ್ರಭಾವಶಾಲಿಗಳಿಗೆ ಶರಣಾಗುತ್ತದೆ ಎನ್ನಲು ಒಂದು ನಿದರ್ಶನವಾಗಿದೆ. ಆರೋಪಿಗಳು ಶಕ್ತಿಹೀನರಾಗಿದ್ದರೆ, ನ್ಯಾಯ ತ್ವರಿತವಾಗಿ ನಿರ್ಧಾರವಾಗುತ್ತದೆ, ಕರುಣೆಯಿಲ್ಲದೆ ಪಾಲಿಸಲಾಗುತ್ತದೆ. ಆದರೆ ಆರೋಪಿಗಳು ಸುರಕ್ಷಿತ ಜಾಲಗಳನ್ನು ಹೊಂದಿರುವಾಗ ಕಾನೂನು ವಿಮುಖವಾಗುತ್ತದೆ. ನ್ಯಾಯವನ್ನು ಎತ್ತಿಹಿಡಿಯಬೇಕಾದ ಪೆÇಲೀಸು, ನ್ಯಾಯಾಲಯಗಳು, ಸರ್ಕಾರಗಳು ಮತ್ತಿತರ ಸಂಸ್ಥೆಗಳೇ, ಮೌನ ಪ್ರೇಕ್ಷಕರಾಗಿ, ಕೆಲವೊಮ್ಮೆ ಶಂಕಿತರನ್ನು ರಕ್ಷಿಸಲಾಗುತ್ತದೆ.

ಸರ್ಕಾರ 2012ರಲ್ಲಿ ಸರಿಯಾದ ಕ್ರಮ ಜರುಗಿಸಿದ್ದರೆ, ಈ ಪ್ರಕರಣವು ಇಷ್ಟೊತ್ತಿಗಾಗಲೇ ಅಂತಿಮ ನ್ಯಾಯ ಕಾಣಬಹುದಾಗಿತ್ತು. ಬದಲಾಗಿ ಬಂಧಿಸಲು ವಿಫಲವಾದದ್ದು, ತನಿಖೆಯಲ್ಲಿ ತಪ್ಪು ಮಾಡಿರುವುದು ಹಾಗೂ ನ್ಯಾಯಾಲಯದಲ್ಲಿ ನ್ಯಾಯಯುತವಾಗಿ ಕಾನೂನು ಮೊಕದ್ದಮೆ ದಾಖಲಿಸದೆ ಇರುವುದು, ಸೌಜನ್ಯಾಳ ಹೆಸರನ್ನು ನ್ಯಾಯದ ನಿರಾಕರಣೆಯ ಸಂಕೇತವಾಗಿ ಶಾಶ್ವತಗೊಳಿಸಿದೆ.

13 ವರ್ಷಗಳ ಅನಂತರ ಈ ಸಂದೇಶ ಮೈನವಿರೇಳಿಸುವಂತೆ ಕಾಣುತ್ತದೆ. ಭಾರತದಲ್ಲಿ ನ್ಯಾಯವು ಸತ್ಯವನ್ನು ಆಧರಿಸಿ ನಿಷ್ಕರ್ಷೆಯಾಗುವುದಿಲ್ಲ; ಬದಲಾಗಿ ಅಧಿಕಾರವನ್ನು ಆಧರಿಸುತ್ತದೆ. ಈ ಪರಿಸ್ಥಿತಿ ಹೀಗೇ ಇರುವವರೆಗೂ, ಸೌಜನ್ಯಾಳಂತಹ ಸಂತ್ರಸ್ತರು ಹೆಚ್ಚಾಗುತ್ತಲೇ ಇರುತ್ತಾರೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again