Posts

ಸೌಜನ್ಯ ಪ್ರಕರಣ: ಜಡ್ಜ್ ಮೇಲ್ವಿಚಾರಣೆಯಲ್ಲೇ ಮರುತನಿಖೆ ನಡೆಯಲಿ

 * ಸಂಪಾದಕೀಯ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿರುವ ಬೆನ್ನಲ್ಲೇ, ಸೌಜನ್ಯಳ ತಾಯಿ ಕುಸುಮಾವತಿ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ಮರುತನಿಖೆ ನಡೆಯಬೇಕು ಎಂದು ಒತ್ತಾಯಿಸಿರುವುದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಬೇಡಿಕೆ. ಹದಿನಾಲ್ಕು ವರ್ಷಗಳ ಬಳಿಕವೂ ತನ್ನ ಮಗಳಿಗೆ ನ್ಯಾಯ ಸಿಕ್ಕಿಲ್ಲ ಎಂಬ ನೋವಿನಲ್ಲಿರುವ ತಾಯಿಯ ಮುಂದೆ ಈಗ ಮತ್ತೊಂದು ಪೆÇಲೀಸ್ ತನಿಖೆ ನಿಲ್ಲುತ್ತಿದೆ. ಆದರೆ ಪ್ರಶ್ನೆ ಕೇವಲ ಹೊಸ ಅಧಿಕಾರಿಗಳು ತನಿಖೆ ನಡೆಸುತ್ತಾರೆಯೇ ಎಂಬುದಲ್ಲ. ಹಿಂದಿನ ತನಿಖೆಗಳ ಬಗ್ಗೆ ಎದ್ದಿರುವ ಅನುಮಾನಗಳ ನಡುವೆ ಹೊಸ ತನಿಖೆಯ ಮೇಲೆ ಸಂತ್ರಸ್ತ ಕುಟುಂಬವೂ, ಸಾರ್ವಜನಿಕರೂ ಸಂಪೂರ್ಣ ವಿಶ್ವಾಸ ಇಡಬಹುದೇ ಎಂಬುದಾಗಿದೆ. ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸುವಾಗ ಹಿಂದಿನ ತನಿಖೆಗಳಲ್ಲಿ ಗಂಭೀರ ಕೊರತೆಗಳಿದ್ದುದನ್ನು ದಾಖಲಿಸಿದೆ. ಕೆಲವು ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನು ಪಡೆಯಲಾಗಿರಲಿಲ್ಲ. ತನಿಖಾ ಸಂಸ್ಥೆಗಳಿಗೆ ಸಿಗದಿದ್ದ ಕೆಲವು ಸಾಕ್ಷಿಗಳನ್ನು ನಂತರ ಪತ್ತೆಹಚ್ಚಲು ಸಾಧ್ಯವಾಗಿರುವುದನ್ನೂ ನ್ಯಾಯಾಲಯ ಗಮನಿಸಿದೆ. ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಮಾದರಿಗಳೊಂದಿಗೆ ಹೋಲಿಕೆ ಮಾಡಲು ಸಂಬಂಧಿತ ಸಾಕ್ಷ್ಯ ಇನ್ನೂ ಲಭ್ಯವಿರುವ ಸಾಧ್ಯತೆಯನ್ನೂ ನ್ಯಾಯಾಲಯ ಗುರುತಿಸಿದೆ. ಇಂತಹ ಹಿನ್ನೆಲೆಯಲ್ಲೇ ಮತ್ತೆ ಪೆÇಲೀಸ್ ವ್ಯವಸ್ಥೆಯೊಳಗೇ ತನಿಖೆ ನಡೆಸಿದರೆ, ತ...

ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕ ಮತ್ತು ಜಾಗತಿಕ ವ್ಯವಸ್ಥೆ ಮೇಲಾದ ಹಾನಿ

 * ಬಿವಿಸೀ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವ, ನಿರ್ಧಾರಗಳು ಮತ್ತು ಭಾಷಾ ಶೈಲಿಯು ಅಮೆರಿಕದ ಒಳಗೂ ಹಾಗೂ ಜಾಗತಿಕ ಮಟ್ಟದಲ್ಲೂ ತೀವ್ರ ಕಳವಳವನ್ನು ಹುಟ್ಟುಹಾಕಿವೆ. ಅವರ ಆಡಳಿತಾವಧಿಯಲ್ಲಿ ಕೈಗೊಂಡ ಹಲವು ಕ್ರಮಗಳು ಅಮೆರಿಕದ ಪ್ರಜಾಸತ್ತಾತ್ಮಕ ತಡೆಗೋಡೆಗಳನ್ನು ಸಡಿಲಗೊಳಿಸಿ, ದೀರ್ಘಕಾಲದಿಂದ ಕಾಯ್ದುಕೊಂಡು ಬಂದಿದ್ದ ಆಡಳಿತಾತ್ಮಕ ಸ್ಥಿರತೆಯನ್ನು ಸಂಪೂರ್ಣವಾಗಿ ಅಸ್ಥಿರಗೊಳಿಸಿವೆ.  ಮುಖ್ಯವಾಗಿ, ರಾಜಕೀಯ ಲಾಭಕ್ಕಾಗಿ ದೇಶದ ಆಂತರಿಕ ಭದ್ರತೆ, ಚುನಾವಣಾ ಪ್ರಕ್ರಿಯೆಗಳು, ನ್ಯಾಯಾಂಗ ಮತ್ತು ಮುಕ್ತ ಮಾಧ್ಯಮಗಳ ಮೇಲೆ ಅವರು ನಡೆಸಿದ ನಿರಂತರ ದಾಳಿಗಳು ಅಮೆರಿಕದ ಪ್ರಜೆಗಳಲ್ಲಿ ವ್ಯವಸ್ಥೆಯ ಮೇಲಿದ್ದ ವಿಶ್ವಾಸವನ್ನು ಕುಸಿಯುವಂತೆ ಮಾಡಿವೆ. ಅವರ ಹೇಳಿಕೆಗಳು ಮತ್ತು ನಿರ್ಧಾರಗಳಲ್ಲಿ ಕಂಡುಬಂದ ಅನಿಶ್ಚಿತತೆ ಹಾಗೂ ಕ್ಷಣಿಕ ಕೋಪಾವೇಶದ ನಡವಳಿಕೆಗಳು, ಒಬ್ಬ ಅಮೆರಿಕನ್ ಅಧ್ಯಕ್ಷರಿಗೆ ಇರಬೇಕಾದ ಮಾನಸಿಕ ಸ್ಥಿರತೆ ಮತ್ತು ಗಾಂಭೀರ್ಯದ ಕೊರತೆಯನ್ನು ತೋರಿಸಿಕೊಟ್ಟವು. ಜಾಗತಿಕ ಮಟ್ಟದಲ್ಲಿಯೂ ಅವರ ಧೋರಣೆಗಳು ತೀವ್ರ ನಷ್ಟವನ್ನು ಉಂಟುಮಾಡಿವೆ. ದಶಕಗಳಿಂದ ವಿಶ್ವದಲ್ಲಿ ಶಾಂತಿ ಮತ್ತು ಸಮತೋಲನವನ್ನು ಕಾಯ್ದುಕೊಂಡು ಬಂದಿದ್ದ ಅಂತರರಾಷ್ಟ್ರೀಯ ಮೈತ್ರಿಕೂಟಗಳು ಮತ್ತು ಒಪ್ಪಂದಗಳನ್ನು ಅವರು ನಿರ್ಲಕ್ಷಿಸಿದರು. ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಏಕಪಕ್ಷೀಯವಾಗಿ ನಿರ್ಗಮಿಸಿದ್ದು, ನಾಟೋನಂತಹ ಪ್ರಮುಖ ರಕ್ಷಣಾ ಮೈತ್ರಿಕೂಟದ ಮಿತ್ರರಾಷ್ಟ್ರಗಳನ್ನು ಸಾರ್ವಜ...

ಮೋದಿ ವ್ಯಕ್ತಿಪೂಜೆ ಮತ್ತು ಬಿಜೆಪಿಯ ಚುನಾವಣಾ ಹಿನ್ನಡೆ

 ಹೇಳಲೇಬೇಕಾಗಿದ್ದು * ಬಿವಿಸೀ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸ್ವಂತ ಬಲದ ಮೇಲೆಯೇ ಸ್ಪಷ್ಟ ಬಹುಮತ ಗಳಿಸಲು ವಿಫಲವಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅತಿಯಾದ ಆತ್ಮರತಿ, ಏಕಪಕ್ಷೀಯ ಆಡಳಿತ ಶೈಲಿ ಮತ್ತು ವ್ಯಕ್ತಿಪೂಜೆಯೇ ಮುಖ್ಯ ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಪ್ರಬಲ ವಾದವಾಗಿದೆ. ಚುನಾವಣಾ ಪ್ರಚಾರದ ವೇಳೆ ತಾವು ಜೈವಿಕವಾಗಿ ಜನಿಸಿದವನಲ್ಲ, ಬದಲಿಗೆ ದೈವಿಕ ಸಂಕಲ್ಪದಿಂದ ಕಳುಹಿಸಲ್ಪಟ್ಟವನು ಎಂಬ ಮೋದಿ ಅವರ ಹೇಳಿಕೆಯು ಅವರ ಅತಿಯಾದ ಅಹಂಕಾರದ ಸಂಕೇತವಾಗಿ ಕಂಡುಬಂದಿತು. ಈ ದೈವಿಕ ಆತ್ಮರತಿಯು ಮತದಾರರಲ್ಲಿ ತೀವ್ರ ಅಸಮಾಧಾನ ಮತ್ತು ಗೊಂದಲವನ್ನು ಉಂಟುಮಾಡಿತು. ಪ್ರಚಾರದ ಪ್ರತಿಯೊಂದು ಜಾಹೀರಾತು, ಬ್ಯಾನರ್ ಮತ್ತು ಕಾರ್ಯಕ್ರಮಗಳಲ್ಲಿ ಪಕ್ಷ ಅಥವಾ ಸಂಪುಟದ ಇತರ ನಾಯಕರನ್ನು ಬದಿಗೊತ್ತಿ ಮೋದಿ ಅವರೊಬ್ಬರನ್ನೇ ಪ್ರದರ್ಶಿಸಲಾಯಿತು. ಜವಾಹರಲಾಲ್ ನೆಹರೂ ಅಥವಾ ಇಂದಿರಾ ಗಾಂಧಿಯವರ ಕಾಲದಲ್ಲಿದ್ದ `ಇಂಡಿಯಾ ಅಂದರೆ ಇಂದಿರಾ' ಮಾದರಿಯ ಧೋರಣೆಯನ್ನು ಪುನರಾವರ್ತಿಸುತ್ತಾ, `ಮೋದಿ ಅಂದರೆ ಭಾರತ' ಎಂಬ ಸಮೀಕರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಹೊಡೆತ ನೀಡಿತು. ಆಡಳಿತ ಶೈಲಿಯಲ್ಲಿಯೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸೂಕ್ತ ಗೌರವ ನೀಡದಿರುವುದು, ಪಕ್ಷದಲ್ಲಿ ತಮಗಿಂತ ಎತ್ತರಕ್ಕೆ ಬೆಳೆಯಬಹುದಾದ ನಾಯಕರನ್ನು ಹತೋಟಿಯಲ್ಲಿಡುವುದು ಮತ್ತು ಯಾ...

2029ರ ಲೋಕಸಭಾ ಚುನಾವಣೆ: ಮೋದಿ ಗೆಲುವಿನ ಹಾದಿ ಸುಲಭವೇ?

 * ಬಿವಿಸೀ 2029ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಈಗಲೇ ಚರ್ಚೆಯಲ್ಲಿದೆ. ಇದಕ್ಕೆ ಒಂದೇ ಮಾತಿನಲ್ಲಿ ಉತ್ತರ ನೀಡುವುದು ಕಷ್ಟ, ಏಕೆಂದರೆ ಅವರ ಮುಂದೆ ಅವಕಾಶಗಳು ಮತ್ತು ಸವಾಲುಗಳು ಎರಡೂ ಇವೆ. ಮೋದಿ ಅವರ ದೊಡ್ಡ ಶಕ್ತಿ ಎಂದರೆ ಅವರ ವೈಯಕ್ತಿಕ ವರ್ಚಸ್ಸು ಮತ್ತು ನಿರಂತರ ಪ್ರಚಾರ. ಕಳೆದ ಹನ್ನೆರಡು ವರ್ಷಗಳಿಂದ ಭಾರತೀಯ ಜನತಾ ಪಕ್ಷವು ಮೋದಿ ಅವರೊಬ್ಬರನ್ನೇ ದೇಶದ ಏಕೈಕ ನಾಯಕನಾಗಿ ಬಿಂಬಿಸಿದೆ. ಇದು 2014, 2019 ಮತ್ತು 2024ರಲ್ಲಿ ಸುಮಾರು ಶೇಕಡ 37ರಷ್ಟು ಮತಗಳನ್ನು ಉಳಿಸಿಕೊಳ್ಳಲು ನೆರವಾಗಿದೆ. ಆದರೆ ಇದೇ ಪಕ್ಷದ ದೊಡ್ಡ ದೌರ್ಬಲ್ಯವೂ ಹೌದು. ಎರಡನೇ ಹಂತದ ನಾಯಕತ್ವವನ್ನು ಬೆಳೆಸದ ಕಾರಣ ಪಕ್ಷ ಸಂಪೂರ್ಣವಾಗಿ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಮತ್ತೊಂದೆಡೆ, ಜನರಲ್ಲಿ ಅಸಮಾಧಾನವೂ ಹೆಚ್ಚಾಗುತ್ತಿದೆ. ಮೊದಲನೆಯದು ಹಣದುಬ್ಬರ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರನ್ನು ಕಂಗೆಡಿಸಿದೆ ಮತ್ತು ಸರ್ಕಾರ ದೊಡ್ಡ ಕೈಗಾರಿಕಾ ಮನೆತನಗಳಿಗೆ ಮಾತ್ರ ನೆರವಾಗುತ್ತಿದೆ ಎಂಬ ಭಾವನೆ ಬಲವಾಗಿದೆ. ಎರಡನೆಯದು ನಿರುದ್ಯೋಗ. 2014ರಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು, ಆದರೆ ಇಂದಿಗೂ ಕೋಟ್ಯಂತರ ಯುವಕರು ಕೆಲಸವಿಲ್ಲದೆ ಇದ್ದಾರೆ. ಮೂರನೆಯದು ಹಳೆಯ ಭರವಸೆಗಳಾದ ಕಪ್ಪುಹಣ ವಾಪಸು ತಂದು ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುವ ಮ...

ಸವಣೂರು: ಐದು ಶತಮಾನಗಳ ಬೃಹತ್ ಬಾವಾಬ್ ಮರಗಳ ನಾಡು

Image
  ಹಾವೇರಿ ಜಿಲ್ಲೆಯ ಸವಣೂರು ಪಟ್ಟಣವು ಕರ್ನಾಟಕದ ಇತಿಹಾಸ ಮತ್ತು ವಾಸ್ತುಶಿಲ್ಪದ ಜೊತೆಗೆ ಅಪರೂಪದ ನೈಸರ್ಗಿಕ ವೈಶಿಷ್ಟ್ಯವೊಂದನ್ನೂ ತನ್ನೊಳಗೆ ಕಾಪಾಡಿಕೊಂಡಿದೆ. ಆಫ್ರಿಕಾ ಮೂಲದ ಬಾವಾಬ್ ಮರಗಳು ಇಲ್ಲಿ ಶತಮಾನಗಳಿಂದ ಬೆಳೆದು ನಿಂತಿದ್ದು, ಸವಣೂರಿಗೆ ವಿಶಿಷ್ಟ ಗುರುತನ್ನು ನೀಡಿವೆ. ಸಾಮಾನ್ಯವಾಗಿ ಆಫ್ರಿಕಾ ಖಂಡದ ಒಣ ಪ್ರದೇಶಗಳೊಂದಿಗೆ ಗುರುತಿಸಿಕೊಳ್ಳುವ ಈ ಮರಗಳು ಕರ್ನಾಟಕದ ನೆಲದಲ್ಲಿ ಕಾಣಿಸಿಕೊಳ್ಳುವುದು ಕುತೂಹಲ ಮೂಡಿಸುವ ಸಂಗತಿ. ಬಾವಾಬ್ ಮರದ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅದರ ದಪ್ಪವಾದ ಕಾಂಡ. ದೂರದಿಂದ ನೋಡಿದಾಗ ಮರದ ಕೊಂಬೆಗಳಿಗೆ ಹೋಲಿಸಿದರೆ ಕಾಂಡವೇ ಅಸಾಧಾರಣವಾಗಿ ದೊಡ್ಡದಾಗಿ ಕಾಣುತ್ತದೆ. ನೀರನ್ನು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಮರಗಳು ಪ್ರತಿಕೂಲ ಹವಾಮಾನದಲ್ಲಿಯೂ ಬದುಕಬಲ್ಲವು. ದಪ್ಪ ಕಾಂಡ, ವಿಚಿತ್ರ ಆಕಾರ ಮತ್ತು ವಿಶಾಲವಾಗಿ ಹರಡುವ ಕೊಂಬೆಗಳು ಅವುಗಳಿಗೆ ವಿಶಿಷ್ಟ ರೂಪ ನೀಡುತ್ತವೆ. ವರ್ಷಗಳು ಕಳೆದಂತೆ ಮರದ ಗಾತ್ರ ಹೆಚ್ಚುತ್ತಾ ಹೋಗುವುದರಿಂದ ಅತ್ಯಂತ ಹಳೆಯ ಬಾವಾಬ್‌ಗಳು ಜೀವಂತ ಸ್ಮಾರಕಗಳಂತೆ ಕಾಣುತ್ತವೆ. ಸವಣೂರಿನ ಬಾವಾಬ್ ಮರಗಳ ಇತಿಹಾಸದ ಬಗ್ಗೆ ಸ್ಥಳೀಯವಾಗಿ ಹಲವು ಕಥೆಗಳು ಮತ್ತು ನಂಬಿಕೆಗಳು ಪ್ರಚಲಿತದಲ್ಲಿವೆ. ವ್ಯಾಪಾರಿಗಳು, ಪ್ರವಾಸಿಗರು ಮತ್ತು ಆಡಳಿತಗಾರರ ಸಂಚಾರದ ಮೂಲಕ ಇಂತಹ ವಿದೇಶಿ ಮರಗಳ ಬೀಜಗಳು ಅಥವಾ ಸಸಿಗಳು ಭಾರತಕ್ಕೆ ಬಂದಿರಬಹುದು ಎಂಬ ಅಭಿಪ್ರಾಯವಿದೆ. ಆದರೆ ಸವಣೂರಿನ ನಿರ್ದ...

ಸೌಜನ್ಯ ಪ್ರಕರಣಕ್ಕೆ ಮರುಜೀವ: 14 ವರ್ಷಗಳ ಬಳಿಕ ಸತ್ಯಕ್ಕೆ ಮತ್ತೊಂದು ಅವಕಾಶ

 * ವಿಶೇಷ ಸಂಪಾದಕೀಯ ...... ಸೌಜನ್ಯ ಪ್ರಕರಣಕ್ಕೆ ಮತ್ತೊಮ್ಮೆ ಬಾಗಿಲು ತೆರೆದಿದೆ. ಆದರೆ ಈ ಬಾರಿ ಆ ಬಾಗಿಲು ಕೇವಲ ಮತ್ತೊಂದು ತನಿಖೆಯ ಹೆಸರಿನಲ್ಲಿ ತೆರೆದು, ಮತ್ತೆ ಕಡತಗಳೊಳಗೆ ಮುಚ್ಚಿಹೋಗಬಾರದು. ಹದಿನಾಲ್ಕು ವರ್ಷಗಳ ಕಾಲ ಉತ್ತರ ಸಿಗದ ಪ್ರಶ್ನೆಗಳಿಗೆ ಈಗ ಉತ್ತರ ನೀಡಲೇಬೇಕು. ಮೂರು ತಿಂಗಳ ಗಡುವು ಮುಗಿದಾಗ ಜನರ ಮುಂದೆ ಮತ್ತೊಂದು ಕಾರಣಗಳ ಪಟ್ಟಿಯಲ್ಲ, ತನಿಖೆಯ ಸ್ಪಷ್ಟ ಫಲಿತಾಂಶ ಇರಬೇಕು. ಸಾಕ್ಷ್ಯ ಯಾರತ್ತ ಬೆರಳು ತೋರಿಸುತ್ತದೆಯೋ ಅದನ್ನು ಮುಚ್ಚಿಡದೆ ಹೇಳುವ ಧೈರ್ಯ ತನಿಖಾ ಸಂಸ್ಥೆಗೆ ಇರಬೇಕು. ಈ ಪ್ರಕರಣದಲ್ಲಿ ಇನ್ನು 'ತನಿಖೆ ನಡೆಯುತ್ತಿದೆ' ಎಂಬ ಉತ್ತರ ಸಾಕಾಗುವುದಿಲ್ಲ. ಹದಿನಾಲ್ಕು ವರ್ಷಗಳ ವಿಳಂಬದ ನಂತರ ಸತ್ಯವನ್ನು ಮತ್ತೆ ಮುಂದೂಡುವ ಅವಕಾಶವೂ ಇಲ್ಲ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ನೆಪವೂ ಇರಬಾರದು. ತನಿಖೆ ವಿಫಲವಾದರೆ ಅದು ಕೇವಲ ಒಂದು ಪ್ರಕರಣದ ವಿಫಲತೆಯಾಗುವುದಿಲ್ಲ - ನ್ಯಾಯಕ್ಕಾಗಿ ಕಾಯುತ್ತಿರುವ ಕುಟುಂಬದ ವಿಶ್ವಾಸದ ಮೇಲಿನ ಮತ್ತೊಂದು ಹೊಡೆತವಾಗುತ್ತದೆ. ಸೌಜನ್ಯಗೆ ಮರಳಿ ಬರುವ ಅವಕಾಶವಿಲ್ಲ. ಆದರೆ ಆಕೆಯ ಸಾವಿನ ಸತ್ಯವನ್ನು ಹುಡುಕುವ ಅವಕಾಶ ಇನ್ನೂ ಇದೆ. ಆ ಅವಕಾಶವನ್ನು ಈ ಬಾರಿ ಕಳೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಹದಿನಾಲ್ಕು ವರ್ಷಗಳ ಮೌನಕ್ಕೆ ಮತ್ತೊಂದು ವರ್ಷ, ಮತ್ತೊಂದು ನೆಪ, ಮತ್ತೊಂದು ಮುಚ್ಚಿದ ಕಡತ - ಇನ್ನು ಒಪ್ಪಲಾಗದು. ಈ ಬಾರಿ ತನಿಖೆ ಮುಗಿಯಬೇಕು. ಸತ್ಯ ಹೊರಬರಬೇಕು. ತಪ್ಪಿತಸ್ಥ...

ಪ್ರವಾಸೋದ್ಯಮದ ಹೆಸರಿನಲ್ಲಿ ಕರಾವಳಿ-ಮಲೆನಾಡಿನ ಪ್ರಕೃತಿಗೆ ಬೆಲೆ ತೆರಬೇಕೇ?

Image
 ಎಚ್ಚರ ಲೇಸು * ಬಿವಿಸೀ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026 ಈ ಭಾಗದ ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಕಡಲತೀರಗಳು, ದ್ವೀಪಗಳು, ಜಲಮಾರ್ಗಗಳು, ಜಲಪಾತಗಳು, ಕಾಡುಗಳು ಮತ್ತು ಐತಿಹಾಸಿಕ ತಾಣಗಳನ್ನು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಸ್ವಾಗತಾರ್ಹ. ಆದರೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವುದೇ ಯಶಸ್ಸಿನ ಏಕೈಕ ಮಾನದಂಡವಾದರೆ, ಅದರ ಬೆಲೆ ಪ್ರಕೃತಿಯೇ ತೆರಬೇಕಾಗುತ್ತದೆ. ಈಗಾಗಲೇ ಕರಾವಳಿಯಲ್ಲಿ ಕಡಲತೀರಗಳ ಮೇಲೆ ಒತ್ತಡ, ತ್ಯಾಜ್ಯ ನಿರ್ವಹಣೆಯ ಕೊರತೆ, ನೀರಿನ ಸಮಸ್ಯೆ, ಸಂಚಾರ ದಟ್ಟಣೆ ಮತ್ತು ಸಿಆರ್‍ಝಡ್ ನಿಯಮಗಳ ಉಲ್ಲಂಘನೆಯಂತಹ ಆತಂಕಗಳಿವೆ. ಮಲೆನಾಡಿನಲ್ಲಿ ಪರಿಸ್ಥಿತಿ ಇನ್ನೂ ಸೂಕ್ಷ್ಮ. ಕಾಡು, ಜಲಪಾತ, ನದಿ, ಗುಡ್ಡ ಮತ್ತು ವನ್ಯಜೀವಿ ಪ್ರದೇಶಗಳಿಗೆ ಹೆಚ್ಚುತ್ತಿರುವ ಪ್ರವಾಸಿಗರ ಒತ್ತಡವನ್ನು ನಿಯಂತ್ರಿಸದಿದ್ದರೆ ಪ್ರವಾಸೋದ್ಯಮವೇ ಪರಿಸರ ಹಾನಿಗೆ ಕಾರಣವಾಗಬಹುದು. ವಿಶೇಷವಾಗಿ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನಪ್ರಿಯ ತಾಣಗಳ ಸ್ಥಿತಿ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿದೆ. ವಾಹನಗಳ ದಟ್ಟಣೆ, ಪ್ಲಾಸ್ಟಿಕ್ ತ್ಯಾಜ್ಯ, ಅಕ್ರಮ ಪಾಕಿರ್ಂಗ್, ಶಬ್ದ ಮಾಲಿನ್ಯ ಮತ್ತು ನದಿಗಳಲ್ಲಿ ಪ್ರವಾಸಿಗರ ಅಸಡ್ಡೆಯ ವರ್ತನೆಗಳು ಪರಿಸರದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಕೆಲವು ಜಲಪಾತಗಳು ಮತ್ತು ಕಾಡು ಪ್ರದೇಶಗಳಿಗೆ ಪ್ರವಾಸಿಗರ ನಿಯಂತ್ರಣ ಅಗತ್ಯವಾಗಿರುವುದೂ ಇದೇ ಕಾರಣಕ್ಕೆ. ಆದ್ದರಿಂದ ...