ಧರ್ಮಸ್ಥಳ ಸಾಮ್ರಾಜ್ಯದ ಲೆಕ್ಕಪರಿಶೋಧನೆ ಏಕಿಲ್ಲ?
ಪಾರದರ್ಶಕತೆಯನ್ನು ಧರ್ಮಕ್ಕೆ ಒತ್ತೆ ಇಡಕೂಡದು. ಬದಲಾಗಿ ಅದು ಸಾರ್ವಜನಿಕ ಉತ್ತರದಾಯಿತ್ವವನ್ನು ಎತ್ತಿಹಿಡಿಯುವಂತಿರಬೇಕು.
ಕರ್ನಾಟಕದ ಸಾಂಸ್ಕøತಿಕ ಹಾಗೂ ಅಭಿವೃದ್ಧಿಯ ವಲಯದಲ್ಲಿ ತನ್ನದೇ ಆದ ಮಹತ್ತರ ಸ್ಥಾನ ಪಡೆದಿರುವ, ಧರ್ಮಸ್ಥಳ ಸಮೂಹದ ಸಂಸ್ಥೆಗಳು ಇಂದಿಗೂ ಅಪಾರದರ್ಶಕವಾಗಿಯೇ ಇವೆ. ಈ ಸಮೂಹವು ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿದ್ದು, ಈ ಸಂಸ್ಥೆಯು ವಾರ್ಷಿಕವಾಗಿ ಎಷ್ಟು ಹಣ ಸಂಪಾದಿಸುತ್ತದೆ, ಇದರಲ್ಲಿ ಎಷ್ಟು ತೆರಿಗೆ ಪಾವತಿಸುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಎಲ್ಲಿಯೂ ಕಾಣುವುದಿಲ್ಲ.
ಧರ್ಮಸ್ಥಳದ ದೇವಸ್ಥಾನವೇ ತೆರಿಗೆ ವಿನಾಯಿತಿಯ ಸೌಲಭ್ಯ ಪಡೆಯುತ್ತಿದ್ದು, ಇದಕ್ಕೆ ಕಾರಣ ಹಿಂದೂ ದೇವಾಲಯ ಎಂಬುದಲ್ಲ; ಬದಲಾಗಿ, ಜೈನರ ಒಡೆತನದಲ್ಲಿರುವ ಕುಟುಂಬದ ದೈವ ಎಂಬ ಕಾರಣಕ್ಕಾಗಿ. ಭಕ್ತಾದಿಗಳಿಂದ ಬರುವ ಕಾಣಿಕೆ, ಕೃಷಿ ಭೂಮಿಯಿಂದ ಬರುವ ಆದಾಯ, ದೇವಸ್ಥಾನದ ದತ್ತಿ ಸಂಸ್ಥೆಗಳಿಂದ ಬರುವ ಬಡ್ಡಿಯ ಹಣ ಇವೆಲ್ಲವನ್ನೂ ದಾನ ಧರ್ಮಗಳಿಗೆ ಬಳಸಿದರೆ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ ಆಧುನಿಕ ಧರ್ಮಸ್ಥಳದ ಸಮೂಹವು ಒಂದು ದೇವಾಲಯವನ್ನೂ ಮೀರಿದ ಸಂಸ್ಥೆಯಾಗಿದೆ.
ಹಲವು ಟ್ರಸ್ಟ್‍ಗಳನ್ನು ಹೊಂದಿರುವ ಈ ಸಮೂಹವು ಮುಖ್ಯವಾಗಿ ಎಸ್‍ಡಿಎಮ್ ಟ್ರಸ್ಟ್ ನಿರ್ವಹಿಸುತ್ತಿದ್ದು, ಶೈಕ್ಷಣಿಕ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಆಯುರ್ವೇದ ಕೇಂದ್ರಗಳು, ಮೈಕ್ರೋ ಫೈನಾನ್ಸ್ ಘಟಕಗಳು, ನವೀಕೃತ ಇಂಧನದ ಯೋಜನೆಗಳು, ಗ್ರಾಮೀಣಾಭಿವೃದ್ಧಿಯ ಕಾರ್ಯಕ್ರಮಗಳು ಮತ್ತು ಸಹಕಾರಿ ಸಂಸ್ಥೆಗಳನ್ನು ನಿರ್ವಹಿಸುತ್ತದೆ. ಈ ಸಂಸ್ಥೆಗಳ ಮೂಲಕ ಅಪಾರ ಮೊತ್ತದ ಆದಾಯವನ್ನು ವಿದ್ಯಾರ್ಥಿಗಳ ಶುಲ್ಕ, ವೈದ್ಯಕೀಯ, ಹಾಸ್ಟೆಲ್ ಮತ್ತು ಮೆಸ್ ಶುಲ್ಕ, ವೈದ್ಯಕೀಯ ತಪಾಸಣೆಯ ಬಿಲ್, ಸಲಹಾ ಕೇಂದ್ರಗಳ ಬಿಲ್, ಬಾಡಿಗೆ ಮತ್ತು ಇತರ ಮೂಲಗಳಿಂದ ಗಳಿಸುತ್ತದೆ.
ಹಾಗಾಗಿ ಈ ಆದಾಯದ ಯಾವ ಭಾಗಕ್ಕೆ ತೆರಿಗೆ ವಿಧಿಸಲಾಗುತ್ತದೆ? ಯಾವ ಸಂಸ್ಥೆಗಳು ವಿನಾಯಿತಿ ಪಡೆದಿವೆ ಮತ್ತು ಅವುಗಳು ಕಾನೂನಾತ್ಮಕವಾಗಿ ವಿನಾಯಿತಿಗೆ ಅರ್ಹವೇ?
ಭಾರತದ ತೆರಿಗೆ ಕಾನೂನುಗಳು ಸ್ಪಷ್ಟವಾಗಿವೆ. ಶಿಕ್ಷಣ ಮತ್ತು ವೈದ್ಯಕೀಯ ಪರಿಹಾರ ನೀಡುವ ಸಂಸ್ಥೆಗಳು ಯಾವುದೇ ಲಾಭದ ಉದ್ದೇಶ ಇಲ್ಲದೆ ನಿರ್ವಹಿಸಲ್ಪಟ್ಟರೆ ಮಾತ್ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (23ಸಿ) ಅಡಿಯಲ್ಲಿ ಅಥವಾ ಸೆಕ್ಷನ್ 12ಎ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಇತ್ತೀಚಿನ ಸುಪ್ರೀಂಕೋರ್ಟ್ ಆದೇಶಗಳು ಇದನ್ನು ಮತ್ತಷ್ಟು ಸ್ಪಷ್ಟೀಕರಿಸಿದ್ದು, ವಾಣಿಜ್ಯೀಕರಣ, ಕ್ಯಾಪಿಟೇಷನ್ ಶುಲ್ಕ, ಲಾಭದ ಮರುಹೂಡಿಕೆಗಳು ಟ್ರಸ್ಟ್‍ಗಳನ್ನು ತೆರಿಗೆ ವಿನಾಯಿತಿಯಿಂದ ಹೊರತುಪಡಿಸುತ್ತವೆ. ಧರ್ಮಸ್ಥಳದ ನಿರ್ವಹಣೆಯಲ್ಲಿರುವ ಯಾವುದೇ ಸಂಸ್ಥೆಯು ಹೆಚ್ಚಿನ ಶುಲ್ಕ ವಿಧಿಸಿ ಅಥವಾ ಲಾಭ ಗಳಿಕೆಯ ಉದ್ಯಮವಾಗಿ ಕಾರ್ಯನಿರ್ವಹಿಸಿದರೆ, ಅದು ಇತರ ಖಾಸಗಿ ಸಂಸ್ಥೆಗಳ ಹಾಗೆಯೇ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಈ ನಿಯಮಗಳನ್ನು ಜಾರಿಗೊಳಿಸಲಾಗಿದೆಯೇ?
ಆದಾಯ ತೆರಿಗೆ ಇಲಾಖೆಯು ಎಂದಾದರೂ ಎಸ್‍ಡಿಎಮ್ ಟ್ರಸ್ಟ್ ಮತ್ತು ಅದರ ಸಹವರ್ತಿ ಸಂಸ್ಥೆಗಳ ಸಮಗ್ರ ಲೆಕ್ಕ ಪರಿಶೋಧನೆಯನ್ನು ನಡೆಸಿದೆಯೇ? ಈ ಸಂಸ್ಥೆಗಳ ಆದಾಯ, ವರಮಾನ, ವೆಚ್ಚ ಮತ್ತು ಆಸ್ತಿ ಪ್ರಮಾಣೀಕರಣಗಳನ್ನು ಪರಿಶೀಲನೆ ಮಾಡಿದೆಯೇ? ಯಾವುದೇ ವಿನಾಯಿತಿಯನ್ನು ಹಿಂಪಡೆಯಲಾಗಿದೆಯೇ ಅಥವಾ ಮರು ಪರಿಷ್ಕರಣೆಯನ್ನು ಸೆಕ್ಷನ್ 147 ಅಥವಾ 148ರ ಅಡಿಯಲ್ಲಿ ಮಾಡಲಾಗಿದೆಯೇ?
ರಾಜ್ಯ ಮಟ್ಟದಲ್ಲೂ ಸಹ ಕರ್ನಾಟಕ ಸರ್ಕಾರವು ಭೂಮಿಯನ್ನು ಲೀಸ್ ಮೇಲೆ ನೀಡುತ್ತದೆ, ವಿದ್ಯುತ್ ಮತ್ತು ನೀರಿನ ಸೌಲಭ್ಯಗಳಿಗೆ ಸಬ್ಸಿಡಿ ನೀಡುತ್ತದೆ, ಧರ್ಮಸ್ಥಳದ ಸಂಸ್ಥೆಗಳಿಗೆ ಮೂಲ ಸೌಕರ್ಯಗಳ ಮುಕ್ತ ಪರವಾನಗಿ ನೀಡುತ್ತದೆ. ಈ ಅನುಕೂಲತೆಗಳು ಲಾಭರಹಿತ ಚಟುವಟಿಕೆಗಳಿಗಾಗಿ ಒದಗಿಸಲಾಗುತ್ತದೆ. ಈ ಸಾರ್ವಜನಿಕ ಸಂಪನ್ಮೂಲಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಗಳು ವಾಣಿಜ್ಯ ವ್ಯವಹಾರಗಳಿಗೆ, ಧಾರ್ಮಿಕ ಕಾರ್ಯಗಳ ಮುಸುಕಿನಲ್ಲಿ ನೀಡಲಾಗುತ್ತಿಲ್ಲ ಎಂದು ನಾಗರಿಕರಿಗೆ ಭರವಸೆ ನೀಡಲು ಸಾಧ್ಯವೇ?
ಪಾರದರ್ಶಕತೆಯನ್ನು ಧರ್ಮಕ್ಕೆ ಒತ್ತೆ ಇಡಕೂಡದು. ಬದಲಾಗಿ ಅದು ಸಾರ್ವಜನಿಕ ಉತ್ತರದಾಯಿತ್ವವನ್ನು ಎತ್ತಿಹಿಡಿಯುವಂತಿರಬೇಕು. ಧಾರ್ಮಿಕ ಟ್ರಸ್ಟ್ ಕಾಲೇಜುಗಳನ್ನು, ಆಸ್ಪತ್ರೆಗಳನ್ನು, ಕೈಗಾರಿಕೆಗಳನ್ನು ಮತ್ತು ಮೈಕ್ರೊಫೈನಾನ್ಸ್ ಹಣಕಾಸು ಸಂಸ್ಥೆಗಳನ್ನು ನಡೆಸುತ್ತಿದ್ದರೆ ಅದು ಆಧ್ಯಾತ್ಮಿಕ ಸಂಸ್ಥೆ ಎನಿಸಿಕೊಳ್ಳುವುದಿಲ್ಲ. ಬದಲಾಗಿ ಕಾಪೆರ್Çರೇಟ್ ಔದ್ಯಮಿಕ ಒಕ್ಕೂಟವಾಗಿ, ಧಾರ್ಮಿಕ ಹಣೆಪಟ್ಟಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ.
ಧರ್ಮಸ್ಥಳವು ಮುಚ್ಚಿಡುವುದು ಏನೂ ಇಲ್ಲ ಎಂದಾದರೆ, ಸ್ವಪ್ರೇರಣೆಯಿಂದ ಅದು ಲೆಕ್ಕ ಪರಿಶೋಧನೆಗೊಳಗಾದ ತನ್ನ ಲೆಕ್ಕಪತ್ರಗಳನ್ನು, ತೆರಿಗೆ ಪಾವತಿಸಿದ ದಾಖಲೆಗಳನ್ನು, ಆಸ್ತಿ ಹೊಂದಿರುವ ಸಂಸ್ಥೆಗಳ ಸಂಪೂರ್ಣ ಪಟ್ಟಿಯನ್ನು ಸಾರ್ವಜನಿಕವಾಗಿ ಒದಗಿಸಬೇಕು. ಅಲ್ಲಿಯವರೆಗೂ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು, ಇದು ಪವಿತ್ರ ಟ್ರಸ್ಟ್ ಆಗಿದೆಯೋ ಅಥವಾ ಅನಿರ್ಬಂಧಿತ ವಾಣಿಜ್ಯ ಸಾಮ್ರಾಜ್ಯವೋ ಎಂದು ಪ್ರಶ್ನಿಸುತ್ತಲೇ ಇರಬೇಕಾಗುತ್ತದೆ. ಸರ್ಕಾರವೂ ಕೂಡಲೇ ಕಾರ್ಯಪ್ರವೃತ್ತವಾಗಿ, ಶ್ರದ್ಧೆಯನ್ನು ವಿರೋಧಿಸುವ ಉದ್ದೇಶವಿಲ್ಲದೆಯೇ, ಸಾಂವಿಧಾನಿಕ ಕರ್ತವ್ಯ ಮತ್ತು ಹಣಕಾಸು ನಿಷ್ಠೆಯನ್ನು ತೋರಿಸಲು ಮುಂದುವರೆಯಬೇಕಿದೆ. ಯಾವುದೇ ಆಧ್ಯಾತ್ಮಿಕ ಸಂಸ್ಥೆಯು ಕಾನೂನು ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಲು ಅವಕಾಶ ನೀಡಕೂಡದು.

Comments
Post a Comment