Posts

ರಾಮಕೃಷ್ಣ ಹೆಗಡೆ: ಇಂದು ರಾಜಕಾರಣಕ್ಕೆ ಕಾಣೆಯಾಗಿರುವ ಒಂದು ಮಾನದಂಡ

ಇಂದು ನಾಡು ಕಂಡ ಧೀಮಂತ ಮತ್ತು ಜನಪರ ಐತಿಹಾಸಿಕ ವ್ಯಕ್ತಿ ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ. ತನ್ನಿಮಿತ್ತ ಈ ಲೇಖನ * ಬಿವಿಸೀ ಕರ್ನಾಟಕದ ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಎಂಬ ಹೆಸರು ಕೇವಲ ಒಬ್ಬ ಮಾಜಿ ಮುಖ್ಯಮಂತ್ರಿಯ ಹೆಸರಲ್ಲ. ಅದು ಒಂದು ರಾಜಕೀಯ ಸಂಸ್ಕøತಿಯ ಹೆಸರು. ಅಧಿಕಾರವೆಂದರೆ ಆಳುವ ಹಕ್ಕಲ್ಲ, ಜನರಿಗೆ ಉತ್ತರಿಸಬೇಕಾದ ಹೊಣೆಗಾರಿಕೆ ಎಂಬ ನಂಬಿಕೆಯ ಹೆಸರು. ಭಿನ್ನಾಭಿಪ್ರಾಯವನ್ನು ಶತ್ರುತ್ವವೆಂದು ಪರಿಗಣಿಸದೆ ಸಂವಾದಕ್ಕೆ ಅವಕಾಶ ನೀಡುವ ಪ್ರಜಾಪ್ರಭುತ್ವದ ಮನೋಭಾವದ ಹೆಸರು. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಿರುವುದು ಈ ಕಾರಣಕ್ಕಾಗಿಯೇ ಮಹತ್ವದ್ದಾಗಿದೆ. ಹೆಗಡೆಯವರ ರಾಜಕೀಯ ಬದುಕಿನ ದೊಡ್ಡ ವೈಶಿಷ್ಟ್ಯ ಅಧಿಕಾರ ವಿಕೇಂದ್ರೀಕರಣದ ಮೇಲಿದ್ದ ನಂಬಿಕೆ. ಆಡಳಿತದ ಅಧಿಕಾರ ಕೆಲವರ ಕೈಯಲ್ಲಿ ಮಾತ್ರ ಕೇಂದ್ರೀಕೃತವಾಗಿರಬಾರದು; ಗ್ರಾಮೀಣ ಜನರೂ ತಮ್ಮ ಬದುಕಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಆಲೋಚನೆಗೆ ಅವರು ರಾಜಕೀಯ ಬಲ ನೀಡಿದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಆಡಳಿತವನ್ನು ಜನರ ಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಇಂದು ಸ್ಥಳೀಯ ಸಂಸ್ಥೆಗಳು ರಾಜಕೀಯ ಲೆಕ್ಕಾಚಾರಗಳ ವೇದಿಕೆಯಾಗುತ್ತಿರುವಾಗ, ಅವುಗಳನ್ನು ಜನರ ನೇರ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವದ ಸಂಸ್ಥೆಗಳನ್ನಾಗಿ ರೂಪಿಸುವ ಹೆಗಡೆಯವರ ಆಶಯ ನೆನಪಾಗುತ್ತದೆ. ಹೆಗಡೆಯವರು ಹೊಸ ಆಲೋಚನೆಗಳನ್ನು...

ಯುವ ಮೋರ್ಚಾದಿಂದ ಹೊರಗೆ: ತೇಜಸ್ವಿ ಸೂರ್ಯಗೆ ಮೋದಿ-ಶಾ ವಲಯದಲ್ಲಿ ಬಾಗಿಲು ಮುಚ್ಚಿತೇ?

 * ಬಿವಿಸೀ ತೇಜಸ್ವಿ ಸೂರ್ಯ ಅವರನ್ನು ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಇತ್ತೀಚೆಗೆ ತೆಗೆದುಹಾಕಲಾಗಿದೆ. 2020ರಿಂದ ಸುಮಾರು ಆರು ವರ್ಷ ಈ ಹುದ್ದೆಯಲ್ಲಿದ್ದ ಅವರು, ಬಿಜೆಪಿಯ ಅತ್ಯಂತ ಪರಿಚಿತ ಯುವ ಮುಖಗಳಲ್ಲಿ ಒಬ್ಬರಾಗಿದ್ದರು. ಆದರೆ ಹೊಸ ರಾಷ್ಟ್ರೀಯ ತಂಡದಲ್ಲಿ ಅವರಿಗೆ ಯಾವುದೇ ಪರ್ಯಾಯ ಸಂಘಟನಾ ಜವಾಬ್ದಾರಿಯನ್ನೂ ನೀಡಲಾಗಿಲ್ಲ. ಇದೇ ಈಗ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2019ರಲ್ಲಿ ಕೇವಲ 28ನೇ ವಯಸ್ಸಿನಲ್ಲಿ ಬೆಂಗಳೂರು ದಕ್ಷಿಣದಿಂದ ಲೋಕಸಭೆಗೆ ಆಯ್ಕೆಯಾದ ಸೂರ್ಯ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಾಯಕತ್ವದ ಬಿಜೆಪಿಯ ಹೊಸ ತಲೆಮಾರಿನ ಮುಖವಾಗಿ ವೇಗವಾಗಿ ಬೆಳೆದರು. ಅವರ ಆಕ್ರಮಣಕಾರಿ ಭಾಷಣಶೈಲಿ, ವಾಕ್ಚಾತುರ್ಯ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ಚಟುವಟಿಕೆಗಳು ಅವರನ್ನು ರಾಷ್ಟ್ರಮಟ್ಟದಲ್ಲಿ ಪರಿಚಿತರನ್ನಾಗಿಸಿದವು. 2024ರಲ್ಲೂ ಅವರು ಬೆಂಗಳೂರು ದಕ್ಷಿಣದಿಂದ ಭರ್ಜರಿ ಜಯ ಸಾಧಿಸಿ ಎರಡನೇ ಬಾರಿ ಸಂಸದರಾದರು. ಹೀಗಾಗಿ ಅವರ ಸೋಲು ಅಥವಾ ಜನಪ್ರಿಯತೆಯ ಕುಸಿತವೇ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲು ಕಾರಣವೆಂದು ಹೇಳಲು ಆಧಾರವಿಲ್ಲ. ಹಾಗಿದ್ದರೆ ಪ್ರಶ್ನೆ ಬೇರೆಡೆ ಇದೆ. ಬಿಜೆಪಿಯಲ್ಲಿ ಒಂದು ರಾಷ್ಟ್ರೀಯ ಹುದ್ದೆ ಕಳೆದುಕೊಂಡವರಿಗೆ ಮತ್ತೊಂದು ಜವಾಬ್ದಾರಿ ನೀಡುವುದು ಸಾಮಾನ್ಯ. ಆದರೆ ಸೂರ್ಯ ಅವರಿಗೆ ಅಂತಹ ಪುನರ್ವಸತಿ ನಡೆದಿಲ್ಲ. ಇದೇ ಸಂಗತಿ ಅವರ ರಾಜಕೀಯ...

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

 * ಬಿವಿಸೀ ಒಂದೇ ಕಾಲದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿದ್ದ ಅವಿಭಜಿತ ದಕ್ಷಿಣ ಕನ್ನಡ ಇಂದು ವಿಚಿತ್ರವಾದ ಭಯದ ವಾತಾವರಣವನ್ನು ಎದುರಿಸುತ್ತಿದೆ. ಕೊಲೆಗಳು ನಡೆಯುತ್ತಿವೆ; ಮತ್ತೊಂದು ಕೊಲೆಯ ಸುದ್ದಿ ಬರುವಷ್ಟರಲ್ಲಿ ಹಿಂದಿನ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿರುವುದಿಲ್ಲ. ಇವುಗಳಲ್ಲಿ ಕೆಲವು ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಮತ್ತು ಅಪರಾಧ ಜಾಲಗಳಿಗೆ ಸಂಬಂಧಿಸಿದ್ದರೆ, ಮತ್ತೆ ಕೆಲವು ಕೋಮು ವೈಷಮ್ಯದ ಪ್ರತೀಕಾರದ ಸರಪಳಿಯ ಭಾಗವಾಗಿವೆ. ಅವಿರತ ಕೊಲೆಗಳಿಂದಾಗಿ ಅವಳಿ ಜಿಲ್ಲೆಗಳು ರಾಜ್ಯದ ಕ್ರೈಂ ಕ್ಯಾಪಿಟಲ್ ಎನ್ನುವ ಅಪಖ್ಯಾತಿ ಗಳಿಸಿವೆ. ಈ ಎರಡೂ ಪ್ರವೃತ್ತಿಗಳು ಕರಾವಳಿಯ ಶಾಂತಿಪ್ರಿಯ ಜನರನ್ನು ಆತಂಕಕ್ಕೆ ದೂಡಿವೆ. ಇತ್ತೀಚಿನ ಉಡುಪಿ ಜಿಲ್ಲೆಯ ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ ಅವರ ಹತ್ಯೆ ಈ ಆತಂಕವನ್ನು ಮತ್ತಷ್ಟು ಗಾಢಗೊಳಿಸಿದೆ. ಆಗಸ್ಟ್ ಏಳರಂದು ಅವರು ಚರ್ಚ್ ಸಮೀಪವೇ ಗುಂಡಿನ ದಾಳಿಗೆ ಬಲಿಯಾದರು. ಆರಂಭಿಕ ತನಿಖೆಯಲ್ಲಿ ಹಣಕಾಸಿನ ವಿವಾದದ ಸುಳಿವು ಸಿಕ್ಕಿತ್ತು. ನಂತರ ಪೆÇಲೀಸರು ಬಹುಕೋಟಿ ರೂಪಾಯಿಗಳ ಗುತ್ತಿಗೆ ವಿವಾದ ಮತ್ತು ಅಪರಾಧ ಜಾಲದ ಸಂಪರ್ಕದ ಸಾಧ್ಯತೆಯನ್ನೂ ಪರಿಶೀಲಿಸುತ್ತಿದ್ದಾರೆ. ಮುಂಬೈ ಮೂಲದ ಅಪರಾಧಿಯ ಬಂಧನವೂ ಪ್ರಕರಣಕ್ಕೆ ಮತ್ತಷ್ಟು ಗಂಭೀರ ಆಯಾಮ ನೀಡಿದೆ. ಇದು ಕೇವಲ ಒಂದು ಪ್ರತ್ಯೇಕ ಘಟನೆ ಎಂದು ಹೇಳಿ ಕೈತೊ...

ಯಶ್‍ನ `ಟಾಕ್ಸಿಕ್': ಕನ್ನಡದ ನೆಲೆಯಿಂದ ವಿಶ್ವದ ಪರದೆಗೆ

 ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗ್ಗೆ ದೇಶದಾದ್ಯಂತ ಇಷ್ಟೊಂದು ಚರ್ಚೆಯಾಗುತ್ತಿರುವುದು ಕೇವಲ ಒಬ್ಬ ಜನಪ್ರಿಯ ನಟನ ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಕಾರಣಕ್ಕೆ ಅಲ್ಲ. `ಕೆಜಿಎಫ್' ಸರಣಿಯ ನಂತರ ಯಶ್ ಮರಳುತ್ತಿರುವುದು ಒಂದು ಕಾರಣವಾದರೆ, ಕನ್ನಡ ಚಿತ್ರರಂಗದಲ್ಲಿ ಬೆಳೆದ ನಟನೊಬ್ಬ ಈಗ ಭಾರತೀಯ ಚಿತ್ರರಂಗದ ಪ್ರಮುಖ ತಾರೆಯಾಗಿ, ವಿಶ್ವ ಮಾರುಕಟ್ಟೆಯನ್ನೂ ಗುರಿಯಾಗಿಸಿಕೊಂಡಿರುವುದು ಮತ್ತೊಂದು ಕಾರಣ. ಟಾಕ್ಸಿಕ್ ಆ ಪ್ರಯಾಣದ ಮತ್ತೊಂದು ಮಹತ್ವದ ಹೆಜ್ಜೆ. ಗೀತು ಮೋಹನ್‍ದಾಸ್ ನಿರ್ದೇಶನದ ಈ ಚಿತ್ರ ಅಪರಾಧ ಜಗತ್ತಿನ ಹಿನ್ನೆಲೆಯ ಕಥೆ. ಗೋವಾದ ಕತ್ತಲೆಯ ಲೋಕ, ಅಧಿಕಾರ, ಹಣ, ದ್ರೋಹ, ಹಿಂಸೆ ಮತ್ತು ಮಾದಕವಸ್ತುಗಳ ಜಾಲದ ಸುತ್ತ ಕಥೆ ಹೆಣೆದಿದೆ. ಸ್ವಾತಂತ್ರ್ಯಾನಂತರದ ಗೋವಾದ ಹಿನ್ನೆಲೆಯನ್ನೂ ಕಥೆ ಬಳಸಿಕೊಂಡಿದ್ದು, ರಾಯ ಎಂಬ ಪಾತ್ರದ ಮೂಲಕ ಅಪರಾಧ ಜಗತ್ತಿನ ಸಂಕೀರ್ಣ ಮುಖವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ ಟಾಕ್ಸಿಕ್ ಕೇವಲ ಸಾಹಸಮಯ ಮನರಂಜನೆಯಲ್ಲ; ಕಥೆ ಮತ್ತು ಪಾತ್ರಗಳ ಮನೋವೈಜ್ಞಾನಿಕ ಆಯಾಮಕ್ಕೂ ಒತ್ತು ನೀಡಿರುವ ಚಿತ್ರ ಎಂಬ ನಿರೀಕ್ಷೆ ಇದೆ. ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಹೆಚ್ಚಿಸಿದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರಂತಹ ತಾರೆಯರ ಉಪಸ್ಥಿತಿಯೂ ಚಿತ್ರದ ವ್ಯಾಪ್ತಿಯನ್ನು ತೋರಿಸುತ್ತದೆ. ಯಶ್ ನಟನಷ್ಟೇ ಅಲ್...

ಅಖಂಡ ಭಾರತದ ಬೋಧಕನಾಗಿದ್ದ ಆರೆಸ್ಸೆಸ್ ಪಾಕಿಸ್ತಾನದ ವಕೀಲನಾಗಿ ಮಾರ್ಪಟ್ಟಿದ್ದು ಹೇಗೆ?

 ಅಭಿಮತ * ಬಿವಿಸೀ ಅಖಂಡ ಭಾರತದ ಹೆಸರಿನಲ್ಲಿ ದಶಕಗಳ ಕಾಲ ದೇಶದ ಜನರ ಭಾವನೆಗಳನ್ನು ಕೆರಳಿಸುತ್ತ ಬಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಂದಿನ ನಿಲುವು ನೋಡಿದರೆ ಒಂದು ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ. ನಿನ್ನೆ ಪಾಕಿಸ್ತಾನವನ್ನು ಭಾರತದ ವಿಭಜನೆಯ ಸಂಕೇತವೆಂದು ಖಂಡಿಸಿದ್ದ ಸಂಘಕ್ಕೆ ಇಂದು ಅದೇ ಪಾಕಿಸ್ತಾನದೊಂದಿಗೆ ಮಾತುಕತೆಯ ಬಾಗಿಲು ತೆರೆದಿಡಬೇಕೆಂಬ ಹಠ ಏಕೆ? ಪಾಕಿಸ್ತಾನ ಭಾರತದ ವಿರುದ್ಧ ಸಂಚು ರೂಪಿಸುತ್ತಲೇ ಇದೆ ಎಂದು ಹೇಳಿಕೊಂಡು ಬಂದ ಸಂಘವೇ ಈಗ ಸಂವಾದದ ಪರವಾಗಿ ವಕಾಲತ್ತು ವಹಿಸುವ ಮಟ್ಟಕ್ಕೆ ಏಕೆ ಇಳಿದಿದೆ? ಇದು ಕೇವಲ ನಿಲುವಿನ ಬದಲಾವಣೆಯಲ್ಲ. ಇದು ಸಂಘದ ಸೈದ್ಧಾಂತಿಕ ಸ್ಥಿರತೆಯ ಮೇಲೆಯೇ ಪ್ರಶ್ನೆ ಎಬ್ಬಿಸುವ ದ್ವಂದ್ವ ನೀತಿ. ಬಿಜೆಪಿ ವರಿಷ್ಠರಾಗಿದ್ದ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಪಾಕಿಸ್ತಾನಕ್ಕೆ ತೆರಳಿ ಮೊಹಮ್ಮದ್ ಅಲಿ ಜಿನ್ನಾರನ್ನು ಶ್ಲಾಘಿಸಿ, ಅವರನ್ನು `ಮಹಾ ಪ್ರಜಾಪ್ರಭುತ್ವವಾದಿ' ಎಂದು ಬಣ್ಣಿಸಿದಾಗ ಸಂಘ ಎಂತಹ ಆಕ್ರೋಶ ವ್ಯಕ್ತಪಡಿಸಿತ್ತು ಎಂಬುದನ್ನು ದೇಶ ಮರೆತಿಲ್ಲ. ಜಿನ್ನಾ ಎಂಬ ಹೆಸರೇ ಸಂಘದ ರಾಜಕೀಯ ವಲಯದಲ್ಲಿ ವಿಭಜನೆಯ ಪ್ರತೀಕವಾಗಿದ್ದ ಸಂದರ್ಭದಲ್ಲಿ, ಅಡ್ವಾಣಿಯ ಹೇಳಿಕೆ ಸಂಘಕ್ಕೆ ಅಷ್ಟು ಅಸಹನೀಯವಾಗಿತ್ತು. ಅದರ ಪರಿಣಾಮವಾಗಿ ಅಡ್ವಾಣಿ ಬಿಜೆಪಿಯ ಅತ್ಯುನ್ನತ ರಾಜಕೀಯ ಸ್ಥಾನದಿಂದ ಬದಿಗೆ ಸರಿಯುವಂತಾಯಿತು. ನಂತರ ನರೇಂದ್ರ ಮೋದಿ ಅವರ ಉದಯಕ್ಕೆ ದಾರಿ ಸುಗಮವಾಯಿತು. ಅಂದು ಜಿನ್ನಾರನ್ನು ಹೊಗ...

ಬಳಕೆಯಾಗದೆ ಉಳಿದ ಹಣ ಆಡಳಿತದ ವೈಫಲ್ಯದ ಕನ್ನಡಿ

 ಕೊಳೆತ ವ್ಯವಸ್ಥೆ * ಬಿವಿಸೀ ಸರ್ಕಾರವು ಜನರ ಕಲ್ಯಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡುತ್ತದೆ. ಬಜೆಟ್‍ನಲ್ಲಿ ದೊಡ್ಡ ಮೊತ್ತ ಘೋಷಿಸಲಾಗುತ್ತದೆ. ಹೊಸ ಯೋಜನೆಗಳು ಪ್ರಕಟವಾಗುತ್ತವೆ. ಅಭಿವೃದ್ಧಿಯ ಭರವಸೆಗಳನ್ನು ನೀಡಲಾಗುತ್ತದೆ. ಆದರೆ ಆ ಹಣ ನಿಜವಾಗಿ ಜನರಿಗೆ ತಲುಪುತ್ತಿದೆಯೇ ಎಂಬ ಪ್ರಶ್ನೆ ಎದುರಾದಾಗ ಆಡಳಿತದ ನಿಜವಾದ ಚಿತ್ರಣ ಹೊರಬರುತ್ತದೆ. ವಿವಿಧ ಯೋಜನೆಗಳಿಗೆ ಮೀಸಲಿಟ್ಟ ಹಣದ ದೊಡ್ಡ ಮೊತ್ತ ಬಳಕೆಯಾಗದೆ ಉಳಿದಿರುವುದು ಸರ್ಕಾರದ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹಣ ಮೀಸಲಿಡುವುದು ಸುಲಭ. ಅದನ್ನು ಪರಿಣಾಮಕಾರಿಯಾಗಿ ಬಳಸುವುದು ಕಷ್ಟ. ಯೋಜನೆ ಘೋಷಿಸಿದ ನಂತರ ಭೂಮಿ, ಅನುಮತಿ, ಗುತ್ತಿಗೆ, ತಾಂತ್ರಿಕ ಅನುಮೋದನೆ, ಇಲಾಖೆಗಳ ನಡುವಿನ ಸಮನ್ವಯ ಸೇರಿದಂತೆ ಹಲವು ಹಂತಗಳನ್ನು ದಾಟಬೇಕಾಗುತ್ತದೆ. ಈ ಪ್ರಕ್ರಿಯೆಗಳಲ್ಲಿ ವಿಳಂಬವಾದರೆ ಹಣ ಖರ್ಚಾಗುವುದಿಲ್ಲ. ಆದರೆ ಇಂತಹ ಆಡಳಿತಾತ್ಮಕ ಅಡಚಣೆಗಳನ್ನು ವರ್ಷದಿಂದ ವರ್ಷಕ್ಕೆ ಮುಂದುವರಿಯಲು ಬಿಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಬಳಕೆಯಾಗದೆ ಉಳಿದ ಹಣದ ಇನ್ನೊಂದು ಮುಖವೂ ಇದೆ. ಒಂದೆಡೆ ಸರ್ಕಾರಕ್ಕೆ ಸಂಪನ್ಮೂಲಗಳ ಕೊರತೆಯಿದೆ ಎಂದು ಹೇಳಲಾಗುತ್ತದೆ. ಶಾಲೆಗಳಿಗೆ ಕಟ್ಟಡಗಳಿಲ್ಲ, ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳಿಲ್ಲ, ರಸ್ತೆಗಳು ಹದಗೆಟ್ಟಿವೆ, ಕುಡಿಯುವ ನೀರಿನ ಯೋಜನೆಗಳು ಅಪೂರ್ಣವಾಗಿವೆ ಎಂದು ಜನರು ದೂರುತ್ತಾರೆ. ಮತ್ತೊಂದೆಡೆ, ...

ಮಂಗಳೂರನ್ನು ಮೈಸೂರು ರೈಲ್ವೇ ವಿಭಾಗಕ್ಕೆ ಸೇರಿಸುವುದನ್ನೇ ವಿರೋಧಿಸುವ ಕಾಂಗ್ರೆಸ್, ಕಮ್ಯುನಿಸ್ಟರ ರಾಜಕಾರಣ ಏನು?

 ಮಂಗಳೂರು ಅದೇ ರಾಜ್ಯದ ಮೈಸೂರು ವಿಭಾಗಕ್ಕೆ ಸೇರಿದರೆ ಕಾಂಗ್ರೆಸ್‍ಗೆ ನಷ್ಟವೇನು? ಅವಿವೇಕಿಗಳಿವರು * ಬಿವಿಸೀ ಮಂಗಳೂರಿನ ರೈಲ್ವೆ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಪಾಲಕ್ಕಾಡು ವಿಭಾಗದಿಂದ ತೆಗೆದು ಮೈಸೂರು ವಿಭಾಗಕ್ಕೆ ಸೇರಿಸುವ ರೈಲ್ವೆ ಸಚಿವಾಲಯದ ನಿರ್ಧಾರವನ್ನು ಕೇರಳದ ಜನತೆ ವಿರೋಧಿಸುತ್ತಿದ್ದಾರೆ ಎಂದು ಬಿಂಬಿಸುವುದು ತಪ್ಪು. ಕೇರಳದ ಸಾಮಾನ್ಯ ಜನರ ವಿರುದ್ಧ ಯಾವುದೇ ಆಕ್ಷೇಪವಿಲ್ಲ. ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಮುಖ್ಯವಾಗಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರು. ಹೀಗಾಗಿ ಈ ವಿಚಾರವನ್ನು ಕೇರಳ ಮತ್ತು ಕರ್ನಾಟಕದ ನಡುವಿನ ಸಂಘರ್ಷವೆಂದು ನೋಡುವ ಬದಲು, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಸಂಕುಚಿತ ರಾಜಕಾರಣವೆಂದು ನೋಡಬೇಕು. ಇಲ್ಲಿ ಕಾಂಗ್ರೆಸ್‍ನ ನಿಲುವು ಇನ್ನಷ್ಟು ಅಚ್ಚರಿಯದ್ದಾಗಿದೆ. ಕಾಂಗ್ರೆಸ್ ಕರ್ನಾಟಕದಲ್ಲೂ ಅಧಿಕಾರದಲ್ಲಿದೆ, ಕೇರಳದಲ್ಲೂ ಅಧಿಕಾರದಲ್ಲಿದೆ. ಎರಡೂ ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವ ಒಂದೇ ರಾಷ್ಟ್ರೀಯ ಪಕ್ಷಕ್ಕೆ ಮಂಗಳೂರಿನ ರೈಲ್ವೆ ಆಡಳಿತವನ್ನು ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರಿಸುವುದರಲ್ಲಿ ಏನು ತೊಂದರೆ? ಕರ್ನಾಟಕದ ಮಂಗಳೂರು ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರಿದರೆ ಕಾಂಗ್ರೆಸ್‍ಗೆ ನಷ್ಟವೇನು? ಬದಲಾಗಿ, ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಈ ಬದಲಾವಣೆಯನ್...